ನೆಲಮಂಗಲ: ದಾಬಸ್ ಪೇಟೆಯ ನೂತನ ಪೊಲೀಸ್ ವಸತಿ ನಿಲಯಕ್ಕೆ ಬೆಂಗಳೂರು ಗ್ರಾಮಾಂತರ ಎಸ್ಪಿ ರವಿ ಡಿ ಚನ್ನಣ್ಣನವರ್ ಭೇಟಿ ನೀಡಿದರು.
ಈ ವೇಳೆ ಹಳೆಯ ಕ್ವಾರ್ಟರ್ಸ್ ನಲ್ಲಿ ವಾಸವಾಗಿದ್ದ ಪೊಲೀಸ್ ಸಿಬ್ಬಂದಿಯ ಮನೆಯವರು ಎಸ್ಪಿ ಸಾಹೇಬರನ್ನು ಭೇಟಿಯಾಗಿ ಹೊಸ ಕ್ವಾರ್ಟರ್ಸ್ ತಮಗೆ ಕೊಡುವಂತೆ ಮನವಿ ಮಾಡಿದರು. ಹೊಸ ಕ್ವಾರ್ಟರ್ಸ್ಗಳನ್ನು ಬ್ಯಾಚುಲರ್ಸ್ಗಳಿಗೆ ಕೊಟ್ಟಿದ್ದಾರೆ. ನಮಗೆ ಮಕ್ಕಳಿದ್ದಾರೆ ತಮಗೆ ಹೊಸ ಕ್ವಾರ್ಟರ್ಸ್ ಕೊಡುವಂತೆ ಮನವಿ ಮಾಡಿದರು. ತಕ್ಷಣವೇ ಪ್ರತಿಕ್ರಿಯಿಸಿದ ರವಿ ಡಿ ಚನ್ನಣ್ಣನವರ್, ಮದುವೆಯಾಗ್ಬೇಡಿ ಎನ್ನುವ ಮೂಲಕ ತಮಾಷೆ ಮಾಡಿದ್ರು. ಎಸ್ಪಿ ಸಾಹೇಬರ ಹಾಸ್ಯಕ್ಕೆ ಅಲ್ಲಿದ್ದ ಮಹಿಳೆಯರು ಸಹ ನಗೆಗಡಲಲ್ಲಿ ತೇಲಿದರು.
ಯಾರಿಗೆ ಮನೆ ಇಲ್ಲವೋ ಅಂತಹ ವ್ಯಕ್ತಿಗೆ ಮನೆ ಕೊಡಲಾಗಿದೆ. ಚ್ಯಾಚುಲರ್ ಅಂದ ಮಾತ್ರಕ್ಕೆ ಅವರಿಗೂ ತಂದೆ ತಾಯಿ ಇರುವುದಿಲ್ಲವೇ ಎಂದು ಪೊಲೀಸ್ ಪತ್ನಿಯರಿಗೆ ಸಾವಧಾನದಿಂದ ತಿಳಿಹೇಳಿದರು.