ಹೊಸಕೋಟೆ: ನೀತಿ ಸಂಹಿತೆ ಉಲ್ಲಂಘಿಸಿ ಎಸ್ಕಾರ್ಟ್ ಪೈಲೆಟ್ ಮತ್ತು ಗನ್ ಮ್ಯಾನ್ಗಳನ್ನು ಪಡೆದಿದ್ದಾರೆ ಎಂದು ಆರೋಪಿಸಿ ಹೊಸಕೋಟೆ ಬಿಜೆಪಿ ಅಭ್ಯರ್ಥಿ ಎಂಟಿಬಿ ನಾಗರಾಜ್ ವಿರುದ್ಧ ಚುನಾವಣಾ ಅಧಿಕಾರಿಗಳಿಗೆ ದೂರು ಸಲ್ಲಿಸಲಾಗಿದೆ.
ಬಿಜೆಪಿ ವಿರುದ್ಧ ಬಂಡಾಯವೆದ್ದು ನಾಮಪತ್ರ ಸಲ್ಲಿಸಿರುವ ಶರತ್ ಬಚ್ಚೇಗೌಡ ಬೆಂಬಲಿಗ ತಿಮ್ಮೇಗೌಡ ಮತ್ತು ಸುಬ್ಬಣ್ಣ ಎಂಬುವವರು ಎಂಟಿಬಿ ವಿರುದ್ಧ ದೂರು ನೀಡಿದ್ದಾರೆ. ಚುನಾವಣಾ ಅಧಿಕಾರಿಗಳ ಕಚೇರಿ ಸಮೀಪ 200 ಮೀಟರ್ ಯಾರು ಪ್ರಚಾರ ಮಾಡಬಾರದು ಎಂಬ ನಿಯಮವಿದೆ. ಆದರೆ ಸಿಎಂ ಸೇರಿ ಹಲವು ಸಚಿವರು ಚುನಾವಣಾಧಿಕರಿಗಳ ಕಚೇರಿ ಸಮೀಪ ಭಾಷಣ ಮಾಡಿದ್ದಾರೆ ಎಂದು ದೂರಿನಲ್ಲಿ ನಮೂದಿಸಲಾಗಿದೆ.