ಬೆಂಗಳೂರು: ರಾಜ್ಯದಲ್ಲಿ ಮಳೆ ಹಾಗೂ ಪ್ರವಾಹದಿಂದಾಗಿ ಆಗಿರುವ ನಷ್ಟದ ಮರು ಸಮೀಕ್ಷೆಯನ್ನು ವೈಜ್ಞಾನಿಕವಾಗಿ ನಡೆಸಿ, ನಷ್ಟದ ಅಂದಾಜು ಮಾಡುವಂತೆ ವಿಧಾನಸಭೆ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಸರ್ಕಾರಕ್ಕೆ ಸಲಹೆ ನೀಡಿದ್ದಾರೆ.
ಮಳೆ ಮತ್ತು ಪ್ರವಾಹದಿಂದಾಗಿ ಈ ವರ್ಷ ಕಳೆದ ವರ್ಷಕ್ಕಿಂತ ದುಪ್ಪಟ್ಟು ನಷ್ಟ ಸಂಭವಿಸಿದೆ. ಹೀಗಿದ್ದರೂ ರಾಜ್ಯ ಬಿಜೆಪಿ ಸರ್ಕಾರ ಹೆಚ್ಚು ಪರಿಹಾರ ಕೇಳಲು ಹೋಗದೆ, ಕಡಿಮೆ ಕೇಳಿ ರಾಜ್ಯಕ್ಕೆ ದ್ರೋಹ ಬಗೆಯುತ್ತಿದೆ. ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ತಕ್ಷಣ ಮರುಸಮೀಕ್ಷೆಗೆ ಆದೇಶಿಸಿ ವೈಜ್ಞಾನಿಕವಾಗಿ ನಷ್ಟದ ಅಂದಾಜು ಮಾಡಬೇಕು ಎಂದು ಸಲಹೆ ನೀಡಿದ್ದಾರೆ.
-
ಮಳೆ ಮತ್ತು ಪ್ರವಾಹದಿಂದಾಗಿ ಈ ವರ್ಷ ಕಳೆದ ವರ್ಷಕ್ಕಿಂತ ದುಪ್ಪಟ್ಟು ನಷ್ಟ ಸಂಭವಿಸಿದೆ. ಹೀಗಿದ್ದರೂ @BJP4Karnataka ಸರ್ಕಾರ ಹೆಚ್ಚು ಪರಿಹಾರ ಕೇಳಲು ಹೋಗದೆ ಕಡಿಮೆ ಕೇಳಿ ರಾಜ್ಯಕ್ಕೆ ದ್ರೋಹ ಬಗೆಯುತ್ತಿದೆ. @CMofKarnataka ಅವರು ತಕ್ಷಣ ಮರುಸಮೀಕ್ಷೆಗೆ ಆದೇಶಿಸಿ ವೈಜ್ಞಾನಿಕವಾಗಿ ನಷ್ಟದ ಅಂದಾಜು ಮಾಡಬೇಕು.
— Siddaramaiah (@siddaramaiah) November 9, 2020 " class="align-text-top noRightClick twitterSection" data="
1/4 pic.twitter.com/lyaqJqytsP
">ಮಳೆ ಮತ್ತು ಪ್ರವಾಹದಿಂದಾಗಿ ಈ ವರ್ಷ ಕಳೆದ ವರ್ಷಕ್ಕಿಂತ ದುಪ್ಪಟ್ಟು ನಷ್ಟ ಸಂಭವಿಸಿದೆ. ಹೀಗಿದ್ದರೂ @BJP4Karnataka ಸರ್ಕಾರ ಹೆಚ್ಚು ಪರಿಹಾರ ಕೇಳಲು ಹೋಗದೆ ಕಡಿಮೆ ಕೇಳಿ ರಾಜ್ಯಕ್ಕೆ ದ್ರೋಹ ಬಗೆಯುತ್ತಿದೆ. @CMofKarnataka ಅವರು ತಕ್ಷಣ ಮರುಸಮೀಕ್ಷೆಗೆ ಆದೇಶಿಸಿ ವೈಜ್ಞಾನಿಕವಾಗಿ ನಷ್ಟದ ಅಂದಾಜು ಮಾಡಬೇಕು.
— Siddaramaiah (@siddaramaiah) November 9, 2020
1/4 pic.twitter.com/lyaqJqytsPಮಳೆ ಮತ್ತು ಪ್ರವಾಹದಿಂದಾಗಿ ಈ ವರ್ಷ ಕಳೆದ ವರ್ಷಕ್ಕಿಂತ ದುಪ್ಪಟ್ಟು ನಷ್ಟ ಸಂಭವಿಸಿದೆ. ಹೀಗಿದ್ದರೂ @BJP4Karnataka ಸರ್ಕಾರ ಹೆಚ್ಚು ಪರಿಹಾರ ಕೇಳಲು ಹೋಗದೆ ಕಡಿಮೆ ಕೇಳಿ ರಾಜ್ಯಕ್ಕೆ ದ್ರೋಹ ಬಗೆಯುತ್ತಿದೆ. @CMofKarnataka ಅವರು ತಕ್ಷಣ ಮರುಸಮೀಕ್ಷೆಗೆ ಆದೇಶಿಸಿ ವೈಜ್ಞಾನಿಕವಾಗಿ ನಷ್ಟದ ಅಂದಾಜು ಮಾಡಬೇಕು.
— Siddaramaiah (@siddaramaiah) November 9, 2020
1/4 pic.twitter.com/lyaqJqytsP
ಕಳೆದ ವರ್ಷ ಅತಿವೃಷ್ಟಿಯಿಂದ 9,94,556 ಹೆಕ್ಟೇರ್ ಬೆಳೆ ನಾಶಕ್ಕೆ, ಒಟ್ಟು ರೂ.25,518 ಕೋಟಿ ಪರಿಹಾರವನ್ನು ಸಿಎಂ ಕೇಳಿದ್ದರು. ಈ ಬಾರಿ 20,86,703 ಹೆಕ್ಟೇರ್ ಬೆಳೆ ನಾಶಕ್ಕೆ, ಒಟ್ಟು ರೂ. 24,941.73 ಕೋಟಿ ಪರಿಹಾರ ಕೇಳಿರುವುದು ರಾಜ್ಯಕ್ಕೆ ಮಾಡಿರುವ ಅನ್ಯಾಯ ಅಲ್ಲವೇ? ಎಂದು ಪ್ರಶ್ನಿಸಿದ್ದಾರೆ.
ಕಳೆದ ವರ್ಷ ರೂ. 25,518 ಕೋಟಿ ಪರಿಹಾರ ಕೇಳಿದರೂ ಪ್ರಧಾನಿ ನರೇಂದ್ರ ಮೋದಿ ನೀಡಿರುವುದು ರೂ.1652 ಕೋಟಿ ಮಾತ್ರ. ರಾಜ್ಯ ಬಿಜೆಪಿ ಸರ್ಕಾರ ಸಮರ್ಪಕ ಸಮೀಕ್ಷಾ ವರದಿ ಮೂಲಕ ಪ್ರಧಾನಿಗಳ ಮೇಲೆ ಒತ್ತಡ ಹೇರಿದರೆ ಮಾತ್ರ ಹೆಚ್ಚಿನ ಪರಿಹಾರ ಸಿಗಲು ಸಾಧ್ಯ ಎಂದಿದ್ದಾರೆ.
ಮಳೆ/ಪ್ರವಾಹ ಬಂದು ಮೂರು ತಿಂಗಳುಗಳಾಗುತ್ತಾ ಬಂದರೂ ಇಲ್ಲಿಯವರೆಗೆ 51,812 ಸಂತ್ರಸ್ತರಿಗೆ ನೀಡಿರುವ ಪರಿಹಾರ ಕೇವಲ ರೂ.36,57,79,972 ಮಾತ್ರ. ಎರಡನೇ ಹಂತದಲ್ಲಿ ಗುರುತಿಸಲಾದ 85,996 ಸಂತ್ರಸ್ತರಿಗೆ 70,70,87,961 ರೂಪಾಯಿ ಪರಿಹಾರ ಇನ್ನಷ್ಟೇ ನೀಡಬೇಕಾಗಿದೆ. ಉಳಿದವರ ಗತಿ ಏನು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರೇ ಎಂದು ಪ್ರಶ್ನಿಸಿದ್ದಾರೆ.