ETV Bharat / state

ಲೋಹದ ಹಕ್ಕಿಗಳ ಹಾರಾಟದ ಧೂಳಿಗೆ ರೈತರು ಹೈರಾಣು:  ಪ್ರತಿಭಟನೆ - Protest by hibernation farmers for the flight dust

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲೂಕಿನ ಬೆಟ್ಟಕೋಟೆ ಗ್ರಾಮಸ್ಥರು ಏರ್​ಪೋರ್ಟ್​ ಆಡಳಿತ ಮಂಡಳಿ ವಿರುದ್ಧ ಪ್ರತಿಭಟನೆ ನಡೆಸಿದ್ದಾರೆ. ವಿಮಾನಗಳ ಹಾರಾಟದಿಂದ ಭಾರಿ ಪ್ರಮಾಣದಲ್ಲಿ ಧೂಳು ಉಂಟಾಗುತ್ತಿದ್ದು, ಇದನ್ನು ನಿಯಂತ್ರಿಸುವಂತೆ ಆಗ್ರಹಿಸಿದ್ದಾರೆ.

ರೈತರಿಂದ ಪ್ರತಿಭಟನೆ
author img

By

Published : Aug 16, 2019, 3:15 PM IST

ಬೆಂಗಳೂರು: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲೂಕಿನ ಬೆಟ್ಟಕೋಟೆ ಗ್ರಾಮಸ್ಥರು ಏರ್​ಪೋರ್ಟ್​ ಆಡಳಿತ ಮಂಡಳಿ ವಿರುದ್ಧ ಪ್ರತಿಭಟನೆ ನಡೆಸಿದರು.

ರೈತರಿಂದ ಪ್ರತಿಭಟನೆ

ಬೆಟ್ಟಕೋಟೆ ಗ್ರಾಮವು ಏರ್​ಪೋರ್ಟ್​ಗೆ ಇರುವ ಪರ್ಯಾಯ ಮಾರ್ಗ. ಕಳೆದ ಮೂರು ವರ್ಷಗಳಿಂದ ಕೆಐಎಎಲ್ 2ನೇ ರನ್ ವೇ ಕಾಮಗಾರಿ ಭರದಿಂದ ಸಾಗಿದ್ದು, ನಿತ್ಯ ಲೋಡ್​ಗಟ್ಟಲೇ ಮಣ್ಣು, ಜಲ್ಲಿ ಮತ್ತು ಎಂಸ್ಯಾಂಡ್​ಗಳನ್ನ ರನ್ ವೇ ಕಾಮಗಾರಿಗೆ ತಂದು ಸುರಿಯುತ್ತಿದ್ದಾರೆ. ಹೀಗಾಗಿ ನೂರಾರು ಲಾರಿಗಳ ಓಡಾಟ ಹಾಗೂ ಮಣ್ಣು ಸುರಿಯುತ್ತಿರುವ ಕಾರಣ ಸುತ್ತಮುತ್ತಲಿನ ಐದಾರು ಹಳ್ಳಿಗಳಿಗೆ ವೇಗವಾಗಿ ಬೀಸುತ್ತಿರುವ ಗಾಳಿಯಲ್ಲಿ ವಿಪರೀತ ಧೂಳು ಬರುತ್ತಿದೆ. ಇದರಿಂದ ಉಸಿರಾಟಕ್ಕೆ ತೊಂದರೆಯಾಗಿದೆ ಎಂದು ರೈತರು ಜಿಟಿಜಿಟಿ ಮಳೆಯನ್ನೂ ಲೆಕ್ಕಿಸದೇ ಪ್ರತಿಭಟನೆ ನಡೆಸಿದರು.

ರೈತರ ಆರೋಗ್ಯದ ಜೊತೆಗೆ ಅವರ ಬೆಳೆಗಳ ಮೇಲೂ ದುಷ್ಪರಿಣಾಮ ಬೀರಿದೆ. ಕಳೆದ ಬಾರಿ ಇದೇ ಸಮಸ್ಯೆಗೆ ಪರಿಹಾರ ನೀಡುತ್ತೇವೆ ಎಂದು ಹೇಳಿ ಹೋದ ಏರ್​ಪೋರ್ಟ್​ನ ಅಧಿಕಾರಿಗಳು ಇದುವರೆಗೂ ಕ್ರಮಕೈಗೊಂಡಿಲ್ಲ ಎಂದು ದೂರಿದರು.

ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಪ್ರಭಾರ ತಹಶೀಲ್ದಾರ್ ಬಾಲಕೃಷ್ಣ ಈ ಬಗ್ಗೆ ತಕ್ಷಣವೇ ಕ್ರಮ ಕೈಗೊಳ್ಳುವ ಕುರಿತು ರೈತರಿಗೆ ಭರವಸೆ ನೀಡಿದರು.

Intro:KN_BNG_01_16_KIAL_Aginst_Farmers_Akrosha_Ambarish_7203301
Slug: ಮೂರು ವರ್ಷಗಳಿಂದ ಬಗೆಹರಿಯದ ಸಮಸ್ಯೆ
ಬೇಸತ್ತ ಗ್ರಾಮಸ್ಥರಿಂದ ರಸ್ತೆ ತಡೆದು ಪ್ರತಿಭಟನೆ
ಅಸಮಾಧಾನ ಹೊರ ಹಾಕಿದ ಬೆಟ್ಟ ಕೋಟೆ ಗ್ರಾಮಸ್ಥರು

ಬೆಂಗಳೂರು: ಅವರೆಲ್ಲ ಕಳೆದ ಮೂರು ವರ್ಷಗಳಿಂದ ಇಂದಲ್ಲಾ ನಾಳೆ ಸಮಸ್ಯೆ ಬಗೆಹರಿಯುತ್ತೆ ಅಂತಲೆ ಶಾಂತಿಯುತವಾಗಿ ಕಾದು ಕುಳಿತಿದ್ರು. ಆದ್ರೆ ಪ್ರತಿ ಭಾರಿ ಸಮಸ್ಯೆ ಬಗೆ ಹೆಳಿಕೊಂಡಾಗಲು ಅಧಿಕಾರಿಗಳು ಕಣ್ಣೋರೆಸೂ ತಂತ್ರ ಮಾಡ್ತಿದ್ದನ್ನ ಕಂಡು ಕಂಡು ಬೇಸತ್ತ ಗ್ರಾಮಸ್ಥರು ಇಧೀಗ ಬೇರೆ ದಾರಿಯಿಲ್ಲದೆ ಹೋರಾಟದ ಹಾದಿ ಹಿಡಿದಿದ್ದಾರೆ. ಅದು ಯಾಕೆ ಅನ್ನೂದನ್ನ ನೀವೆ ನೋಡಿ.

ರಸ್ತೆಗೆ ಅಡ್ಡಲಾಗಿ ನಿಂತಿರೂ ಟ್ಯಾಂಕರ್ ಮತ್ತು ಟಿಪ್ಪರ್ ಲಾರಿಗಳು.. ರಸ್ತೆ ಬಂದ್ ತೆರವುಗೊಳಿಸವಂತೆ ಮನವೊಲಿಸಲು ಯತ್ನಿಸುತ್ತಿರೂ ಪೊಲೀಸರು.. ಜಿಟಿ ಟಿ ಮಳೆಯ ನಡುವೆಯು ಟಾರ್ಪಲ್ ಮುಖಾಂತರ ಪ್ರತಿಭಟನೆ ಮುಂದುವರೆಸುತ್ತಿರೂ ಸ್ಥಳಿಯ ರೈತರು.. ಹೌದು ಈ ದೃಶ್ಯಗಳೆಲ್ಲ ಕಂಡು ಬಂದಿದ್ದು, ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ತಾಲೂಕಿನ ಬೆಟ್ಟಕೋಟೆ ಗ್ರಾಮದ ಏರ್ಪೋಟ್ ಪರ್ಯಾಯ ರಸ್ತೆ ಬಳಿ. ಅಂದಹಾಗೆ ಈ ರೀತಿ ಮಳೆ ನಡುವೆಯು ಅನ್ನದಾತರು ಪ್ರತಿಭಟನೆ ನಡೆಸೂದಕ್ಕೆ ಕಾರಣವಾಗಿರೂದು ಕೆಂಪೇಗೌಡ ಅಂತರಾಷ್ಟ್ರಿಯಾ ವಿಮಾನ ನಿಲ್ಥಾಣದ ನಿರ್ಲಕ್ಷ್ಯ.

ಹೌದು ಕಳೆದ ಮೂರು ವರ್ಷಗಳಿಂದ ಕೆಐಎಎಲ್ ೨ ರನ್ ವೇ ಕಾಮಗಾರಿ ಭರದಿಂದ ಸಾಗಿದ್ದು, ಪ್ರತಿನಿತ್ಯ ಲೋಡ್ಗಟ್ಟಲೆ ಮಣ್ಣು ಜಲ್ಲಿ ಮತ್ತು ಎಂಸ್ಯಾಂಡ್ ಗಳನ್ನ ರನ್ ವೇ ಕಾಮಗಾರಿಗೆ ತಂದು ಸುರಿಯುತ್ತಿದ್ದಾರೆ. ಹೀಗಾಗಿ ನೂರಾರು ಲಾರಿಗಳ ಓಡಾಟ ಹಾಗೂ ಮಣ್ಣು ಸುರಿಯುತ್ತಿರೂ ಕಾರಣ ಸುತ್ತಮುತ್ತಲಿನ ಐದಾರು ಹಳ್ಳಿಗಳಿಗೆ ವೇಗವಾಗಿ ಬೀಸುತ್ತಿರೂ ಗಾಳಿ ಜೊತೆಗೆ ದೂಳು ಸಹ ಹೋಗಿ ತುಂಬಿಕೊಳ್ತಿದ್ದು, ದೂಳಿನ ಸಮಸ್ಯೆ ಬಗೆಹರಿಸುವಂತೆ ಕಳೆದ ೧೫ ದಿನಗಳಿಂದೆ ಸಹ ರೈತರು ಪ್ರತಿಭಟನೆ ಮುಖಾಂತರ ಒತ್ತಾಯಿಸಿದ್ರು. ಆದ್ರೆ ಅಂದು ಸ್ಥಳಕ್ಕಾಗಮಿಸಿ ಹುಸಿ ಭರವಸೆ ನೀಡಿ ಹೋಗಿದ್ದ ಏರ್ಪೋಟ್ ಆಡಳಿತ ಮಂಡಳಿ ಈ ವರೆಗೂ
ಸಮಸ್ಯೆ ಬಗೆ ಹರಿಸದಿದ್ದು, ಸುರಿಯುತ್ತಿರೂ ಜಿಟಿ ಜಿಟಿ ಮಳೆಯ ನಡುವೆಯೇ ಮತ್ತೆ ಸ್ಥಳಿಯರು ಹೋರಾಟದ ಹಾದಿ ಹಿಡಿದಿದ್ದಾರೆ.

ಕಳೆದ ಭಾರಿ ದೂಳಿನ ಸಮಸ್ಯೆ ವಿರೋಧಿಸಿ ರೈತರು ಪ್ರತಿಭಟನೆ ನಡೆಸಿದ ವೇಳೆ ಸ್ಥಳಕ್ಕಾಗಮಿಸಿದ್ದ ತಹಶೀಲ್ದಾರ್ ಮತ್ತು ಏರ್ಪೋಟ್ ಆಡಳಿತ ಮಂಡಳಿ ಅಧಿಕಾರಿಗಳು ಮುಂದಿನ ಹತ್ತು ದಿನಗಳಲ್ಲಿ ಸಮಸ್ಯೆ ಬಗೆಹರಿಸಿ ಹಾಳಾದ ಬೆಳೆಗಳಿಗೆ ಪರಿಹಾರ ಕೊಡಿಸೂ ಭರವಸೆ ನೀಡಿ ಹೋಗಿದ್ರಂತೆ. ಆದ್ರೆ ದಿನಗಳು ಕಳೆದ್ರು ಹಾಳಾದ ಬೆಳೆಗಳಿಗೆ ಪರಿಹಾರ ನೀಡುವದರ ಜೊತೆಗೆ ದೂಳಿನ ಸಮಸ್ಯೆ ಬಗೆ ಹರಿಸೂ ನಿಟ್ಟಿನಲ್ಲು ಅಧಿಕಾರಿಗಳು ಯಾವುದೇ ಕ್ರಮಗಳನ್ನ ಕೈಗೊಂಡಿಲ್ವಂತೆ. ಹೀಗಾಗಿ ನಮಗೆ ನೆಮ್ಮದಿಯಿಂದ ಜೀವನ ಮಾಡಲು ಆಗ್ತಿಲ್ಲ ಅಂತ ರೊಚಿಗೆದ್ದ ರೈತರು ಸುರಿಯುತ್ತಿರೂ ಮಳೆ ನಡುವೆಯೆ ಏರ್ಪೋಟ್ ೨ ನೇ ರನ್ ವೇ ಯ ರಸ್ತೆ ತಡೆದು ಪ್ರತಿಭಟನೆ ಮುಂದುವರೆಸಿದ್ರು. ಇನ್ನೂ ರೈತರ ಪ್ರತಿಭಟನೆ ನಡೆಸುತ್ತಿದ್ದಂತೆ ಸ್ಥಳಕ್ಕಾಗಮಿಸಿದ ದೇವನಹಳ್ಳಿಯ ನೂತನ ಪ್ರಭಾರ ತಹಶೀಲ್ದಾರ್ ಮತ್ತದೆ ಕಣ್ಣೋರಿಸಿ ರೈತರ ಮನವೊಲಿಸೂ ಪ್ರಯತ್ನ ಮಾಡಿದ್ರು.

ಬೈಟ್ :- ಹೆಚ್.ಬಾಲಕೃಷ್ಣ ಪ್ರಬಾರ ತಹಶಿಲ್ದಾರ್ ದೇವನಹಳ್ಳಿ

ಒಟ್ಟಾರೆ ಕಳೆದ ಮೂರು ವರ್ಷಗಳಿಂದ ಸಮಸ್ಯೆ ಬಗೆಹರಿಸುತ್ತಾರೆ ಅಂತ ಶಾಂತಿಯುತವಾಗಿ ಮನಃವಿಗಳನ್ನ ಸಲ್ಲಿಸಿ ಸಹಿಸಿಕೊಂಡಿದ್ದ ಸ್ಥಳೀಯರು ಇದೀಗ ಬೇರೆ ದಾರಿಯಿಲ್ಲದೆ ಹೋರಾಟದ ಹಾದಿ ಹಿಡಿದಿದ್ದಾರೆ. ಇನ್ನಾದ್ರು ಸ್ಥಳಿಯ ಅಧಿಕಾರಿಗಳು ಮತ್ತು ಏರ್ಪೋಟ್ ಆಡಳಿತ ಮಂಡಳಿ ಎಚ್ಚೆತ್ತು ದೂಳಿನ ಸಮಸ್ಯೆಯಿಂದ ರೈತರಿಗೆ ಮುಕ್ತಿ ಕೊಡಿಸೂ ಕಾರ್ಯ ಮಾಡಬೇಕಿದೆ.Body:NoConclusion:No
ETV Bharat Logo

Copyright © 2025 Ushodaya Enterprises Pvt. Ltd., All Rights Reserved.