ETV Bharat / state

ವಿದೇಶಿ ಏರ್​ಪೋರ್ಟ್​ ಮೀರಿಸುವಂತಿದೆ ಕೆಐಎಎಲ್ ಟರ್ಮಿನಲ್-2.. ನ.11ರಂದು ಮೋದಿಯಿಂದ ಲೋಕಾರ್ಪಣೆ

author img

By

Published : Oct 19, 2022, 1:12 PM IST

Updated : Nov 9, 2022, 12:18 PM IST

ದೇವನಹಳ್ಳಿ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಅತಿವೇಗದಲ್ಲಿ ಬೆಳೆದ ದೇಶದ ಮೂರನೇ ವಿಮಾನ ನಿಲ್ದಾಣ, ಈಗಾಗಲೇ ದಿನ ದಿನಕ್ಕೆ ಪ್ರಯಾಣಿಕರ ಸಂಖ್ಯೆ ದ್ವಿಗುಣಗೊಳ್ಳುತ್ತಿದೆ. ಸದ್ಯ ವರ್ಷದ ಪ್ರಯಾಣಿಕರ ದಟ್ಟಣೆ 1.6 ಕೋಟಿಗೆ ತಲುಪಿದೆ. ಆದರೆ ಪ್ರಸ್ತುತ ದಿನಗಳಲ್ಲಿ ಪ್ರಯಾಣಿಕ ಸಂಖ್ಯೆ ಹೆಚ್ಚಿದಂತೆ ಚೆಕ್ ಇನ್, ಇಮಿಗ್ರೇಷನ್, ಭದ್ರತಾ ತಪಾಸಣೆ, ಬ್ಯಾಗೇಜ್ ಪ್ರಕ್ರಿಯೆ ವಿಳಂಬವಾಗುತ್ತಿವೆ. ಹೀಗಾಗಿ ನಾಲ್ಕು ವರ್ಷದ ಹಿಂದೆಯೇ ಟರ್ಮಿನಲ್ -2 ನಿರ್ಮಾಣ ಕಾಮಗಾರಿ ಪ್ರಾರಂಭಿಸಲಾಯಿತು.

PM Modi to inaugurate kempegowda airport terminal

ದೇವನಹಳ್ಳಿ(ಬೆಂಗಳೂರು ಗ್ರಾಮಾಂತರ): ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ(KIAL) ಟರ್ಮಿನಲ್ -2ರ ಮೊದಲನೇ ಹಂತ ನವೆಂಬರ್ 11 ರಂದು ಪ್ರಧಾನಿ ನರೇಂದ್ರ ಮೋದಿಯವರಿಂದ ಲೋಕಾರ್ಪಣೆಯಾಗಲಿದೆ. ಉದ್ಯಾನನಗರಿ ಬೆಂಗಳೂರಿಗೆ ತಕ್ಕಂತೆ ಟರ್ಮಿನಲ್-2 ರ ಒಳಾಂಗಣವನ್ನು ಹಚ್ಚ ಹಸಿರಿನ ಉದ್ಯಾನವನ ಪರಿಕಲ್ಪನೆಯಲ್ಲಿ ನಿರ್ಮಿಸಿದ್ದು, ವಿದೇಶಿ ವಿಮಾನ ನಿಲ್ದಾಣಗಳನ್ನು ಮೀರಿಸುವಂಥ ಹೈಟೆಕ್​ ವ್ಯವಸ್ಥೆಯನ್ನು ಹೊಂದಿದೆ.

ದೇವನಹಳ್ಳಿ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ

ದೇಶದ 3ನೇ ವಿಮಾನ ನಿಲ್ದಾಣ: ದೇವನಹಳ್ಳಿ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಅತಿವೇಗದಲ್ಲಿ ಬೆಳೆಯುತ್ತಿರುವ ದೇಶದ ಮೂರನೇ ವಿಮಾನ ನಿಲ್ದಾಣವಾಗಿದೆ. ಈಗಾಗಲೇ ದಿನ ದಿನಕ್ಕೆ ಪ್ರಯಾಣಿಕರ ಸಂಖ್ಯೆ ಹೆಚ್ಚುತ್ತಿದ್ದು, ಅದಕ್ಕೆ ತಕ್ಕಂತೆ ಪ್ರತಿ ವರ್ಷಕ್ಕೆ 2 ಕೋಟಿ ಪ್ರಯಾಣಿಕರು ಬಂದುಹೋಗುವ ಸಾಮರ್ಥ್ಯವನ್ನು ಹೊಂದಿದೆ. ಸದ್ಯ ಪ್ರಯಾಣಿಕರ ದಟ್ಟನೆ 1.6 ಕೋಟಿಗೆ ತಲುಪಿದೆ. ಆದರೆ ಪ್ರಸ್ತುತ ದಿನಗಳಲ್ಲಿ ಪ್ರಯಾಣಿಕರ ಸಂಖ್ಯೆ ಹೆಚ್ಚಳ ಆಗುತ್ತಿದ್ದು, ಇದರಿಂದ ಚೆಕ್ ಇನ್, ಇಮಿಗ್ರೇಷನ್, ಭದ್ರತಾ ತಪಾಸಣೆ, ಬ್ಯಾಗೇಜ್ ಪ್ರಕ್ರಿಯೆಗಳು ವಿಳಂಬವಾಗುತ್ತಿವೆ. ಹೀಗಾಗಿ ನಾಲ್ಕು ವರ್ಷದ ಹಿಂದೆಯೇ ಟರ್ಮಿನಲ್ -2 ನಿರ್ಮಾಣ ಕಾಮಗಾರಿ ಪ್ರಾರಂಭಿಸಲಾಗಿತ್ತು.

ಟರ್ಮಿನಲ್ 2 ಸಾಮರ್ಥ್ಯ ಅಧಿಕ: ಟರ್ಮಿನಲ್ -2 ವೈಶಿಷ್ಟ್ಯತೆ ವಿಮಾನ ನಿಲ್ದಾಣದ ಟರ್ಮಿನಲ್ -2 ಅನ್ನು ಎರಡು ಹಂತಗಳಲ್ಲಿ ನಿರ್ಮಿಸಲಾಗುತ್ತಿದೆ. 2.55 ಲಕ್ಷ ಚದರ್​ ಮೀಟರ್ ವಿಸ್ತೀರ್ಣ ಇರುವ ಮೊದಲ ಹಂತವನ್ನು 13,000 ಕೋಟಿ ರೂ.ಗಳಲ್ಲಿ ನಿರ್ಮಾಣ ಮಾಡಲಾಗಿತ್ತು. ಆದರೆ ವಾರ್ಷಿಕ 2.5 ಕೋಟಿ ಪ್ರಯಾಣಿಕರ ಸಾಮರ್ಥ್ಯವಿರುವ, ಎರಡನೇ ಹಂತ 4.41 ಲಕ್ಷ ಚದರ್​ ಮೀಟರ್ ವಿಸ್ತೀರ್ಣವಿದ್ದು ಕಾಮಗಾರಿ ಪ್ರಾರಂಭವಾಗಿದೆ.

  • Do have a look at the beautiful Terminal-2 of the Kempegowda International Airport set to be inaugurated by PM Sri @narendramodi on 11th November.

    Billed as the garden terminal, Terminal-2 has been designed and developed to showcase the ethos of Namma Bengaluru as a garden city. pic.twitter.com/yxWymVAYaf

    — Dr Sudhakar K (@mla_sudhakar) October 18, 2022 " class="align-text-top noRightClick twitterSection" data=" ">

ಪರಿಸರ ಸ್ನೇಹಿ ಉದ್ಯಾನವನ: ಪ್ರಯಾಣಿಕರು ಟರ್ಮಿನಲ್ -2 ವನ್ನು ಪ್ರವೇಶಿಸಿದ ತಕ್ಷಣ ಉದ್ಯಾನವನದಂತೆ ಭಾಸವಾಗುವ ವಿನ್ಯಾಸ ಮಾಡಲಾಗಿದೆ. ಒಳಗಾಂಣಕ್ಕೆ ಹಚ್ಚ ಹಸಿರಿನ ಹೊದಿಕೆ ಹಾಕಲಾಗಿದೆ, ಚಿಕ್ಕ ಕುಂಡಗಳಲ್ಲಿ ಸ್ಥಳೀಯ ಸಸ್ಯ ಪ್ರಭೇದಗಳು, ಕೃತಕ ಜಲಪಾತ, ಸೂರ್ಯನ ಬೆಳಕು ನೇರವಾಗಿ ಟರ್ಮಿನಲ್ ಒಳಗೆ ಬೀಳುವಂತೆ ವಿನ್ಯಾಸಗೊಳಿಸಿದ್ದು, ಇದು ಪ್ರಯಾಣಿಕರ ಸ್ನೇಹಿ ವಿಮಾನ ನಿಲ್ದಾಣವಾಗಿದೆ.

Last Updated : Nov 9, 2022, 12:18 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.