ETV Bharat / state

ಆನೇಕಲ್ ಪೊಲೀಸ್ ಠಾಣಾ ಅಂಗಳದಲ್ಲಿ ರೌಡಿಗಳ ಪೆರೇಡ್!

author img

By

Published : Nov 21, 2020, 8:46 PM IST

ಆನೇಕಲ್ ಪೊಲೀಸ್ ಠಾಣಾ ಅಂಗಳದಲ್ಲಿ ರೌಡಿಗಳ ಪೆರೇಡ್ ನಡೆಸಲಾಯಿತು. ಈ ವೇಳೆ ಬಾಲ ಬಿಚ್ಚದಂತೆ ಡಿವೈಎಸ್ಪಿ ಹೆಚ್.​ಎಂ.ಮಹದೇವಪ್ಪ ಹಲವು ರೌಡಿಗಳಿಗೆ ಎಚ್ಚರಿಕೆ ನೀಡಿದರು.

Parade Of Rowdies In Anekal Police Station
ಆನೇಕಲ್ ಪೊಲೀಸ್ ಠಾಣಾ ಅಂಗಳದಲ್ಲಿ ರೌಡಿಗಳ ಪೆರೇಡ್

ಆನೇಕಲ್: ಇತ್ತೀಚೆಗೆ ನಗರದಲ್ಲಿ ಪುಡಿ ರೌಡಿಗಳ ಕಾಟ ಹಾಗೂ ಕೊಲೆ ಪ್ರಕರಣಗಳು ಹೆಚ್ಚಾದ ಹಿನ್ನೆಲೆ ಎಚ್ಚೆತ್ತ ಆನೇಕಲ್ ಉಪವಿಭಾಗ ಪೊಲೀಸ್​ ಪ್ರತಿ ಠಾಣಾ ಹಂತದಲ್ಲಿ ಪೆರೇಡ್​ಗೆ ಕರೆಸಿ ಎಚ್ಚರಿಕೆ ನೀಡಿದೆ.

ಆನೇಕಲ್ ಉಪವಿಭಾಗದ ಡಿವೈಎಸ್ಪಿ ಹೆಚ್.​ಎಂ.ಮಹದೇವಪ್ಪ ನೇತೃತ್ವದಲ್ಲಿ ಆನೇಕಲ್ ಪೊಲೀಸ್ ಠಾಣಾ ಅಂಗಳದಲ್ಲಿ ಪೆರೇಡ್​ ನಡೆಸಲಾಯಿತು. ಈ ವೇಳೆ ಕರೆದಿದ್ದ ಪೆರೇಡ್​ನಲ್ಲಿ ಹಲವು ರೌಡಿಗಳಿಗೆ ಎಚ್ಚರಿಕೆ ಸಹ ನೀಡಲಾಯಿತು. ಉಡಾಫೆ ಮಾತು, ಕೊಲೆ ಬೆದರಿಕೆ, ರಾಜಕಾರಿಣಿಗಳ ಮುಲಾಜಿಗೆ ಬಿದ್ದರೆ ಮನೆಗೆ ನುಗ್ಗಿ ತಪಾಸಣೆ ನಡೆಸಿ ಕ್ರಮ ಕೈಗೊಳ್ಳಲಾಗತ್ತದೆ ಎಂದು ಡಿವೈಎಸ್ಪಿ ಮಹದೇವಪ್ಪ ಎಚ್ಚರಿಕೆ ನೀಡಿದರು.

ಡಿವೈಎಸ್ಪಿ ಹೆಚ್.​ಎಂ.ಮಹದೇವಪ್ಪ

ಪ್ರತಿ ತಿಂಗಳು ಇಂತಹ ಪೆರೇಡ್ ನಡೆಸಲಾಗುತ್ತದೆ. ಉತ್ತಮವಾಗಿ ಬಾಳಿದರೆ ಅಂತವರನ್ನು ಕ್ಷಮಿಸಲಾಗುತ್ತದೆ. ಒಳ್ಳೆಯ ಜೀವನಕ್ಕೆ ಅನುವು ಸಹ ಮಾಡಿಕೊಡಲು ಸಹಕರಿಸಲಾಗುವುದು. ಇದಲ್ಲದೇ ವಿನಾ ಕಾರಣ ಸಮಾಜದಲ್ಲಿ ಅಶಾಂತಿ ಮೂಡಿಸಿದರೆ ಪೊಲೀಸ್ ಕ್ರಮ ಜರುಗಿಸಲಾಗುತ್ತದೆ ಎಂದರು.

ಪೊಲೀಸ್ ಇನ್ಸ್​ಪೆಕ್ಟರ್ ಕೃಷ್ಣ, ನೂತನ ಎಸ್ಐ ಮಧುಕುಮಾರ್ ಪೆರೇಡ್​ನ ರೌಡಿಗಳ ವಿವರ ಪಡೆದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.