ನೆಲಮಂಗಲ: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೂತನ ಪೊಲೀಸ್ ವರಿಷ್ಠಾಧಿಕಾರಿ ರವಿ ಡಿ. ಚನ್ನಣ್ಣನವರ್ ಪೊಲೀಸ್ ಠಾಣೆಗಳಿಗೆ ಭೇಟಿ ನೀಡಿ ರಾತ್ರಿ ಗಸ್ತು ಕರ್ತವ್ಯನಿರತ ಸಿಬ್ಬಂದಿಯನ್ನು ಭೇಟಿ ಮಾಡಿ ಪರಿಶೀಲನೆ ನಡೆಸಿದರು.
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಪೊಲೀಸ್ ಅಧೀಕ್ಷಕ ರವಿ ಚನ್ನಣ್ಣವರ್, ನೈಟ್ ಡ್ಯೂಟಿಯಲ್ಲಿ ನೆಲಮಂಗಲ, ದಾಬಸಪೇಟೆ ಹಾಗೂ ಮಾದನಾಯಕನ ಹಳ್ಳಿ ಪೊಲೀಸ್ ಠಾಣೆಗಳಿಗೆ ಭೇಟಿ ನೀಡಿದರು. ರಾತ್ರಿ ಗಸ್ತುನಿರತ ಸಿಬ್ಬಂದಿಯನ್ನು ಭೇಟಿ ಮಾಡಿ ಅವರೊಂದಿಗೆ ಮಾತುಕತೆ ನಡೆಸಿದರು. ರಾತ್ರಿ ಗಸ್ತು ಸರಿಯಾಗಿ ನಿರ್ವಹಿಸಿ ಯಾವುದೇ ತರಹದ ಅಪರಾಧ ಚಟುವಟಿಕೆ ಜಿಲ್ಲೆಗಳಲ್ಲಿ ನಡೆಯದಂತೆ ನೋಡಿಕೊಳ್ಳಲು ಸಿಬ್ಬಂದಿಗೆ ನಿರ್ದೇಶನ ನೀಡಿದ್ದಾರೆ.
ಇದೇ ವೇಳೆ ನೆಲಮಂಗಲ ನಿವಾಸಿಗಳು ಮತ್ತು ಪೊಲೀಸರು ಉತ್ತರ ಕರ್ನಾಟಕ ನೆರೆ ಸಂತ್ರಸ್ತರಿಗೆ ಸಂಗ್ರಹಿಸಿದ ಸುಮಾರು 7 ಲಕ್ಷ ರೂಪಾಯಿಗಳ ದಿನ ಬಳಕೆ ಸಾಮಗ್ರಿಗಳನ್ನು ಎರಡು ಲಾರಿಗಳಲ್ಲಿ ಬೆಳಗಾವಿಗೆ ಕಳುಹಿಸಿಕೊಡುವುದಕ್ಕೆ ಚಾಲನೆ ನೀಡಿದರು.