ಬೆಂಗಳೂರು: ಇಂದು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ರೌಡಿಶೀಟರ್ಗಳಿಗೆ ಪೊಲೀಸರು ಬಿಸಿ ಮುಟ್ಟಿಸಿದ್ದಾರೆ. ಸರ್ಚ್ ವಾರಂಟ್ ಪಡೆದು ಬೆಂಗಳೂರು ಗ್ರಾಮಾಂತರದ ಸುಮಾರು 190ಕ್ಕೂ ಅಧಿಕ ರೌಡಿಶೀಟರ್ಗಳ ಮನೆ ಮೇಲೆ ಬೆಳ್ಳಂಬೆಳಗ್ಗೆ ದಾಳಿ ನಡೆಸಿ ಪರಿಶೀಲಿಸಲಾಗಿದೆ. ಗ್ರಾಮಾಂತರ ಭಾಗದಲ್ಲಿನ ಕುಖ್ಯಾತ ರೌಡಿಗಳಾದ ಬೆತ್ತನಗೆರೆ ಶಂಕರ ಹಾಗೂ ಮಂಜ, ಹೇಮಂತ್, ಬಂಡೆ ಮಂಜ, ಪಟಾಸ್ ರವಿ, ನೇಪಾಳಿ ಮಂಜ ಸೇರಿದಂತೆ ಬಹುತೇಕ ರೌಡಿಗಳನ್ನು ವಶಕ್ಕೆ ಪಡೆದು ಬ್ಯಾಡರಹಳ್ಳಿಯ ಡಿಎಆರ್ ಮೈದಾನದಲ್ಲಿ ಪರೇಡ್ ನಡೆಸಲಾಯಿತು.
ಪರೇಡ್ ವೇಳೆ 'ಸರಗೂರು ಬಳಿ ಜಮೀನು ಖರೀದಿಸಿದ್ದೇನೆ, ಸಮಾಜ ಸೇವೆಯಲ್ಲಿ ತೊಡಗಿದ್ದೇನೆ' ಎಂದು ಬೆತ್ತನಗೆರೆ ಶಂಕರ ಹೇಳುತ್ತಿದ್ದಂತೆ ಗರಂ ಆದ ಎಸ್.ಪಿ ವಂಶಿಕೃಷ್ಣ 'ಮೊದಲು ಮೇಲಿರುವ ಕೇಸುಗಳನ್ನು ಬಗೆಹರಿಸಿಕೋ, ಇಲ್ಲ ಎಲ್ಲಿ ಹೋದರೂ ಬಿಡಲ್ಲ ಎಂದು ಎಚ್ಚರಿಕೆ ನೀಡಿದರು.
ಸದ್ಯ ಬೆರಳೆಣಿಕೆಯಷ್ಟು ರೌಡಿಗಳನ್ನ ಹೊರತುಪಡಿಸಿ ಬಹುತೇಕ ಎಲ್ಲ ರೌಡಿಶೀಟರ್ಗಳನ್ನು ಕರೆತಂದು ಎಚ್ಚರಿಕೆ ನೀಡಲಾಗಿದ್ದು, ಪ್ರಸ್ತುತ ಅವರ ವಿಳಾಸ, ಉದ್ಯೋಗ, ಸಹಚರರ ಮಾಹಿತಿ ಸೇರಿದಂತೆ ಅಗತ್ಯ ಮಾಹಿತಿಗಳನ್ನ ಕಲೆಹಾಕಲಾಗಿದೆ ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲಾ ಎಸ್ಪಿ ವಂಶಿಕೃಷ್ಣ ತಿಳಿಸಿದ್ದಾರೆ.
ಓದಿ : ಉಡುಪಿ: ಒತ್ತಿನೆಣೆ ಕಾಡು ಪ್ರದೇಶದಲ್ಲಿ ಅಪರಿಚಿತ ಸುಟ್ಟ ಶವ ಪತ್ತೆ