ETV Bharat / state

ಪೊಲೀಸರ ದೌರ್ಜನ್ಯದಿಂದ ‌ತಂದೆ ನಾಪತ್ತೆ, ಮಗನಿಂದ ಎಸ್‌ಪಿಗೆ ದೂರು

ಹೊಸಕೋಟೆ ಠಾಣೆಯ ಪೊಲೀಸ್ ಸಬ್‌ ಇನ್ಸ್‌ಪೆಕ್ಟರ್ ರಾಜು ಮತ್ತು ನಾಲ್ವರು ಸಿಬ್ಬಂದಿ ಕೃಷ್ಣಪ್ಪ ಅವರನ್ನು ಠಾಣೆಗೆ ಕರೆಸಿ ದೌರ್ಜನ್ಯ ನಡೆಸಿ ಬೆದರಿಕೆ ಹಾಕಿದ್ದಾರೆ. ಕೃಷ್ಣಪ್ಪ ಮತ್ತು ಅವರ ಪುತ್ರರಿಗೆ ಊರಿನ ಜನರ ಮುಂದೆಯೇ ಲಾಠಿಯಿಂದ ಹೊಡೆದು ಅವಮಾನ ಮಾಡಿ, ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ..

father-missing-son-complinet-contrary-police
ಹೊಸಕೋಟೆ: ಪೊಲೀಸರ ದೌರ್ಜನ್ಯದಿಂದ ‌ತಂದೆ ನಾಪತ್ತೆ, ಮಗನಿಂದ ಎಸ್‌ಪಿಗೆ ದೂರು
author img

By

Published : Jan 8, 2021, 9:10 PM IST

ಹೊಸಕೋಟೆ : ಸಿವಿಲ್ ಕೇಸ್ ವಿಚಾರಕ್ಕೆ ಸಂಬಂಧಿಸಿದಂತೆ ಪೊಲೀಸರ ಕಿರುಕುಳದಿಂದ ತಮ್ಮ ತಂದೆ ನಾಪತ್ತೆಯಾಗಿದ್ದಾರೆ ಎಂದು ಮಗ ಬೆಂಗಳೂರು ಗ್ರಾಮಾಂತರ ಜಿಲ್ಲೆ ಹೆಚ್ಚುವರಿ ಎಸ್‌ಪಿಗೆ ದೂರು ನೀಡಿದ್ದು, ಹೊಸಕೋಟೆ ಪಿಎಸ್‌ಐ ರಾಜು ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.

father-missing-son-complinet-contrary-police
ಪೊಲೀಸರ ದೌರ್ಜನ್ಯದಿಂದ ‌ತಂದೆ ನಾಪತ್ತೆ, ಮಗನಿಂದ ಎಸ್‌ಪಿಗೆ ದೂರು

ಜಮೀನು ವಿಚಾರದಲ್ಲಿ ಪೊಲೀಸರು ಮತ್ತು ಸಿಬ್ಬಂದಿ ಕಿರುಕುಳದಿಂದ ವ್ಯಕ್ತಿಯೊಬ್ಬರು ನಾಪತ್ತೆಯಾಗಿದ್ದಾರೆ. ಹೊಸಕೋಟೆ ಠಾಣೆಯ ಸಬ್‌ಇನ್ಸ್‌ಪೆಕ್ಟರ್ ಮತ್ತು ಸಿಬ್ಬಂದಿ ವಿರುದ್ಧ ದೌರ್ಜನ್ಯ ನಡೆಸಿರುವ ಆರೋಪ ಕೇಳಿ ಬಂದಿದೆ. ಹೊಸಕೋಟೆ ತಾಲೂಕಿನ ಜಡಿಗೇನಹಳ್ಳಿ ಹೋಬಳಿಯ ಅತ್ತಿವಟ್ಟ ಗ್ರಾಮದ ಕೃಷ್ಣಪ್ಪ (80) ಅವರು ನಾಪತ್ತೆಯಾಗಿದ್ದು, ಜಿಲ್ಲೆ ಹೆಚ್ಚುವರಿ ಎಸ್‌ಪಿಗೆ ಪುತ್ರ ಮುನಿ ಆಂಜಿನಿ ದೂರು ನೀಡಿದ್ದಾರೆ.

ಓದಿ: ಗ್ರಾಪಂ ಚುನಾವಣೆಯಲ್ಲಿ ನಮ್ದೇ ಹವಾ ಅಂತಾರೆ ಡಿಕೆಶಿ.. ಕಾಂಗ್ರೆಸ್‌ ಶೇ.54ರಷ್ಟು ಮುನ್ನಡೆ ಸಾಧಿಸಿದೆಯಂತೆ..

ಹೊಸಕೋಟೆ ಠಾಣೆಯ ಪೊಲೀಸ್ ಸಬ್‌ ಇನ್ಸ್‌ಪೆಕ್ಟರ್ ರಾಜು ಮತ್ತು ನಾಲ್ವರು ಸಿಬ್ಬಂದಿ ಕೃಷ್ಣಪ್ಪ ಅವರನ್ನು ಠಾಣೆಗೆ ಕರೆಸಿ ದೌರ್ಜನ್ಯ ನಡೆಸಿ ಬೆದರಿಕೆ ಹಾಕಿದ್ದಾರೆ. ಕೃಷ್ಣಪ್ಪ ಮತ್ತು ಅವರ ಪುತ್ರರಿಗೆ ಊರಿನ ಜನರ ಮುಂದೆಯೇ ಲಾಠಿಯಿಂದ ಹೊಡೆದು ಅವಮಾನ ಮಾಡಿ, ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ.

ಕೇಸು ದಾಖಲು ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ. ಇದರಿಂದ ಮನನೊಂದ ಕೃಷ್ಣಪ್ಪ 5/1/2021 ರಂದು ಹೊಸಕೋಟೆಗೆ ಹೋಗಿ ಬರುವುದಾಗಿ ಹೇಳಿ ಹೋದವರು ನಾಪತ್ತೆಯಾಗಿದ್ದಾರೆ.

father-missing-son-complinet-contrary-police
ಹೊಸಕೋಟೆ: ಪೊಲೀಸರ ದೌರ್ಜನ್ಯದಿಂದ ‌ತಂದೆ ನಾಪತ್ತೆ, ಮಗನಿಂದ ಎಸ್‌ಪಿಗೆ ದೂರು

ಅತ್ತಿವಟ್ಟ ಗ್ರಾಮದ ಸರ್ವೆ ನಂಬರ್ 38ರಲ್ಲಿ 1.35 ಎಕರೆ/ ಗುಂಟೆ ಜಮೀನು ಕೃಷ್ಣಪ್ಪ ಅವರಿಗೆ ಸೇರಿದೆ. ಮುನಿ ಆಂಜಿನಿ ಮತ್ತು ಅವರ ತಮ್ಮ ಅದನ್ನು ವಿಭಾಗ ಮಾಡಿಕೊಂಡು ಸ್ವಾಧೀನ ಪಡಿಸಿಕೊಂಡಿದ್ದಾರೆ.

ಆದರೆ, ಅದೇ ಗ್ರಾಮದ ವಾಸಿಗಳಾದ ವೆಂಕಟರಮಣಪ್ಪ, ದೇವರಾಜು ಮತ್ತು ಇತರರು ಸದರಿ ಜಮೀನಿನಲ್ಲಿ ಅವರಿಗೆ ಸೇರಿದ ಸರ್ವೇ ನಂಬರ್ 37ರ ಜಮೀನು ಸೇರಿಕೊಂಡಿದೆ ಎಂದು ಹೇಳುತ್ತಿದ್ದಾರೆ.

ಈ ಕುರಿತು ಹೊಸಕೋಟೆ ಸಿವಿಲ್ ನ್ಯಾಯಾಲಯದಲ್ಲಿ ದೂರನ್ನು ದಾಖಲು ಮಾಡಲಾಗಿದೆ. ನ್ಯಾಯಾಲಯ ಪ್ರತಿಬಂಧ ಕಾಜ್ಞೆಯನ್ನು ನೀಡಿದೆ. ಆದರೆ, ವೆಂಕಟರಮಣಪ್ಪ, ದೇವರಾಜು ಮುಂತಾದವರು ರಾಜಕೀಯ ಬೆಂಬಲದಿಂದ ಪೊಲೀಸರಿಗೆ ಹಣ ನೀಡಿ ಕೃಷ್ಣಪ್ಪ ಮತ್ತು ಅವರ ಕುಟುಂಬಸ್ಥರ ಮೇಲೆ ಪೊಲೀಸರು ದಬ್ಬಾಳಿಕೆ ನಡೆಸಿದ್ದಾರೆ. ಕೃಷ್ಣಪ್ಪ ಅವರನ್ನು ಹುಡುಕಿ ಕೊಡುವಂತೆ ಮತ್ತು ಪೊಲೀಸರಿಂದ ಆದ ದೌರ್ಜನ್ಯದ ಬಗ್ಗೆ ಮುನಿ ಆಂಜಿನಿ ಹೆಚ್ಚುವರಿ ಎಸ್‌ಪಿಗೆ ದೂರನ್ನು ನೀಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.