ಬೆಂಗಳೂರು: ಶಾಲಾ ವಿದ್ಯಾರ್ಥಿಗಳಿಗೆ ವಿಜ್ಞಾನ ಕಲಿಕೆಯನ್ನು ಸರಳವಾಗಿಸುವ ಸಲುವಾಗಿ ಆಕೃತಿ 3ಡಿ ಎಂಬ ನವೋದ್ಯಮ ಹೊಸ ತಂತ್ರಜ್ಞಾನವನ್ನು ಆರಂಭಿಸಿದೆ.
ವಿಜ್ಞಾನ-ತಂತ್ರಜ್ಞಾನ, ಎಂಜಿನಿಯರಿಂಗ್ ಮತ್ತು ಗಣಿತದ ಪರಿಕಲ್ಪನೆಗಳನ್ನು ಸುಲಭವಾಗಿ ಅರ್ಥೈಸಿಕೊಳ್ಳಲು ವಿದ್ಯಾರ್ಥಿಗಳಿಗೆ ನೆರವಾಗುವಂತೆ ಡಿಸೈನ್ ಥಿಂಕಿಂಗ್ ಪ್ರಯೋಗಾಲಯಗಳನ್ನು ಶಾಲೆಗಳಲ್ಲಿ ಆರಂಭಿಸಲು ಯೋಜನೆ ರೂಪಿಸಿದೆ.
ಕೇವಲ ಪಠ್ಯ ಪುಸ್ತಕ ಅಥವಾ ಕಂಪ್ಯೂಟರ್ ಮೂಲಕ ಮಾಹಿತಿ ಪಡೆದು ವಿಜ್ಞಾನವನ್ನು ಕಲಿಯುವುದರ ಬದಲಾಗಿ ಪ್ರಾಯೋಗಿಕವಾಗಿ ಕಲಿಯುವುದು ಹೆಚ್ಚು ಸೂಕ್ತ. ಹೀಗಾಗಿ ಆವಿಷ್ಕಾರ್ ಡಿಸೈನ್ ಥಿಂಕಿಂಗ್ ಅಭಿವೃದ್ಧಿಪಡಿಸಲಾಗಿದೆ ಎಂದು ಎನ್ಐಟಿಕೆ ಸಂಶೋಧಕ ಮತ್ತು ಏರೋಸ್ಪೇಸ್ ತಂತ್ರಜ್ಞ ರಾಘವೇಂದ್ರ ಎಸ್. ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಅಟಲ್ ಟಿಂಕರಿಂಗ್ ಲ್ಯಾಬ್, ವಿಜ್ಞಾನ ಸಿದ್ಧಾಂತಗಳ ಕುರಿತು ಹೇಳಿದರೆ, ಡಿಸೈನ್ ಥಿಂಕಿಂಗ್ ಲ್ಯಾಬ್ಗಳು ಪ್ರಾಯೋಗಿಕವಾಗಿ ಅನುಷ್ಠಾನಗೊಳಿಸಬಹುದಾದ ವಿಧಾನವನ್ನು ವಿದ್ಯಾರ್ಥಿಗಳಿಗೆ ತಿಳಿಸಲಿದೆ. ಈ ಮೂಲಕ ರಾಕೆಟ್ ತಂತ್ರಜ್ಞಾನ ಮತ್ತು ಏರೋಸ್ಪೇಸ್ ಮುಂತಾದ ವಿಷಯಗಳ ಬಗ್ಗೆ ಇಂಜಿನಿಯರಿಂಗ್ ವಿದ್ಯಾರ್ಥಿಗಳು ಸಿದ್ಧಪಡಿಸಬಹುದು ಎನ್ನುತ್ತಾರೆ.