ETV Bharat / state

ನೆಲಮಂಗಲ: ಕ್ರಷರ್ ಹೊಂಡದಲ್ಲಿ ಮುಳುಗಿ ವಿದ್ಯಾರ್ಥಿ ಸಾವು - ನೆಲಮಂಗಲ ತಾಲೂಕು ನರಸೀಪುರದಲ್ಲಿ ಗ್ರಾಮ

ಸ್ನೇಹಿತರ ಜತೆ ಈಜಲು ಹೋಗಿದ್ದ ವಿದ್ಯಾರ್ಥಿಯೊಬ್ಬ ಕ್ರಷರ್ ಹೊಂಡದಲ್ಲಿ ಮುಳುಗಿ ಸಾವಿಗೀಡಾಗಿದ್ದಾನೆ.

student drowned in crusher pit  of Narseepura village  Etv Bharat
ವಿದ್ಯಾರ್ಥಿ ಮುಳುಗಿ ಸಾವಿಗೀಡಾಗಿದ್ದ ನರಸೀಪುರ ಗ್ರಾಮದ ಕ್ಷಷರ್ ಹೊಂಡ
author img

By

Published : Nov 6, 2022, 3:54 PM IST

ನೆಲಮಂಗಲ: ಸ್ನೇಹಿತರೊಂದಿಗೆ ಈಜಲು ಹೋಗಿದ್ದ ವಿದ್ಯಾರ್ಥಿಯೊಬ್ಬ ನೀರು ತುಂಬಿದ್ದ ಕ್ರಷರ್ ಹೊಂಡದಲ್ಲಿ ಮುಳುಗಿ ಸಾವಿಗೀಡಾರುವ ಘಟನೆ ನೆಲಮಂಗಲ ತಾಲೂಕಿನ ನರಸೀಪುರದಲ್ಲಿ ಗ್ರಾಮದಲ್ಲಿ ಸಂಭವಿಸಿದೆ. ಆತ್ಮರಾಮ ಪ್ರೌಢಶಾಲೆಯ 10ನೇ ತರಗತಿ ವಿದ್ಯಾರ್ಥಿ ಪವನ್ (16) ಮೃತಪಟ್ಟ ಬಾಲಕ.

ಮತ್ತಷ್ಟು ವಿವರ: ನಿನ್ನೆ ಶಾಲೆ ಮುಗಿದ ನಂತರ ಮಧ್ಯಾಹ್ನ ಸ್ನೇಹಿತರೊಂದಿಗೆ ಈಜಲು ಹೋಗಿದ್ದಾನೆ. ಕ್ರಷರ್ ಹೊಂಡದಲ್ಲಿ ಈಜುತ್ತಿದ್ದಾಗ ಆಳವಿರುವ ತಗ್ಗಿನ ಪ್ರದೇಶದಲ್ಲಿ ಸಿಲುಕಿದ್ದ. ನಿನ್ನೆ ಶವ ಪತ್ತೆಯಾಗಿರಲಿಲ್ಲ. ಇಂದು ಅಗ್ನಿಶಾಮಕ ದಳದವರು ಕಾರ್ಯಾಚರಣೆ ನಡೆಸಿ ಶವ ಹೊರತೆಗೆದರು. ದಾಬಸ್ ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಶಾಸಕರಿಗೆ ಸೇರಿದ ಕ್ರಷರ್ ಹೊಂಡ: ಪ್ರಭಾವಿ ಶಾಸಕರಿಗೆ ಸೇರಿದ ಕ್ರಷರ್ ಹೊಂಡ ಇದಾಗಿದೆ. ಗಣಿಗಾರಿಕೆ ಕೈಗೊಂಡಿದ್ದ ಕಾರಣಕ್ಕೆ ಬೃಹತಾಕಾರದಲ್ಲಿ ರೂಪುಗೊಂಡಿತ್ತು. ಈಗ ಸಂಪೂರ್ಣ ನೀರಿನಿಂದ ಆವೃತವಾಗಿ ಆತಂಕ ಸೃಷ್ಟಿಸಿದೆ.

ಇದನ್ನೂಓದಿ:ಬೆಂಗಳೂರು: ಶಾಲೆಯಲ್ಲಿ ಆಟವಾಡುವಾಗ ಕುಸಿದು ಬಿದ್ದ ಬಾಲಕಿ ಅನುಮಾನಾಸ್ಪದ ಸಾವು

ETV Bharat Logo

Copyright © 2025 Ushodaya Enterprises Pvt. Ltd., All Rights Reserved.