ದೇವನಹಳ್ಳಿ: ಕೇಂದ್ರ ಸಚಿವರಾದ ಬಹಳ ದಿನಗಳ ನಂತರ ಎ. ನಾರಾಯಣಸ್ವಾಮಿ ಇಂದು ದೇವನಹಳ್ಳಿ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದರು. ಈ ವೇಳೆ ಚಿಕ್ಕಜಾಲ ಪೊಲೀಸ್ ಠಾಣೆಯ ಸಿಬ್ಬಂದಿ ಶಿವಕುಮಾರ್ ಮೇಲೆ ಜೀಪ್ ಹರಿದಿದೆ. ಪರಿಣಾಮ ಅವರು ಗಾಯಗೊಂಡಿದ್ದಾರೆ.
ಕೇಂದ್ರ ಸಚಿವರನ್ನು ಸ್ವಾಗತಿಸಲು ಅಪಾರ ಅಭಿಮಾನ ಬಳಗ ಏರ್ಪೋರ್ಟ್ ಟೋಲ್ನಲ್ಲಿ ಜಮಾಯಿಸಿತ್ತು. ಟೋಲ್ ಬಳಿ ಜೀಪ್ ಮೂಲಕ ಎ. ನಾರಾಯಣಸ್ವಾಮಿ ಅವರನ್ನ ಮೆರವಣಿಗೆ ಮೂಲಕ ಕರೆತರಲಾಗುತ್ತಿತ್ತು.
ಈ ವೇಳೆ, ಜೀಪ್ ಬಳಿ ಜನ ಮುತ್ತಿಕೊಳ್ಳಲು ಪ್ರಯತ್ನಿಸಿದ್ದರು. ಅವರನ್ನು ನಿಯಂತ್ರಣ ಮಾಡಲು ಮುಂದಾದ ಚಿಕ್ಕಜಾಲ ಪೋಲಿಸ್ ಠಾಣೆಯ ಸಿಬ್ಬಂದಿ ಶಿವಕುಮಾರ್ ಮೇಲೆ ಜೀಪ್ ಹರಿದಿದೆ. ಪರಿಣಾಮ ಅವರು ಗಾಯಗೊಂಡಿದ್ದಾರೆ. ಹೀಗಾಗಿ, ತಕ್ಷಣವೇ ಸ್ಥಳೀಯ ಆಸ್ಪತ್ರೆಗೆ ಪೊಲೀಸ್ ಸಹೋದ್ಯೋಗಿಗಳು ಕರೆದುಕೊಂಡು ಹೋದರು.
ಓದಿ: ಹೊಸ ಆವಿಷ್ಕಾರಗಳ ಮೂಲಕ ಕೃಷಿ ಕ್ಷೇತ್ರದ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬೇಕಿದೆ: ಉಪ ರಾಷ್ಟ್ರಪತಿ