ETV Bharat / state

ಕನ್ನಡ ಚಿತ್ರರಂಗ ಇತಿಹಾಸದಲ್ಲಿ ಪುಣ್ಯಟ್ಟ ಕಣಗಾಲ್ ಮರೆಯದ ಹೆಸರು: ಡಾ. ಮಹೇಶ ಜೋಶಿ - ETv Bharat kannada news

ಕನ್ನಡ ಚಿತ್ರರಂಗದ ಇತಿಹಾಸದಲ್ಲಿ ಪುಣ್ಯಟ್ಟ ಕಣಗಾಲ್ ಅವರು ಎಂದೆಂದೂ ಮರೆಯಲಾಗದ ಹೆಸರು ಎಂದು ಡಾ. ಮಹೇಶ ಜೋಶಿ ಹೇಳಿದರು.

'Januma Janumada Anubanda' programme
'ಜನುಮ ಜನುಮದ ಅನುಬಂಧ' ಕಾರ್ಯಕ್ರಮ
author img

By

Published : Dec 4, 2022, 9:08 PM IST

ಬೆಂಗಳೂರು : ಕನ್ನಡ ಚಿತ್ರರಂಗದ ಇತಿಹಾಸದಲ್ಲಿ ನಿರ್ದೇಶಕ ಪುಣ್ಯಟ್ಟ ಕಣಗಾಲ್ ಅವರು ಎಂದೆಂದೂ ಮರೆಯದ ಹೆಸರು ಅವರು ಕನ್ನಡದ ಕೀರ್ತಿಯನ್ನು ರಾಷ್ಟ್ರಮಟ್ಟಕ್ಕೆ ಕೊಂಡೊಯ್ದರು ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ. ಮಹೇಶ ಜೋಶಿ ಬಣ್ಣಿಸಿದರು. ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಪುಟ್ಟಣ್ಣ ಕಣಗಾಲ್‌ (ಟ್ರಸ್) ವತಿಯಿಂದ ಶ್ರೀ ಕೃಷ್ಣರಾಜ ಪರಿಷತ್ತಿನ ಮಂದಿರದಲ್ಲಿ ಜಂಟಿಯಾಗಿ ಏರ್ಪಡಿಸಿದ್ದ ಪುಟ್ಟಣ್ಣ ಕಣಗಾಲ್‌ ಅವರ ಜನ್ಮದಿನದ ಸಂಭ್ರಮ 'ಜನುಮ ಜನುಮದ ಅನುಬಂಧ' ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕ ಭಾಷಣವನ್ನು ಮಾಡಿದರು.

'ಗೆಜ್ಜಪೂಜೆ' ಚಿತ್ರ ಬಿಡುಗಡೆಯಾದ ಸಂದರ್ಭದಲ್ಲಿ ಚಿತ್ರಮಂದಿರಗಳ ಜೊತೆಗೆ ಹರವಸ್ತ್ರಗಳನ್ನು ಮಾರಾಟ ಮಾಡಲು ವ್ಯವಸ್ಥೆ ಮಾಡಿದ್ದನ್ನು ಸ್ಮರಿಸಿಕೊಂಡರು. ಚಿತ್ರವೊಂದು ಜನ ಸಾಮಾನ್ಯರ ಮೇಲೆ ತನ್ನ ನೈಜತೆಯಿಂದ ಎಂತಹ ಪರಿಣಾಮವನ್ನು ಉಂಟು ಮಾಡ ಬಎದು ಎನ್ನುವುದಕ್ಕೆ ಪುಟಾನವದ ಚಿತ್ರಗಳೇ ಸಾಕ್ಷಿ. ಪುಟ್ಟಣ್ಣನವರು ಹುಟ್ಟು ಹಾಕಿದ ಕಲಾವಿದರೆಲ್ಲರೂ ಎತ್ತರಕ್ಕೆ ಬೆಳೆದಿದ್ದು, ರಜನಿಕಾಂತ್ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರು ಪಡೆದರು ಎಂದರು.

ಚಿತ್ರನಟ ಶ್ರೀನಾಥ್ ಮಾತನಾಡಿ, ಪುಟ್ಟಣ್ಣನವರು ನನಗೆ ಮರುಜನ್ಮ ನೀಡಿದ ಗುರು. ಅವರು ಒಂದು ರೀತಿಯಲ್ಲಿ ವಿದ್ಯೆಯ ಪರ್ವತ, ಅವರು ಕಲಿಸಿದ್ದರಲ್ಲಿ ಶೇ.40ರಷ್ಟನ್ನು ತಮ್ಮಿಂದ ಮಾಡಲು ಆಗಲಿಲ್ಲ. ಸದಾ ಪರಿಪೂರ್ಣತೆಗೆ ಅವರು ಒತ್ತು ನೀಡುತ್ತಿದ್ದರು ಎಂದು ಹೇಳಿದರು.

ನಂತರ ಮಾತನಾಡಿದ ಚಿತ್ರನಟ ರಾಮಕೃಷ್ಣ ಅವರು, ಪುಟ್ಟಣ್ಣನವರಿಂದ ಬೆಳೆದವರ ಹೆಸರಿನಲ್ಲಿ ಸ್ಮಾರಕಗಳಿವೆ. ಆದರೆ ಅವರ ಹೆಸರಿನಲ್ಲಿಯೇ ಸೂಕ್ತ ಸ್ಮಾರಕವಿಲ್ಲ. ಅದಕ್ಕಾಗಿ ಸರ್ಕಾರದ ಮೇಲೆ ಒತ್ತಡ ಹಾಕಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಹಿರಿಯ ಛಾಯಾಗ್ರಾಹಕ ಬಸವರಾಜ್, ಪ್ರಗತಿ ಅಶ್ವತ್ಥ ನಾರಾಯಣ, ಕಲಾವಿದರೆಯಲಾದ ಪದ್ಮಾ ವಾಸಂತಿ, ರೇಖಾರಾವ್, ಚಲನಚಿತ್ರ ನಿರ್ದೇಶಕರ ಸಂಘದ ಅಧ್ಯಕ್ಷ ನಂಜುಡೇ ಗೌಡ, ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶಿವಾನಂದ ತಗಡೂರು ಸೇರಿದಂತೆ ಅನೇಕ ಗಣ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಖ್ಯಾತ ಗಾಯಕಿ ಶ್ರೀಮತಿ ಸ್ಮಿತಾ ಕಾರ್ತಿಕ್ ತಂಡದವರು ಪುಟ್ಟಣ್ಣ ಕಣಗಾಲ್ ಅವರ ಚಿತ್ರಗಳಿಂದ ಆಯ್ದ ಗೀತೆಗಳನ್ನು ಸುಮಧುರವಾಗಿ ಹಾಡಿ ಕಿಕ್ಕಿರಿದು ಸೇರಿದ್ದ ಪ್ರೇಕ್ಷಕರನ್ನು ರಂಜಿಸಿದರು.

ಇದನ್ನೂ ಓದಿ :ಕಾಗವಾಡದಲ್ಲಿ 14ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ: ರಾಜ್ಯದ ಗಡಿ ತಾಲೂಕಲ್ಲಿ ಮೊಳಗಲಿದೆ 'ಕನ್ನಡದ ಕಂಪು'

ETV Bharat Logo

Copyright © 2025 Ushodaya Enterprises Pvt. Ltd., All Rights Reserved.