ETV Bharat / state

ಗುಂಡ್ಲುಪೇಟೆ ಯುವಕನ ಬೆತ್ತಲೆ ಮೆರವಣಿಗೆ ಖಂಡಿಸಿ ಆನೇಕಲ್​ನಲ್ಲಿ ಪ್ರತಿಭಟನೆ - anekal

ಗುಂಡ್ಲುಪೇಟೆಯಲ್ಲಿ ಯುವಕನೋರ್ವನ ಮೇಲೆ ದಬ್ಬಾಳಿಕೆ ನಡೆಸಿ ಬೆತ್ತಲೆ ಮೆರವಣಿಗೆ ಮಾಡಿಸಿದ್ದ ಪ್ರಕರಣವನ್ನು ಆನೇಕಲ್ ಪ್ರಗತಿ ಪರ ಸಂಘಟನೆಗಳ ಒಕ್ಕೂಟ ಖಂಡಿಸಿದೆ. ಅಲ್ಲದೆ, ಮಾನವ ಸರಪಳಿ ರಚಿಸಿ ಆರೋಪಿಗಳ ಗಡಿಪಾರಿಗೆ ಆಗ್ರಹಿಸಿದೆ.

ದಲಿತ ಯುವಕನ ಬೆತ್ತಲೆ ಮೆರವಣಿಗೆ ವಿರುದ್ದ ಆನೇಕಲ್ನಲ್ಲಿ ಪ್ರತಿಭಟನೆ
author img

By

Published : Jun 14, 2019, 2:12 PM IST

ಆನೇಕಲ್: ಗುಂಡ್ಲುಪೇಟೆಯಲ್ಲಿ ಯುವಕನೋರ್ವನ ಮೇಲೆ ನಡೆದಿದ್ದ ಹಲ್ಲೆ ಮತ್ತು ಬೆತ್ತಲೆ ಮೆರವಣಿಗೆಗೆ ವ್ಯಾಪಕ ಖಂಡನೆ ವ್ಯಕ್ತವಾಗಿದೆ.

ಯುವಕನ ಬೆತ್ತಲೆ ಮೆರವಣಿಗೆ ಖಂಡಿಸಿ ಆನೇಕಲ್​ನಲ್ಲಿ ಪ್ರತಿಭಟನೆ

ಮಾನವ ಸರಪಳಿ ಮೂಲಕ ಪ್ರತಿಭಟನೆ:

ಆನೇಕಲ್ ಪಟ್ಟಣದ ಅಂಬೇಡ್ಕರ್ ಪ್ರತಿಮೆಯಿಂದ ಹೊರಟ ದಲಿತ ಮುಖಂಡರು ಹಾಗು ವಿದ್ಯಾರ್ಥಿಗಳ ತಂಡ ಅಂಬೇಡ್ಕರ್ ವೃತ್ತದಲ್ಲಿ ಮಾನವ ಸರಪಳಿ ಕಪ್ಪು ಪಟ್ಟಿ ಕಟ್ಟಿಕೊಂಡು ಅಸ್ಪೃಶ್ಯತೆ ಆಚರಿಸಿದ ಜನರ ಕ್ರಮವನ್ನು ಖಂಡಿಸಿದರು. ಈ ಕುರಿತು ಜಿಲ್ಲಾಡಳಿತ, ತಾಲೂಕು ಆಡಳಿತ ದನಿ ಎತ್ತದಿರುವುದು ಅಸಡ್ಡೆಯನ್ನು ಎತ್ತಿ ತೋರಿಸುತ್ತಿದೆ ಎಂದು ಧಿಕ್ಕಾರ ಕೂಗಿದರು.

ವಿದ್ಯಾವಂತ ಯುವಕನಿಗೇ ಹೀಗಾದರೆ ಹೆಣ್ಣುಮಕ್ಕಳಿಗೆ, ಅನಕ್ಷರಸ್ಥರ ಗತಿ ಏನು ಎಂದು ಆತಂಕ ವ್ಯಕ್ತಪಡಿಸಿದರು. ಇಂತಹ ಕ್ರೂರ ಘಟನೆಗಳು ಎದುರಾದರೆ ಸಹಿಸುವುದು ಹೇಗೆ ಎಂದು ಸರ್ಕಾರವನ್ನು ಪ್ರಶ್ನಿಸಿದರು.

sample description
ETV Bharat Logo

Copyright © 2025 Ushodaya Enterprises Pvt. Ltd., All Rights Reserved.