ಆನೇಕಲ್ : ಕಳೆದ ಜನವರಿ 6 ರಂದು ಆನೇಕಲ್ ಪಟ್ಟಣದ ಕೇಂದ್ರ ಸಚಿವ ಎ ನಾರಾಯಣಸ್ವಾಮಿ ಮನೆ ಮುಂದಿನ ಮುಖ್ಯ ರಸ್ತೆಯಲ್ಲಿ ಕಾರ್ ಅಡ್ಡಗಟ್ಟಿ ವ್ಯಕ್ತಿಯನ್ನು ಬರ್ಬರವಾಗಿ ಕೊಲೆ ಮಾಡಲಾಗಿತ್ತು. ಇಡೀ ಆನೇಕಲ್ ನಗರವನ್ನೇ ಬೆಚ್ಚಿ ಬಿಳಿಸಿದ್ದ ಕೊಲೆ ಇದಾಗಿತ್ತು.
ಹೆಚ್ಚಿನ ಓದಿಗೆ: ಆನೇಕಲ್ ರಿಯಲ್ ಎಸ್ಟೇಟ್ ಉದ್ಯಮಿ ಕೊಲೆ: ಮೂವರು ಆರೋಪಿಗಳ ಬಂಧನ
ಆಂಧ್ರ ಪ್ರದೇಶದ ನಗರಿ ಮೂಲದ ರಾಜಶೇಖರರೆಡ್ಡಿ(32) ಅಂದು ಭೀಕರವಾಗಿ ಕೊಲೆಯಾಗಿದ್ದರು. ಈ ಕೊಲೆಯನ್ನು ಜಮೀನು ವಿಷಯಕ್ಕೆ ಸಂಬಂಧಿಸಿದಂತೆ ತಮ್ಮನಾಯಕನಹಳ್ಳಿ ವಾಸಿ ಮೀಸೆ ಜಯರಾಮ್(57) ಮತ್ತವನ ಮಗ ಶಶಿ ಕುಮಾರ್ ಮತ್ತಿತರರು ಸೇರಿ ಕೊಲೆಮಾಡಿಸಿದ್ದಾರೆಂದು ಬೆಂಗಳೂರು ಗ್ರಾಮಾಂತರ ಎಸ್ಪಿ ವಂಶಿಕೃಷ್ಣ ಮಾಹಿತಿ ನೀಡಿದ್ದಾರೆ.
ಕೊಲೆಗೆ ಕಾರಣ:
ಬಿಟಿಎಂ ಬಡಾವಣೆಯ ವಾಸಿ ಸುಧಾಕರ ರೆಡ್ಡಿ-ಪದ್ಮ ದಂಪತಿಗಳಿಗೆ ಮೂರು ಜನ ಹೆಣ್ಣುಮಕ್ಕಳಿದ್ದು, ಮೂವರಿಗೂ ಮದುವೆಯಾಗಿತ್ತು. ಕೊನೆಯ ಮಗಳು ಸಿಂಧು ಗಂಡನ ಮನೆ ಬಿಟ್ಟು ತವರು ಮನೆಯಲ್ಲೇ ಇದ್ದಳು. ಈ ನಡುವೆ ಸುಧಾಕರರೆಡ್ಡಿ ತೀರಿಕೊಂಡ ಹಿನ್ನೆಲೆ ಮರಸೂರು - ಅತ್ತಿಬೆಲೆ, ಇಂಡ್ಲಬೆಲೆ ಭಾಗಗಳಲ್ಲಿ ಇದ್ದ ಆಸ್ತಿಗಳನ್ನು ನೋಡಿಕೊಳ್ಳಲೆಂದೇ ರಾಜಶೇಖರರೆಡ್ಡಿಯನ್ನು ಮನೆಯಲ್ಲಿಯೇ ಇರಿಸಿಕೊಂಡಿದ್ದ ಪದ್ಮ ಎಲ್ಲಾ ವ್ಯವಹಾರಗಳನ್ನು ರಾಜಶೇಖರರೆಡ್ಡಿಗೆ ವಹಿಸಿದ್ದರು.
ಈ ನಡುವೆ ಈ ಖಾಸಗಿ ಮಾಹಿತಿಯನ್ನು ಪಡೆದ ನಾಲ್ಕು ಜನರ ತಂಡ ಜಮೀನಿಗೆ ಅಗ್ರಿಮೆಂಟ್ ಮಾಡಿಕೊಂಡ ಹಾಗೆ ಬೋಗಸ್ ದಾಖಲೆ ಸೃಷ್ಟಿಸಿ ಜಮೀನು ಮಾರಾಟಕ್ಕೆ ತಯಾರಿ ನಡೆಸಿದ್ದರು. ಇದಕ್ಕೆ ಅವಕಾಶ ಕೊಡದ ರಾಜಶೇಖರರೆಡ್ಡಿ ಪೊಲೀಸ್ ಠಾಣೆ ಮತ್ತು ಕೋರ್ಟ್ ಮೆಟ್ಟಿಲೇರಿ ಆರೋಪಿಗಳ ಆಟಕ್ಕೆ ಕಡಿವಾಣ ಹಾಕಿದ್ದ. ಇದಕ್ಕೆ ಆ ಗುಂಪು ಸುಪಾರಿ ನೀಡಿ ಕೊಲೆ ಮಾಡಿಸಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಜಾಹಿರಾತು : ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ
ಆರೋಪಿಗಳ ವಿವರ:
- ಮೀಸೆ ಜಯರಾಮ್, ತಮ್ಮನಾಯಕನಹಳ್ಳಿ. ರಿಯಲ್‌ಎಸ್ಟೇಟ್ ದಲ್ಲಾಳಿ
- ಶಶಿಕುಮಾರ್, ತಮ್ಮನಾಯಕನಹಳ್ಳಿ, ಜಯರಾಂ ಮಗ.
- ಪ್ರತಾಪ್, ನೆರಳೂರು ತರಕಾರಿ ವ್ಯಾಪಾರಿ.
- ಒಂಟೆ ಆನಂದ, ಎಲೆಕ್ಟ್ರಿಷಿಯನ್, ಗುಮ್ಮಳಾಪುರ, ಕೃಷ್ಣಗಿರಿ ಜಿಲ್ಲೆ, ತಮಿಳುನಾಡು.
- ಸಂದೀಪ, ವ್ಯವಸಾಯ, ಸಿಡಿ ಹೊಸಕೋಟೆ.
- ಬನಹಳ್ಳಿ ಆಟೋ ಶ್ರೀನಿವಾಸ, ಬನಹಳ್ಳಿ
- ಕಾರ್ತಿಕ್, ಪ್ಲಮಿಂಗ್ ಕೆಲಸ, ಶೆಟ್ಟಹಳ್ಳಿ.
- ಗಣೇಶ್,ಗಾರೆ ಕೆಲಸ, ಕೋರ್ಟ್ ಹಿಂಭಾಗ, ಆನೇಕಲ್