ನೆಲಮಂಗಲ: ರಾಷ್ಟ್ರೀಯ ಹೆದ್ದಾರಿ 4ರ ದಾಬಸ್‌ಪೇಟೆಯ ಅಂಗಡಿ ಮುಂಗಟ್ಟುಗಳ ಮೇಲೆ ದಾಳಿ ನಡೆಸಿದ ಕನ್ನಡ ಸಂಘಟನೆಯ ಕಾರ್ಯಕರ್ತರು, ಏಕಾಏಕಿ ಕನ್ನಡೇತರ ಭಾಷೆಗಳಿರುವ ನಾಮಫಲಕಗಳಿಗೆ ಮಸಿ ಬಳಿದಿದ್ದಾರೆ. ಈ ಹಿನ್ನೆಲೆ ಸಾರ್ವಜನಿಕರು ಹಾಗೂ ಅಂಗಡಿ ಮಾಲೀಕರು ಬೇಸರ ವ್ಯಕ್ತಪಡಿಸಿದ್ದಾರೆ.
ತುಮಕೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 4ರ ಡಾಬಸ್‍ಪೇಟೆ ಪಟ್ಟಣದಲ್ಲಿ ಏಕಾಏಕಿ ಕಾರು ಮತ್ತು ಬೈಕ್ಗಳಲ್ಲಿ ಬಂದ ಕನ್ನಡ ಪರ ಸಂಘಟನೆಯ ಕಾರ್ಯಕರ್ತರು ನಾಮಫಲಕಳಿಗೆ ಮಸಿ ಬಳಿದಿದ್ದಾರೆ. ಇದಲ್ಲದೆ, ನಾಮಫಲಕಗಳನ್ನೂ ಹರಿದು ಹಾಕಿದ್ದಾರೆ.
ಕನ್ನಡಪರ ಸಂಘಟನೆಯ ಕಾರ್ಯಕರ್ತರ ಈ ಕೆಲಸಕ್ಕೆ ಅಂಗಡಿ ಮಾಲೀಕರು ಹಾಗೂ ಸಾರ್ವಜನಿಕರು ಬೇಸರ ವ್ಯಕ್ತಪಡಿಸಿದ್ದಾರೆ. ಸಾರ್ವಜನಿಕರ ಆಸ್ತಿ-ಪಾಸ್ತಿ ನಷ್ಟ ಮಾಡುವ ಬದಲು ನಮಗೆ ತಿಳುವಳಿಕೆ ನೀಡಿದ್ದರೆ ಸರಿಪಡಿಸಿಕೊಳ್ಳುತ್ತಿದ್ದೆವು. ಏಕಾಏಕಿ ಬಂದು ನಾಮಫಲಕಗಳನ್ನು ಹರಿದು ಹಾಕಿದ್ದು ಮತ್ತು ನಾಮಫಲಕಗಳಿಗೆ ಮಸಿ ಬಳಿದಿದ್ದು ಕನ್ನಡಪರ ಸಂಘಟನೆಗಳಿಗೆ ಶೋಭೆ ತರುವ ಕೆಲಸವಲ್ಲವೆಂದು ಬೇಸರ ವ್ಯಕ್ತ ಪಡಿಸಿದರು.