ಬೆಂಗಳೂರು: ಸಿಗರೇಟ್ ತಂದು ಕೊಡಲಿಲ್ಲ ಅಂತಾ ಕುಡಿದ ಅಮಲಿನಲ್ಲಿ ಗ್ರಾಹಕನ ಮೇಲೆ 10 ಜನ ಪುಡಿರೌಡಿಗಳು ಹಲ್ಲೆ ಮಾಡಿರುವ ಘಟನೆ ಚಿಕ್ಕಜಾಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಇರುವ ವಿಐಟಿ ಕ್ರಾಸ್ ಬಳಿಯ ಡಾಬಾದಲ್ಲಿ ನಡೆದಿದೆ.
ಯಲಹಂಕದ ವಿಐಟಿ ಕ್ರಾಸ್ ಬಳಿ ಇರುವ ಡಾಬಾದಲ್ಲಿ ಊಟ ಪಾರ್ಸಲ್ ತೆಗೆದುಕೊಳ್ಳಲು ಬಂದಿದ್ದ ಯುವಕನ ಮೇಲೆ ಸಿಗರೇಟ್ ತಂದು ಕೊಡಲಿಲ್ಲ ಅನ್ನೋ ಕಾರಣಕ್ಕೆ 10 ಜನ ಪುಡಿರೌಡಿಗಳು ಹಲ್ಲೆ ನಡೆಸಿದ್ದಾರೆ. ಕಳೆದ ಭಾನುವಾರ ರಾತ್ರಿ 11 ಗಂಟೆಗೆ ನಡೆದ ಘಟನೆಯ ದೃಶ್ಯ ಡಾಬಾದ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಯುವಕನಿಕೆ 10 ಜನರ ಗುಂಪು ಮನಬಂದಂತೆ ಹೊಡೆಯುತ್ತಿದ್ದಾರೆ. ನನ್ನನ್ನು ಬಿಟ್ಟು ಬಿಡಿ ಅಂತ ಕಾಲಿಗೆ ಬಿದ್ದು ಕೇಳಿಕೊಂಡ್ರು ಕೇಳದೆ ಮೃಗಗಳಂತೆ ಅಮಾನವೀಯವಾಗಿ ಹಲ್ಲೆ ನಡೆಸಿದ್ದಾರೆ. ಸಿಮೆಂಟಿನ ರಾಡ್ ಮತ್ತು ಚೇರ್ನಿಂದ ಹಲ್ಲೆ ಮಾಡಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಇನ್ನು ಹಲ್ಲೆಯಿಂದಾಗಿ ತಲೆಗೆ ತೀವ್ರ ಪೆಟ್ಟು ತಿಂದ ಯುವಕ ಖಾಸಗಿ ಆಸ್ವತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಈ ಪ್ರಕರಣವನ್ನು ದಾಖಲಿಸಿಕೊಂಡಿರುವ ಚಿಕ್ಕಜಾಲ ಪೊಲೀಸರು ಸಿಸಿಟಿವಿ ದೃಶ್ಯ ಆಧರಿಸಿ ಪುಡಿರೌಡಿಗಳಿಗೆ ಬಲೆ ಬೀಸಿದ್ದಾರೆ.