ETV Bharat / state

ಮೆಳೇಕೋಟೆ ಕ್ರಾಸ್ ಬಳಿ ಎರಡನೇ ಬಾರಿ ಎಟಿಎಂಗೆ ಕನ್ನ ಯತ್ನ ವಿಫಲ - ದುಷ್ಕರ್ಮಿಗಳು ಎಟಿಎಂ ದೋಚುವ ಯತ್ನ

ಇದೇ ಎಟಿಎಂ ಕೇಂದ್ರಕ್ಕೆ ಕಳೆದ ಫೆಬ್ರುವರಿ 24 ರಂದು ಕನ್ನ ಹಾಕುವ ಯತ್ನ ನಡೆದಿತ್ತು. ಮುಂಜಾನೆ ಸಮಯದಲ್ಲಿ ದುಷ್ಕರ್ಮಿಗಳು ಎಟಿಎಂ ದೋಚುವ ಯತ್ನ ಗಮನಿಸಿದ ಗ್ರಾಮಸ್ಥರು ಕಳ್ಳರನ್ನು ಹಿಡಿಯಲು ಪ್ರಯತ್ನಿಸಿದ್ದರು.

ಮೆಳೇಕೋಟೆ ಕ್ರಾಸ್ ಬಳಿ ಎರಡನೇ ಬಾರಿ ಎಟಿಎಂಗೆ ಕನ್ನ ಹಾಕುವ ಯತ್ನ ವಿಫಲ
second attempt to rob an ATM near Melekote Cross failed
author img

By

Published : Nov 23, 2022, 1:28 PM IST

ದೊಡ್ಡಬಳ್ಳಾಪುರ: ತಾಲೂಕಿನ ಮೆಳೇಕೋಟೆ ಕ್ರಾಸ್‌ನಲ್ಲಿರುವ ಎಟಿಎಂ ಕೇಂದ್ರಕ್ಕೆ ಖದೀಮರಿಂದ ಎರಡನೇ ಬಾರಿ ಕನ್ನ ಹಾಕುವ ಯತ್ನ ವಿಫಲಗೊಂಡಿದೆ.

ಖದೀಮರು ಕಳೆದ ರಾತ್ರಿ ಇಂಡಿಯನ್ ಬ್ಯಾಂಕ್‌ನ ಎಟಿಎಂ ಕೇಂದ್ರದ ಹಿಂಭಾಗದ ಗೋಡೆ ಒಡೆದು ಕಳ್ಳತನ ಯತ್ನ ನಡೆಸಿದ್ದಾರೆ. ಈ ವೇಳೆ ಉಂಟಾದ ಸದ್ದು ಕೇಳಿ ಗ್ರಾಮಸ್ಥರು ಮನೆಯಿಂದ ಹೊರ ಬಂದಿದ್ದಾರೆ. ಇದು ತಿಳಿಯುತ್ತಿದ್ದಂತೆ ಕಳ್ಳರು ಪರಾರಿಯಾಗಿದ್ದಾರೆ. ಸ್ಥಳಕ್ಕೆ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಇನ್ಸ್‌ಪೆಕ್ಟರ್ ಮುನಿಕೃಷ್ಣ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಇದೇ ಎಟಿಎಂ ಕೇಂದ್ರಕ್ಕೆ ಕಳೆದ ಫೆಬ್ರುವರಿ 24 ರಂದು ಕನ್ನ ಹಾಕುವ ಯತ್ನ ನಡೆದಿತ್ತು. ಮುಂಜಾನೆ ಸಮಯದಲ್ಲಿ ದುಷ್ಕರ್ಮಿಗಳ ಯತ್ನ ಗಮನಿಸಿದ ಗ್ರಾಮಸ್ಥರು ಕಳ್ಳರನ್ನು ಹಿಡಿಯಲು ಯತ್ನಿಸಿದ್ದಾರೆ. ಆದರೆ, ಕೈಗೆ ಸಿಗದ ಕಳ್ಳರು ಪರಾರಿಯಾಗಿದ್ದರು. ಪ್ರಕರಣಕ್ಕೆ ಸಂಬಂಧಿಸಿದಂತೆ ನೆಲಮಂಗಲದ ಆರಿನಕುಂಟೆಯ 19 ವರ್ಷದ ಗಗನ್ ಮತ್ತು ಸಚಿನ್ ಎಂಬಿಬ್ಬರನ್ನು ಪೊಲೀಸರು ಬಂಧಿಸಿದ್ದರು.

ಇದನ್ನೂ ಓದಿ: ಧರ್ಮಸ್ಥಳದ ಸೇವಾ ಕಾಯಕ ವಿಶ್ವಕ್ಕೆ ಮಾದರಿ, ಅನುಕರಣೀಯ: ಕೇಂದ್ರ ಸಚಿವೆ ಸ್ಮೃತಿ ಇರಾನಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.