ನೆಲಮಂಗಲ : ಗ್ರಾಮಾಂತರ ಪ್ರದೇಶಗಳಲ್ಲಿ ಗ್ರಾಮ ಪಂಚಾಯತ್ ಚುನಾವಣೆ ಕಾವು ಏರುತ್ತಿದ್ದು, ಚುನಾವಣೆಗಳಲ್ಲಿ ವೈಷಮ್ಯ ಬೇಡ, ಚುನಾವಣೆ ಯಾವುದೇ ಪಕ್ಷಕ್ಕೆ ಸೀಮಿತವಾಗಿರದೆ ವ್ಯಕ್ತಿಗತವಾಗಿರಬೇಕೆಂದು ಮತದಾರರಿಗೆ ಸಿದ್ದಗಂಗಾ ಮಠದ ಪೀಠಾಧ್ಯಕ್ಷ ಸಿದ್ದಲಿಂಗ ಸ್ವಾಮೀಜಿ ತಿಳಿ ಹೇಳಿದರು.
ಎಲ್ಲರೂ ಮತದಾನ ಮಾಡಬೇಕು, ಮತಕ್ಕೆ ಬೆಲೆಕಟ್ಟಲು ಆಗುವುದಿಲ್ಲ. ಪವಿತ್ರವಾದ ಮತ ಚಲಾಯಿಸಿ ಪ್ರಜಾತಂತ್ರ ವ್ಯವಸ್ಥೆಯನ್ನು ಯಶಸ್ವಿಗೊಳಿಸಬೇಕೆಂದು ಮತದಾರರಿಗೆ ಸಲಹೆ ನೀಡಿದರು.
ಧಾರ್ಮಿಕ ಕಾರ್ಯಗಳಿಂದ ಮಾತ್ರ ಒಗ್ಗಟ್ಟು ಸಾಧ್ಯ:
ದೀಪೋತ್ಸವದ ಬಗ್ಗೆ ಮಾತನಾಡಿದ ಶ್ರೀಗಳು, ಗ್ರಾಮಗಳಲ್ಲಿ ಧಾರ್ಮಿಕ ಕಾರ್ಯಗಳಿಂದ ಮಾತ್ರ ಒಗ್ಗಟ್ಟು ಸಾಧ್ಯ. ಉತ್ಸವ ಮತ್ತು ಹಬ್ಬಗಳು ಎಲ್ಲರನ್ನೂ ಒಂದು ಮಾಡುತ್ತವೆ.
ಶತ್ರುಗಳನ್ನು ಪ್ರೀತಿಸುವುದೇ ಹಬ್ಬದ ವೈಶಿಷ್ಟ್ಯ. ನಮ್ಮೊಳಗಿನ ಮನಸ್ಸು ಮತ್ತು ಭಾವನೆಯನ್ನ ಶುದ್ಧ ಮಾಡುವುದೇ ದೀಪೋತ್ಸವ, ಹಬ್ಬವನ್ನು ಆಚರಣೆ ಮಾಡುವುದೇ ಎಲ್ಲರನ್ನೂ ಪ್ರೀತಿಸುವ ಸಲುವಾಗಿ ಎಂದು ಶ್ರೀಗಳು ಹೇಳಿದ್ರು.