ದೊಡ್ಡಬಳ್ಳಾಪುರ : ಕರ್ನಾಟಕ ಸುಪ್ರಸಿದ್ಧ ಧಾರ್ಮಿಕ ಕ್ಷೇತ್ರಗಳಲ್ಲಿ ಒಂದಾಗಿರುವ ಶ್ರೀ ಘಾಟಿ ಸುಬ್ರಹ್ಮಣ್ಯ ಕ್ಷೇತ್ರದಲ್ಲಿ ದಾಖಲೆಯ ಹುಂಡಿ ಹಣ ಸಂಗ್ರಹವಾಗಿದೆ.
ಸೋಮವಾರ ಭಕ್ತರು ಕಾಣಿಕೆಯಾಗಿ ನೀಡಿದ ಹುಂಡಿ ಹಣವನ್ನು ಎಣಿಕೆ ಮಾಡಲಾಗಿದ್ದು, ಡಿಸೆಂಬರ್ ತಿಂಗಳಲ್ಲಿ ಒಟ್ಟು 60,56,478 ರೂಪಾಯಿ ಕಾಣಿಕೆ ಹಣ ಸಂಗ್ರಹವಾಗಿದೆ.
ಇದರ ಜೊತೆಗೆ 4200 ರೂಪಾಯಿ ಮೌಲ್ಯದ 2 ಗ್ರಾಂ 500 ಮಿಲಿ ಗ್ರಾಂ ತೂಕದ ಚಿನ್ನ, 77,500 ರೂಪಾಯಿ ಮೌಲ್ಯದ 2 ಕೆಜಿ 350 ಗ್ರಾಂ ಬೆಳ್ಳಿಯನ್ನು ಭಕ್ತರು ಕಾಣಿಕೆಯಾಗಿ ನೀಡಿದ್ದಾರೆ.
ಇದನ್ನೂ ಓದಿ: ಪ್ರಸಿದ್ಧ ಘಾಟಿ ದನಗಳ ಜಾತ್ರೆಗೆ ಗ್ರೀನ್ ಸಿಗ್ನಲ್; ಜನವರಿ ಮೊದಲ ವಾರದಲ್ಲೇ ದನಗಳ ಸಂಗಮ
ಕೊರೊನಾ ಹಿನ್ನೆಲೆ ಲಾಕ್ಡೌನ್ ಜಾರಿಯಾಗಿದ್ದರಿಂದ ದೇವಸ್ಥಾನ ಬಾಗಿಲು ಬಂದ್ ಮಾಡಲಾಗಿತ್ತು. ಭಕ್ತರ ಕಾಣಿಕೆ ಹಣ ಸಂಗ್ರಹದಲ್ಲೂ ಗಣನೀಯ ಕುಸಿತವಾಗಿತ್ತು.
ಆದರೆ ಡಿಸೆಂಬರ್ ತಿಂಗಳ ಹುಂಡಿ ಹಣ ಸಂಗ್ರಹ ದಾಖಲೆ ಪ್ರಮಾಣದಲ್ಲಿ ಸಂಗ್ರಹವಾಗಿರುವುದು ದೇವಸ್ಥಾನ ಆಡಳಿತ ಮಂಡಳಿ ಖುಷಿಗೆ ಕಾರಣವಾಗಿದೆ. ಪ್ರತಿ ಬಾರಿಯಂತೆ ಹುಂಡಿಯಲ್ಲಿ ಸಿಗುತ್ತಿದ್ದ ನಿಷೇಧಿತ ಹಣ ಮತ್ತು ವಿದೇಶಿ ನೋಟ್ ಸಿಗದೆ ಇರುವುದು ಈ ಬಾರಿಯ ವಿಶೇಷವಾಗಿದೆ.