ದೇವನಹಳ್ಳಿ (ಬೆಂಗಳೂರು): ದೇಶಾದ್ಯಂತ ಲಾಕ್ಡೌನ್ ಪರಿಣಾಮ ಕೆಲಸ ಕಳೆದುಕೊಂಡು ತವರೂರಿಗೆ ಹೋಗುತ್ತಿದ್ದ ಉತ್ತರಪ್ರದೇಶದ ಕೂಲಿ ಕಾರ್ಮಿಕರಿಗೆ ಬೆಂಗಳೂರು ಗ್ರಾಮಾಂತರ ಜಿಲ್ಲಾಡಳಿತ ಅಶ್ರಯ ನೀಡಿದೆ.
ಊಟ, ನೀರಿಲ್ಲದೆ ಹೆದ್ದಾರಿಯಲ್ಲಿ ಪರದಾಡುತ್ತಿದ್ದ ಕಾರ್ಮಿಕರು, ಟ್ರಕ್ಗಳ ಮೂಲಕ ತವರೂರಿಗೆ ಪ್ರಯಾಣ ಬೆಳೆಸಿದ್ದರು. ಕಳೆದ ರಾತ್ರಿ ಟ್ರಕ್ ಮೂಲಕ ತೆರಳಿದ್ದ ಕಾರ್ಮಿಕರನ್ನು ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿ ಚೆಕ್ ಪೋಸ್ಟ್ನಲ್ಲಿ ತಡೆದು ವಾಪಸ್ ಕಳುಹಿಸಿದ್ದರು.
ಮತ್ತೆ ಈ ಕಾರ್ಮಿಕರು ಬೆಂಗಳೂರು ಕಡೆ ಹೊರಟಿದ್ದರು. ಬೆಂಗಳೂರಿಗೆ ವಾಪಸ್ ಬರುವ ವೇಳೆ ದೇವನಹಳ್ಳಿ ರಾಣಿ ಕ್ರಾಸ್ನಲ್ಲಿ ತಡೆದ ಪೊಲೀಸರು ಇವರನ್ನು ಬೆಂಗಳೂರಿಗೆ ಹೋಗುವುದನ್ನ ತಡೆದರು. ಇದರಿಂದ ತವರೂರಿಗೆ ಹೋಗಲಾರದೆ, ಇತ್ತ ಬೆಂಗಳೂರಿಗೂ ಹೋಗಲಾರದೆ ಹೆದ್ದಾರಿಯಲ್ಲಿ ನೀರು, ಆಹಾರವಿಲ್ಲದೆ ತ್ರಿಶಂಕು ಸ್ಥಿತಿಗೆ ಸಿಲುಕಿದ್ದಾರೆ.
ಸುಮಾರು ನೂರಕ್ಕೂ ಹೆಚ್ಚು ಕಾರ್ಮಿಕರಿದ್ದು, ಇವರೆಲ್ಲಾ ಬೆಂಗಳೂರಿನಲ್ಲಿ ಗಾರ್ಮೆಂಟ್ಸ್, ಟೈಲ್ಸ್ ನಿರ್ಮಾಣದ ಕೆಲಸದಲ್ಲಿ ತೊಡಗಿದ್ದವರು. ಶ್ರಿಶಂಕು ಸ್ಥಿತಿಗೆ ಸಿಲುಕಿದ ಇಂತಹ ಕಾರ್ಮಿಕರಿಗೆ ಆಶ್ರಯ ನೀಡಲು ಬೆಂಗಳೂರು ಗ್ರಾಮಾಂತರ ಜಿಲ್ಲಾಡಳಿತ ಮುಂದಾಗಿದೆ.