ದೇವನಹಳ್ಳಿ(ಬೆಂಗಳೂರು ಗ್ರಾಮಾಂತರ): ದೇಶದಲ್ಲೇ ಮೊದಲ ಬಾರಿಗೆ ವಿಶೇಷಚೇತನರಿಗೆ ಅನುಕೂಲವಾಗುವಂತಹ ವಿಶೇಷ ಸೌಲಭ್ಯಕ್ಕೆ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಚಾಲನೆ ನೀಡಲಾಗಿದೆ. ನಿಲ್ದಾಣಕ್ಕೆ ಬರುವ ವಿಶೇಷ ಚೇತನರಿಗೆ ಪ್ರತ್ಯೇಕ ಸಿಬ್ಬಂದಿ ಮತ್ತು ಸಾಲಿನ ವ್ಯವಸ್ಥೆಯಿದೆ. ವಿಶೇಷವಾದ ಸನ್ ಫ್ಲವರ್ ಟ್ಯಾಗ್ ಮೂಲಕ ನೇರವಾಗಿ ವಿಮಾನಯಾನ ಮಾಡಲು ಅವಕಾಶ ಕಲ್ಪಿಸಲಾಗಿದೆ. ಟರ್ಮಿನಲ್‌ನಿಂದ ವಿಮಾನ ಹತ್ತುವವರೆಗೂ ಬೇಕಾದ ಸಹಾಯವನ್ನು ನಿಲ್ದಾಣದ ಸಿಬ್ಬಂದಿಯೇ ಮಾಡಲಿದ್ದಾರೆ.
ಉಚಿತ ವೀಲ್‌ಚೇರ್, ಬೋರ್ಡಿಂಗ್ ಪಾಸ್ ಮತ್ತು ವಿಶೇಷಚೇತನರನ್ನು ಕರೆದುಕೊಂಡು ಹೋಗಲು ಸಿಬ್ಬಂದಿ ನೇಮಿಸಲಾಗಿದೆ. ಸನ್ ಫ್ಲವರ್ ಲ್ಯಾನಿಯಾರ್ಡ್ ಸಂಸ್ಥೆ ಮೂಲಕ ವಿಶೇಷ ಸೌಲಭ್ಯ ಜಾರಿಗೊಳಿಸಲಾಗಿದ್ದು, ಇನ್ಮುಂದೆ ವಿಶೇಷಚೇತನರು ವಿಮಾನ ನಿಲ್ದಾಣಕ್ಕೆ ಬಂದರೆ ನೇರವಾಗಿ ವಿಮಾನ ನಿಲ್ದಾಣದ ಸಿಬ್ಬಂದಿಯೇ ಸಹಾಯ ಮಾಡುವರು. ಕೈಸನ್ನೆ ಭಾಷೆಯ ಸಿಬ್ಬಂದಿ ಲಭ್ಯವಿರಲಿದ್ದಾರೆ.
ವಿಶೇಷಚೇತನರು ಮಾಡಬೇಕಿರುವುದೇನು?: ವಿಮಾನ ನಿಲ್ದಾಣಕ್ಕೆ ವಿಶೇಷಚೇತನರು ಕ್ಯಾಬ್ನಲ್ಲಿ ಬರುತ್ತಿದ್ದಂತೆ, ಟರ್ಮಿನಲ್ ಅರೈವಲ್ ಬಳಿ ಡ್ರಾಪ್ ಪಾಯಿಂಟ್ ಮಾಡಲಾಗಿದೆ. ಅಲ್ಲಿಗೆ ಕರೆದುಕೊಂಡು ಹೋಗಲು ಸಿಬ್ಬಂದಿ ಬರುತ್ತಾರೆ. ಅಲ್ಲಿಂದ ಅರೈವಲ್ ಐದನೇ ನಂಬರ್ ಗೇಟ್ ಬಳಿ ಒಳಗೆ ಹೋಗುತ್ತಿದ್ದಂತೆ, ಸನ್ ಫ್ಲವರ್ ಟ್ಯಾಗ್ ಪಾಯಿಂಟ್ ಇದೆ. ಅಲ್ಲಿ ವಿಶೇಷ ಚೇತನರಿಗೆ ಒಂದು ಟ್ಯಾಗ್ ಕೊಡಲಾಗುತ್ತದೆ. ಆ ಟ್ಯಾಗ್ ಧರಿಸಿ ಅಲ್ಲಿಯೇ ಒಂದು ಡಿಸ್ಲ್ಪೆ ಮಿಷನ್ ಬಳಿ ಮುಖ ತೋರಿಸಿದರೆ ಸಾಕು, ಸಿಬ್ಬಂದಿ ವಿಶೇಷಚೇತನರನ್ನು ಸಂಪರ್ಕಿಸುತ್ತಾರೆ.
ಇದನ್ನೂ ಓದಿ: ಕೆಐಎಎಲ್ ಇಮಿಗ್ರೇಷನ್ಗೆ ಉದ್ದನೆಯ ಕ್ಯೂ: ಬೇಸರ ವ್ಯಕ್ತಪಡಿಸಿದ ಪ್ರಯಾಣಿಕರು