ETV Bharat / state

ದಾಬಸ್ ಪೇಟೆಯ ಸರ್ಕಾರಿ ಅನುದಾನಿತ ಪ್ರೌಢಶಾಲೆಗೆ ಶಿಕ್ಷಣ ಸಚಿವರ ದಿಢೀರ್ ಭೇಟಿ - ಶಿಕ್ಷಣ ಸಚಿವ ಸುರೇಶ್  ಕುಮಾರ್

ಸರ್ಕಾರಿ ಅನುದಾನಿತ  ಸಿ.ವಿ.ಜಿ. ಪ್ರೌಢಶಾಲೆ ಒಡೆತನದ ಏಳು ಎಕರೆ ಜಮೀನು ವಿವಾದ ಹಿನ್ನಲೆ ಕನ್ನಡ ಶಾಲೆ ಮುಚ್ಚುವ ಆತಂಕದಲ್ಲಿತ್ತು. ಈ ಹಿನ್ನೆಲೆ ಸಚಿವರು ದಿಢೀರ್ ಭೇಟಿ ನೀಡಿ ಶಾಲಾ ಆಡಳಿತ ಮಂಡಳಿಯೊಂದಿಗೆ ಮಾತುಕತೆ ನಡೆಸಿದರು.

suresh kumar
suresh kumar
author img

By

Published : Sep 2, 2020, 7:58 PM IST

ನೆಲಮಂಗಲ (ಬೆಂ.ಗ್ರಾ): ತಾಲೂಕಿನ ದಾಬಸ್​ ಪೇಟೆಯ ಸಿ.ವಿ.ಜಿ. ಪ್ರೌಢಶಾಲೆಗೆ ಶಿಕ್ಷಣ ಸಚಿವ ಸುರೇಶ್ ಕುಮಾರ್ ದಿಢೀರ್ ಭೇಟಿ ನೀಡುವ ಮೂಲಕ ಅಚ್ಚರಿ ಮೂಡಿಸಿದರು.

ಸರ್ಕಾರಿ ಅನುದಾನಿತ ಸಿ.ವಿ.ಜಿ. ಪ್ರೌಢಶಾಲೆ ಒಡೆತನದ ಏಳು ಎಕರೆ ಜಮೀನು ವಿವಾದ ಹಿನ್ನಲೆ ಕನ್ನಡ ಶಾಲೆ ಮುಚ್ಚುವ ಆತಂಕದಲ್ಲಿತ್ತು. ಶಾಲೆ ಉಳಿಸಲು ಸ್ಥಳೀಯರ ಹೋರಾಟ ನಡೆಸಿದ್ದರು.

ಸರ್ಕಾರಿ ಅನುದಾನಿತ ಪ್ರೌಢಶಾಲೆಗೆ ಶಿಕ್ಷಣ ಸಚಿವರ ಭೇಟಿ

ಈ ಹಿನ್ನೆಲೆ ಸಚಿವರು ದಿಢೀರ್ ಭೇಟಿ ನೀಡಿ ಶಾಲಾ ಆಡಳಿತ ಮಂಡಳಿಯೊಂದಿಗೆ ಮಾತುಕತೆ ನಡೆಸಿದರು. ಈ ಸಮಯದಲ್ಲಿ ಶಾಲೆ ಉಳಿಸುವಂತೆ ಸಚಿವರಲ್ಲಿ ಸ್ಥಳೀಯರು ಮನವಿ ಮಾಡಿದರು.

suresh minister visits damaspete school

ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿರುವ ಸಚಿವ ಸುರೇಶ್ ಕುಮಾರ್, ಒಂದಾನೊಂದು ಕಾಲದಲ್ಲಿ ಅತ್ಯಂತ ಭವ್ಯವಾಗಿದ್ದ ಈ ಶಾಲೆ ಇಂದು ವ್ಯವಸ್ಥಾಪಕ ಮಂಡಳಿಯ ಹಾಗೂ ಶಿಕ್ಷಕರ ನಡುವಿನ ಸಾಮರಸ್ಯದ ಕೊರತೆಯಿಂದ ಬಡವಾಗಿದೆ. ಸುಮಾರು ಎಂಟು ಎಕರೆ ಜಾಗ ಉಳ್ಳ ಈ ಶಾಲೆಗೆ ಸಮರ್ಪಿತ ತಂಡ ಹೊಂದಿರುವ ಆಡಳಿತ ಮಂಡಳಿ ಒಂದಿದ್ದರೆ ಅದೆಷ್ಟು ಚೆನ್ನಾಗಿರುತ್ತಿತ್ತು, ಊರಿನ ಜನತೆ ಹಾಗೂ ಹಳೆಯ ವಿದ್ಯಾರ್ಥಿಗಳೆಲ್ಲಾ ಈ ಶಾಲೆಯನ್ನು ಉಳಿಸಿಕೊಡಬೇಕೆಂದು ನನ್ನಲ್ಲಿ ಮನವಿ ಮಾಡಿಕೊಂಡಿದ್ದಾರೆ ಎಂದು ಹೇಳಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.