ದೊಡ್ಡಬಳ್ಳಾಪುರ: ಕೇರಳದ ವ್ಯಕ್ತಿಯೊಬ್ಬನ ಪದವಿ ಅಂಕಪಟ್ಟಿ ಸೇರಿದಂತೆ ಪಾಸ್ಪೋರ್ಟ್ ಸಿಕ್ಕಿರುವ ಘಟನೆ ನಗರದಲ್ಲಿ ನಡೆದಿದ್ದು, ಇಲ್ಲಿನ ಕೆಎಸ್ಆರ್ಟಿಸಿ ಸಿಬ್ಬಂದಿ ಈ ಪತ್ರಗಳನ್ನು ಕಳೆದುಕೊಂಡಾತನಿಗೆ ಮರಳಿಸಲು ಹರಸಾಹಸಪಡುತ್ತಿದ್ದಾರೆ.
ವಾರದ ಹಿಂದೆ ಹಿಂದೂಪುರದಿಂದ ಬೆಂಗಳೂರಿಗೆ ಬರುತ್ತಿದ್ದ ಕೆಎಸ್ಆರ್ಟಿಸಿ ಬಸ್ನಲ್ಲಿ ಕೇರಳ ಮೂಲದ ರಿಬಿನ್ ಬೇಬಿ ಎಂಬಾತನ ಎಂಜಿನಿಯರಿಂಗ್ ಪದವಿಗೆ ಸಂಬಂಧಿಸಿದ ಎಲ್ಲಾ ವರ್ಷದ ಅಂಕಪಟ್ಟಿ ಹಾಗೂ ಪಾಸ್ಪೋರ್ಟ್ ಮೆಜೆಸ್ಟಿಕ್ ಬಸ್ ನಿಲ್ದಾಣದಲ್ಲಿ ದೊರಕಿದ್ದು, ಇವುಗಳನ್ನು ಮರಳಿಸಲು ಸಿಬ್ಬಂದಿ ಹರಸಾಹಸಪಡುತ್ತಿದ್ದಾರೆ.
ಅಂದು ಎಲ್ಲಾ ಪ್ರಯಾಣಿಕರು ಬಸ್ನಿಂದ ಇಳಿದ ಮೇಲೆ ನಿರ್ವಾಹಕನ ಕಣ್ಣಿಗೆ ಇವುಗಳು ಕಂಡಿದ್ದವು. ಈ ವೇಳೆ ಬಸ್ ನಿರ್ವಾಹಕ, ಚಾಲಕ ಈಶ್ವರ್ ನಾಯಕ್ ಎಂಬುವರ ಗಮನಕ್ಕೆ ತಂದಿದ್ದರು. ಇದೀಗ ಈ ಸಂಬಂಧ ಎಲ್ಲಾ ಅಂಕಪಟ್ಟಿಗಳನ್ನು ದೊಡ್ಡಬಳ್ಳಾಪುರ ಡಿಪೋ ವ್ಯವಸ್ಥಾಪಕ ಎಂ.ಬಿ.ಆನಂದ್ಗೆ ಒಪ್ಪಿಸಿದ್ದಾರೆ.
ಡಿಪೋ ವ್ಯವಸ್ಥಾಪಕರ ಪ್ರಾಮಾಣಿಕ ಪ್ರಯತ್ನ:
ಎಂಜಿನಿಯರ್ ಪದವಿ ಪೂರ್ಣಗೊಳಿಸಲು ಕಠಿಣ ಪರಿಶ್ರಮ ಅಗತ್ಯ. ಈ ರೀತಿ ಶ್ರಮ ಪಟ್ಟು ಪದವಿ ಪೂರ್ಣಗೊಳಿಸಿರುವ ವ್ಯಕ್ತಿ ಬಸ್ನಲ್ಲಿ ತನ್ನೆಲ್ಲಾ ಅಂಕಪಟ್ಟಿಗಳನ್ನು ಕಳೆದುಕೊಂಡಿರುವುದಕ್ಕೆ ಡಿಪೋ ವ್ಯವಸ್ಥಾಪಕ ಆನಂದ್ ಬೇಸರ ವ್ಯಕ್ತಪಡಿಸಿದ್ದಾರೆ.
ಪಾಸ್ಪೋರ್ಟ್ನಲ್ಲಿರುವ ಮೊಬೈಲ್ ಸಂಖ್ಯೆಗೆ ಕರೆ ಮಾಡಿದರೆ ನಾಟ್ ರೀಚಬಲ್ ಆಗಿದೆ. ಏನೆಲ್ಲಾ ಮಾಡಬೇಕೋ ಅದನ್ನೆಲ್ಲಾ ಮಾಡಿದ್ದೇನೆ. ಆದರೆ, ದಾಖಲೆಗಳನ್ನು ತಲುಪಿಸುವುದು ಹೇಗೆ ಎಂಬುದೇ ದೊಡ್ಡ ಪ್ರಶ್ನೆಯಾಗಿದೆ. ಅಂತಿಮವಾಗಿ ಮಾಧ್ಯಮದ ಮೂಲಕ ಅಂಕಪಟ್ಟಿ ಸೇರಿದಂತೆ ಪಾಸ್ಪೋರ್ಟ್ನ್ನು ಕಳೆದುಕೊಂಡಾತನಿಗೆ ತಲುಪಿಸಲು ಮುಂದಾಗಿರುವುದಾಗಿ ತಿಳಿಸಿದರು. ಅಲ್ಲದೇ, ದಾಖಲೆಗಳನ್ನು ತಂದುಕೊಟ್ಟ ಚಾಲಕ ಸೇರಿದಂತೆ ನಿರ್ವಾಹಕರ ಕಾರ್ಯಕ್ಕೆ ಮೆಚ್ಚುಗೆ ಸಹ ವ್ಯಕ್ತಪಡಿಸಿದರು.
ಕರೆ ಮಾಡಿ:
ದೊಡ್ಡಬಳ್ಳಾಪುರ ಡಿಪೋ ವ್ಯವಸ್ಥಾಪಕ ಎಂ.ಬಿ.ಆನಂದ್ 7760990367 ಸಂಖ್ಯೆಗೆ ಕರೆ ಮಾಡಿ ದಾಖಲೆಗಳನ್ನು ಪಡೆಯಬಹುದಾಗಿದೆ.
ಇಲ್ಲಿಗೆ ಸಂಪರ್ಕಿಸಿ: ದೊಡ್ಡಬಳ್ಳಾಪುರ ಕೆಎಸ್ಆರ್ಟಿಸಿ ಡಿಪೋ, ಸರ್ಕಾರಿ ಜೂನಿಯರ್ ಕಾಲೇಜು ಮುಂಭಾಗ, ದೊಡ್ಡಬಳ್ಳಾಪುರ.