ETV Bharat / state

ಮತಗಟ್ಟೆಯಲ್ಲೂ ಏಲಕ್ಕಿ ಮಾಲೆಯ ಕಂಪು.. ಮತದಾನ ಹೆಚ್ಚಿಸಲು ವೋಟಿಂಗ್​ ಕೇಂದ್ರಕ್ಕೆ ಸಿಂಗಾರ - ಮತಗಟ್ಟೆಯಲ್ಲೂ ಏಲಕ್ಕಿ ಮಾಲೆಯ ಕಂಪು

ಹಾವೇರಿ ವಿಧಾನಸಭಾ ಕ್ಷೇತ್ರದಲ್ಲಿ ಏಲಕ್ಕಿಮಾಲೆಯಿಂದ ಸಿಂಗರಿಸಿದ ಮತಗಟ್ಟೆ ಕೇಂದ್ರವನ್ನು ಸ್ಥಾಪಿಸಲಾಗಿದೆ.

ಏಲಕ್ಕಿಮಾಲೆಯಿಂದ ಸಿಂಗರಿಸಿದ ಮತಗಟ್ಟೆ ಕೇಂದ್ರ ಸ್ಥಾಪನೆ

author img

By

Published : May 9, 2023, 10:39 PM IST

ಏಲಕ್ಕಿ ಮಾಲೆ ತಯಾರಕ ಹೈದರಲಿ ಪಟವೇಗಾರ

ಹಾವೇರಿ : ಜಿಲ್ಲಾಡಳಿತದ ಮತದಾರರನ್ನ ಮತ ಕೇಂದ್ರಕ್ಕೆ ಸೆಳೆಯಲು ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ ಒಂದರಂತೆ ವೈಶಿಷ್ಟ್ಯಪೂರ್ಣ ಮತಕೇಂದ್ರ ಸ್ಥಾಪಿಸಿದೆ. ವಿಧಾನಸಭಾ ಕ್ಷೇತ್ರದಲ್ಲಿ ಪ್ರಮುಖವಾಗಿ ಆಕರ್ಷಿಸುವ ಥೀಮ್ ಇಟ್ಟುಕೊಂಡು ಈ ರೀತಿಯ ಕೇಂದ್ರಗಳನ್ನ ಸ್ಥಾಪಿಸಿದೆ. ಹಾವೇರಿ ವಿಧಾನಸಭಾ ಕ್ಷೇತ್ರದಲ್ಲಿ ಏಲಕ್ಕಿ ಮಾಲೆಯಿಂದ ಸಿಂಗರಿಸಿದ ಮತದಾನ ಕೇಂದ್ರವನ್ನು ಸ್ಥಾಪಿಸಲಾಗಿದೆ.

ಹಾವೇರಿ ಕಾರ್ಯನಿರ್ವಾಹಕ ಇಂಜಿನಿಯರ್​ ಕಚೇರಿಯಲ್ಲಿ ಏಲಕ್ಕಿ ಮಾಲೆಯ ಮತಗಟ್ಟೆ ನಿರ್ಮಿಸಲಾಗಿತ್ತು. ಮತಗಟ್ಟಿ ತನ್ನ ವಿಶಿಷ್ಟ ಸೌಂದರ್ಯದಿಂದ ಮತದಾರರನ್ನು ಕೈಬೀಸಿ ಕರೆಯುತ್ತಿದೆ. ಕಚೇರಿಯ ಮುಂಭಾಗದಲ್ಲಿ ಏಲಕ್ಕಿ ಮಾಲೆ ತಯಾರಿಸುವ ಕುಟುಂಬಗಳ ಚಿತ್ರಣ ಬರೆಯಲಾಗಿದೆ. ಮತ ಕೇಂದ್ರದ ಒಳಗೆ ಏಲಕ್ಕಿ ಮಾಲೆಗಳಿಂದ ಗೋಡೆ, ಟೇಬಲ್ ಮತ್ತು ಮತಗಟ್ಟೆಯ ಪೆಟ್ಟಿಗೆಯನ್ನು ಏಲಕ್ಕಿ ಮಾಲೆಗಳಿಂದ ಅಲಂಕರಿಸಲಾಗಿದೆ.

ಥೀಮ್ ಆಧಾರಿತ ಮತಗಟ್ಟೆ ಸ್ಥಾಪನೆ: ಹಾವೇರಿ ಜಿಲ್ಲಾಡಳಿತ ಹಾವೇರಿಯ ಸಾಂಪ್ರದಾಯಕ ಏಲಕ್ಕಿ ಮಾಲೆ ತಯಾರಿಸುವ ಪಟವೇಗಾರ ಕುಟುಂಬಕ್ಕೆ ಈ ಕಾರ್ಯ ಒಪ್ಪಿಸಿದೆ. ಸುಮಾರು 20 ದಿನಗಳಿಂದ ಈ ಕುಟುಂಬದ ಸದಸ್ಯರು ಏಲಕ್ಕಿ ಮಾಲೆಗಳನ್ನು ತಯಾರಿಸಿ ಮಂಗಳವಾರ ಸಂಜೆ ಮತಕೇಂದ್ರಕ್ಕೆ ಬಂದು ಮತಗಟ್ಟಿಯನ್ನ ಏಲಕ್ಕಿ ಮಾಲೆಗಳಿಂದ ಸಿಂಗರಿಸುತ್ತಿದ್ದಾರೆ. ಏಲಕ್ಕಿ ಕಂಪು ಮತಗಟ್ಟೆಯಲ್ಲಿ ಸೂಸುತ್ತಿದ್ದು, ಸುಮಾರು 200 ಕ್ಕೂ ಅಧಿಕ ಮಾಲೆಗಳಿಂದ ಮತಗಟ್ಟೆಯನ್ನ ಸಿಂಗರಿಸಲಾಗಿದೆ. ಇನ್ನು ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ ಒಂದರಂತೆ ಥೀಮ್ ಆಧಾರಿತ ಮತಗಟ್ಟೆ ಸ್ಥಾಪಿಸಲಾಗಿದೆ.

ಈ ಬಗ್ಗೆ ಏಲಕ್ಕಿ ಮಾಲೆ ತಯಾರಕ ಹೈದರಲಿ ಪಟವೇಗಾರ ಅವರು ಮಾತನಾಡಿದ್ದು, 'ಏಲಕ್ಕಿ ಮಾಲೆ ಎಂದರೆ ನೆನಪಿಗೆ ಬರುವುದು ಹಾವೇರಿ. ಇಲ್ಲಿನ ಜನರಿಗೆ ಏಲಕ್ಕಿ ಮಾಲೆ ಅಂದರೆ ಇಷ್ಟ. ಹೀಗಾಗಿ ನಾಳೆ ಮತದಾನ ನಡೆಯುತ್ತಿರುವುದರಿಂದ ಮತಗಟ್ಟೆಯನ್ನು ಜನರು ನೋಡಿ ಆಕರ್ಷಿತರಾಗಲಿ ಎಂದು ಈ ರೀತಿ ಅಲಂಕಾರವನ್ನು ಮಾಡಿದ್ದೇವೆ. ಒಂದು 20 ದಿವಸದಿಂದ ನಾವು ರೆಡಿ ಮಾಡಿದ್ದೇವೆ. ಮತ್ತೆ ನಾವು ಇಲ್ಲಿಗೆ ಬಂದು ರೆಡಿ ಮಾಡಲು ನಾಲ್ಕು ತಾಸು ಹಿಡಿದಿದೆ. ಇಲ್ಲಿ ಚಿಕ್ಕ ಮಾಲೆಯಿಂದ ದೊಡ್ಡ ಮಾಲೆಯವರೆಗೆ ಎಲ್ಲವೂ ಲಭ್ಯವಿವೆ. ಇಲ್ಲಿ ಅವರು ಬಂದು ನೋಡಬಹುದು. ಮತ ಚಲಾಯಿಸಲು ಬಂದವರು ಇಲ್ಲಿ ನೋಡಿದ್ರೆ ಅವರಿಗೆ ಐಡಿಯಾ ಬರಲಿದೆ. ಜಿಲ್ಲಾಡಳಿತದಿಂದಲೇ ಕರೆ ಮಾಡಿ ಪ್ರೋತ್ಸಾಹಿಸಿದ್ದಾರೆ. ಇದರಿಂದ ಭಾರಿ ಖುಷಿಯಾಗಿದೆ' ಎಂದರು.

ಕೃಷ್ಣಮೃಗ ವೈಶಿಷ್ಟ್ಯತೆ ಸಾರುವ ಮತಗಟ್ಟೆ: ಹಾನಗಲ್ ವಿಧಾನಸಭಾ ಕ್ಷೇತ್ರದಲ್ಲಿ ನವಿಲು ಧಾಮ, ಶಿಗ್ಗಾಂವ ವಿಧಾನಸಭಾ ಕ್ಷೇತ್ರದಲ್ಲಿ ವೀಳ್ಯದ ಎಲೆ, ಬ್ಯಾಡಗಿ ವಿಧಾನಸಭಾ ಕ್ಷೇತ್ರದಲ್ಲಿ ಮೆಣಸಿನಕಾಯಿ, ಹಿರೇಕೆರೂರು ವಿಧಾನಸಭಾ ಕ್ಷೇತ್ರದಲ್ಲಿ ಪರಿಸರ ಸ್ನೇಹಿ ಹಾಗೂ ರಾಣೇಬೆನ್ನೂರು ವಿಧಾನಸಭಾ ಕ್ಷೇತ್ರದಲ್ಲಿ ಕೃಷ್ಣಮೃಗ ವೈಶಿಷ್ಟ್ಯತೆ ಸಾರುವ ಮತಗಟ್ಟೆಗಳನ್ನು ವಿನ್ಯಾಸಗೊಳಿಸಿ ಅಲಂಕರಿಸಲಾಗಿದೆ.

2023 ರ ವಿಧಾನಸಭಾ ಚುನಾವಣೆಯ ಹಾವೇರಿ ಜಿಲ್ಲಾಡಳಿತ ಸಕಲ ಸಿದ್ಧತೆ ಮಾಡಿಕೊಂಡಿದೆ. ಅದರಲ್ಲೂ ಏಲಕ್ಕಿ ಕಂಪಿನ ನಗರದಲ್ಲಿ ಏಲಕ್ಕಿ ಮಾಲೆಗಳಿಂದ ಸಿಂಗರಿಸಿದ ಮತಗಟ್ಟೆ ಸ್ಥಾಪಿಸಿರುವುದು ಮತಗಟ್ಟೆಯನ್ನು ವಿಶೇಷವಾಗಿಸಿದೆ. ಜಿಲ್ಲಾಡಳಿತವು ಕೇಂದ್ರ ಚುನಾವಣಾ ಆಯೋಗದ ಮಾರ್ಗದರ್ಶನದಲ್ಲಿ ಈ ರೀತಿಯ ಮತಗಟ್ಟೆಗಳನ್ನ ಸ್ಥಾಪಿಸಿದೆ.

ಇದನ್ನೂ ಓದಿ: ಮತದಾನದ ಮಹತ್ವವನ್ನು ಸಾರುವ ಮಾದರಿ ಮತಗಟ್ಟೆ.. ಮಸ್ಟರಿಂಗ್ ಮತ್ತು ಡಿ ಮಸ್ಟರಿಂಗ್ ಸಿದ್ಧತೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.