ಹೊಸಕೋಟೆ(ಬೆಂ.ಗ್ರಾ): ಇಲ್ಲಿನ ವೇದಿಕೆಯೊಂದರಲ್ಲಿ ಶಾಸಕ ಶರತ್ ಬಚ್ಚೇಗೌಡ ಮತ್ತು ಸಚಿವ ಎಂಟಿಬಿ ನಾಗರಾಜ್ ನಡುವೆ ವಾಕ್ ಸಮರ ಜೋರಾಗಿ ನಡೆದಿದೆ. ತಾಲೂಕಿನ ಮುತ್ಸಂದ್ರದಲ್ಲಿ 'ಜಿಲ್ಲಾಧಿಕಾರಿಗಳ ನಡೆ ಹಳ್ಳಿಕಡೆ' ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಕಾರ್ಯಕ್ರಮಕ್ಕೆ ಸಚಿವ ಎಂಟಿಬಿ ನಾಗರಾಜ್ ಹಾಗೂ ಶಾಸಕ ಶರತ್ ಬಚ್ಚೇಗೌಡ ಇಬ್ಬರು ಭಾಗವಹಿಸಿದ್ದರು.
ವೇದಿಕೆಯಲ್ಲಿ ಜನರ ಕುರಿತು ಮೊದಲು ಎಂಟಿಬಿ ಮಾತನಾಡಿದ್ದರು. ಭಾಷಣ ಮುಗಿಯುತ್ತಿದ್ದಂತೆ ವೇದಿಕೆಯಿಂದ ಹೊರಡುತ್ತಿದ್ದ ಎಂಟಿಬಿ ಅವರನ್ನು ಶಾಸಕ ಶರತ್ ಸರಿಯಾಗಿ ತರಾಟೆಗೆ ತೆಗೆದುಕೊಂಡರು. ಭಾಷಣ ಮಾಡಲು ಮುಂದಾದ ಶಾಸಕ ಶರತ್ ಬಚ್ಚೇಗೌಡ, ನಾನು ಹೊಸಕೋಟೆ ಸಮಸ್ಯೆಗಳನ್ನು ಹೇಳುತ್ತೇನೆ ಕೇಳಿಸಿಕೊಂಡು ಹೋಗಿ. ಸಮಸ್ಯೆಗಳ ಪಟ್ಟಿಯನ್ನು ಓದುತ್ತೇನೆ ಕೇಳಿಸಿಕೊಂಡು ಸಿಎಂ ಸಭೆಯಲ್ಲಿಟ್ಟು ಪರಿಹರಿಸಿ ಅಂತಾ ಎಂಟಿಬಿಗೆ ವೇದಿಕೆಯಲ್ಲೇ ಟಾಂಗ್ ಕೊಟ್ಟರು.
ಜೊತೆಗೆ ಕಾರ್ಯಕ್ರಮಕ್ಕೆ ಬಂದಿದ್ದ ಜನರ ಬಳಿ, ಏನಪ್ಪ ನಾವು ಸಮಸ್ಯೆ ಹೇಳಿಕೊಳ್ಳಬಾರದೇ? ಸಿಎಂ ಹತ್ರ ಇವರು ಕೆಲಸ ಮಾಡಿಸಲಿ ಎಂದು ಜನರನ್ನು ರೊಚ್ಚಿಗೆಬ್ಬಿಸಿದರು. ಈ ವೇಳೆ, ಮತ್ತೊಂದು ಮೈಕ್ನಲ್ಲಿ, ಸಮಸ್ಯೆಗಳ ಪಟ್ಟಿಕೊಡಿ ನಾನು ಸಿಎಂ ಬಳಿ ಚರ್ಚೆ ಮಾಡುತ್ತೇನೆ ಎಂದ ಸಚಿವ ಎಂಟಿಬಿ ನಾಗರಾಜ್ ವೇದಿಕೆಯಿಂದ ನಿರ್ಗಮಿಸಿದರು.
ಇದನ್ನೂ ಓದಿ: ಪಕ್ಷ ಬೆಳೆಸಿದವರನ್ನೇ ಹೊರ ಹಾಕುವುದು ಬಿಜೆಪಿ ಸಂಸ್ಕೃತಿ : ಶಿವರಾಜ ತಂಗಡಗಿ