ETV Bharat / state

ದೊಡ್ಡಬಳ್ಳಾಪುರದಲ್ಲಿ ಹಾಡಹಗಲೇ ಸರಣಿ ಕಳ್ಳತನ: ನಗದು, ಚಿನ್ನಾಭರಣ ಸಮೇತ ಕಳ್ಳರು ಪರಾರಿ - ದೊಡ್ಡಬಳ್ಳಾಪುರ

ದೊಡ್ಡಬಳ್ಳಾಪುರ ತಾಲೂಕಿನ ತಿರುಮಗೊಂಡನಹಳ್ಳಿ ಮತ್ತು ಹಾಡೋನಹಳ್ಳಿ ಗ್ರಾಮದಲ್ಲಿ ಹಾಡಹಗಲೇ ಸರಣಿ ಕಳ್ಳತನ ನಡೆದಿದೆ.

Serial theft in Doddaballapur
ದೊಡ್ಡಬಳ್ಳಾಪುರದಲ್ಲಿ ಹಾಡಹಗಲೇ ಸರಣಿ ಕಳ್ಳತನ..
author img

By

Published : Aug 26, 2020, 8:22 AM IST

ದೊಡ್ಡಬಳ್ಳಾಪುರ: ತಾಲೂಕಿನ ಎರಡು ಗ್ರಾಮಗಳಲ್ಲಿ ಹಾಡಹಗಲೇ ಸರಣಿ ಕಳ್ಳತನ ನಡೆದಿದ್ದು ಜನರ ಆತಂಕಕ್ಕೆ ಕಾರಣವಾಗಿದೆ.

ದೊಡ್ಡಬಳ್ಳಾಪುರದಲ್ಲಿ ಹಾಡಹಗಲೇ ಸರಣಿ ಕಳ್ಳತನ

ನಿನ್ನೆ ಮಧ್ಯಾಹ್ನ 12 ಗಂಟೆ ಸುಮಾರಿಗೆ ತಾಲೂಕಿನ ತಿರುಮಗೊಂಡನಹಳ್ಳಿ ರಾಜಣ್ಣ ಎಂಬುವವರ ಮನೆಗೆ ನುಗ್ಗಿದ್ದ ಕಳ್ಳರು, 4 ಲಕ್ಷ ರೂ. ನಗದು, 5 ಲಕ್ಷ ರೂ. ಚಿನ್ನಾಭರಣ ದೋಚಿ ಪರಾರಿಯಾಗಿದ್ದಾರೆ. ಮನೆಗೆ ಬೀಗ ಹಾಕಿ ತೋಟದ ಸಮೀಪ ಬಟ್ಟೆ ಒಗೆಯಲು ಹೋಗಿದ್ದ ಸಮಯದಲ್ಲಿ ಮನೆಯಲ್ಲಿ ಯಾರೂ ಇಲ್ಲದಿರುವುದನ್ನು ಗಮನಿಸಿದ ಇಬ್ಬರು ಕಳ್ಳರು ಮನೆಯ ಬೀಗ ಒಡೆದು ಒಳ ನುಗ್ಗಿದ್ದಾರೆ. ಬೀರುವಿನ ಬಾಗಿಲು ಮುರಿದು 4 ಲಕ್ಷ ನಗದು, 5 ಲಕ್ಷ ಚಿನ್ನಾಭರಣ ದೋಚಿ ಪರಾರಿಯಾಗಿದ್ದಾರೆ ಎನ್ನಲಾಗಿದೆ.

Serial theft in Doddaballapur
ಹಾಡಹಗಲೇ ಸರಣಿ ಕಳ್ಳತನ: ನಗದು, ಚಿನ್ನಾಭರಣ ಸಮೇತ ಕಳ್ಳರು ಪರಾರಿ

ಹಾಡೋನಹಳ್ಳಿ ಗ್ರಾಮದಲ್ಲಿಯೂ ಕಳ್ಳತನ: ಮಧ್ಯಾಹ್ನ 12 ಗಂಟೆಗೆ ತಿರುಮಗೊಂಡನಹಳ್ಳಿ ಕಳ್ಳತನ ನಡೆಸಿದ್ದಾರೆ. ಮಧ್ಯಾಹ್ನ 3ರ ಸಮಯದಲ್ಲಿ ಪಕ್ಕದೂರಿನ ಹಾಡೋನಹಳ್ಳಿ ಗ್ರಾಮದಲ್ಲಿಯೂ ಕೂಡ ಕಳ್ಳರು ಕೈಚಳಕ ತೋರಿಸಿದ್ದಾರೆ. ಗ್ರಾಮದ ರುದ್ರಪ್ಪನವರ ಮನೆಯಲ್ಲಿ ಕಳ್ಳತನ ನಡೆದಿದ್ದು, ಮನೆಯವರು ಮನೆಗೆ ಬೀಗ ಹಾಕಿ ದೇವರ ಕಾರ್ಯಕ್ಕೆ ಹೋಗಿದ್ದರು. ಈ ವೇಳೆ ಮನೆಯ ಬೀಗ ಒಡೆದು ಬೀರುವಿನಲ್ಲಿದ್ದ 35 ಸಾವಿರ ರೂ. ನಗದು, ಬೆಳ್ಳಿ ಸಾಮಾನು ಹಾಗೂ 2 ಲಕ್ಷ ರೂ. ಮೌಲ್ಯದ ಚಿನ್ನಾಭರಣ ದೋಚಿ ಪರಾರಿಯಾಗಿದ್ದಾರೆ.

ಎರಡು ಪ್ರಕರಣಗಳು ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದು, ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.