ETV Bharat / state

ಸ್ಪೀಡ್ ಬ್ರೇಕರ್ ದಾಟಿದ ನಂತರ ಪಲ್ಟಿಯಾದ ಬಸ್; 20ಕ್ಕೂ ಹೆಚ್ಚು ಪ್ರಯಾಣಿಕರಿಗೆ ಗಾಯ - ಪ್ರಯಾಣಿಕರಿಗೆ ಗಾಯ

ಸ್ಪೀಡ್​ ಬ್ರೇಕರ್ ದಾಟಿದ ನಂತರ ಬಸ್ ಪಲ್ಟಿಯಾಗಿದ್ದು, ಪರಿಣಾಮ 20ಕ್ಕೂ ಹೆಚ್ಚು ಪ್ರಯಾಣಿಕರು ಗಾಯಗೊಂಡಿರುವ ಘಟನೆ ಹೊಸಕೋಟೆಯಲ್ಲಿ ನಡೆದಿದೆ.

ಪಲ್ಟಿಯಾದ ಬಸ್
ಪಲ್ಟಿಯಾದ ಬಸ್
author img

By ETV Bharat Karnataka Team

Published : Jan 8, 2024, 7:29 PM IST

Updated : Jan 8, 2024, 8:44 PM IST

ಗಾಯಾಳು ಸೈಯದ್

ಹೊಸಕೋಟೆ (ಬೆಂಗಳೂರು ಗ್ರಾಮಾಂತರ): ರಸ್ತೆಯಲ್ಲಿ ಹಾಕಲಾಗಿದ್ದ ಸ್ಪೀಡ್ ಬ್ರೇಕರ್ ದಾಟಿದ ಬಸ್ ತಕ್ಷಣವೇ ಸ್ಕಿಡ್ ಆಗಿ ಪಲ್ಟಿ ಹೊಡೆದು ರಸ್ತೆಯ ಬದಿಗೆ ಉರುಳಿ ಬಿದ್ದಿದೆ. ಅಪಘಾತದಿಂದಾಗಿ ಬಸ್​ನಲ್ಲಿದ್ದ 20ಕ್ಕೂ ಹೆಚ್ಚು ಪ್ರಯಾಣಿಕರು ಗಾಯಗೊಂಡಿದ್ದಾರೆ ಎಂಬ ಮಾಹಿತಿ ತಿಳಿದುಬಂದಿದೆ.

ಹೊಸಕೋಟೆ ತಾಲೂಕಿನ ಚಿಂತಾಮಣಿ - ಹೊಸಕೋಟೆ ಹೆದ್ದಾರಿಯ ಬನಹಳ್ಳಿ ಗೇಟ್ ಬಳಿ ಘಟನೆ ನಡೆದಿದೆ. ಬೆಂಗಳೂರಿನಿಂದ ಚಿಂತಾಮಣಿ ಕಡೆಗೆ ಹೊರಟಿದ್ದ ಖಾಸಗಿ ಬಸ್ ಅಪಘಾತಕ್ಕೆ ತುತ್ತಾಗಿದ್ದು, ಘಟನೆಯಲ್ಲಿ 20ಕ್ಕೂ ಹೆಚ್ಚು ಪ್ರಯಾಣಿಕರು ಗಾಯಗೊಂಡಿದ್ದಾರೆ. ಅವರನ್ನು ಹೊಸಕೋಟೆ ನಗರದ ವಿವಿಧ ಆಸ್ಪತ್ರೆಗಳಲ್ಲಿ ದಾಖಲು ಮಾಡಲಾಗಿದೆ.

ಬನಹಳ್ಳಿಯ ಬಳಿ ರಸ್ತೆಗೆ ಸ್ಪೀಡ್​ ಬ್ರೇಕರ್ ಹಾಕಲಾಗಿದ್ದು, ಹಂಪ್ಸ್ ದಾಟಿದ ತಕ್ಷಣವೇ ಬಸ್ ಸ್ಕಿಡ್​ ಆಗಿ ಪಲ್ಟಿ ಹೊಡೆದಿದೆ. ರಸ್ತೆಯ ಬದಿಗೆ ಬಸ್ ಉರುಳಿ ಬಿದ್ದಿದ್ದ ಪರಿಣಾಮ ಪ್ರಯಾಣಿಕರು ಗಾಯಗೊಂಡಿದ್ದಾರೆ. ಅದೃಷ್ಟಕ್ಕೆ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಸಣ್ಣಪುಟ್ಟ ಗಾಯಗಳೊಂದಿಗೆ ಪ್ರಯಾಣಿಕರು ಪಾರಾಗಿದ್ದಾರೆ. ಹೊಸಕೋಟೆ ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು ಪರಿಶೀಲನೆ ನಡೆಸಿದ್ದಾರೆ.

ಎರಡು ಬಸ್‌ಗಳ ಮಧ್ಯೆ ಮುಖಾಮುಖಿ ಡಿಕ್ಕಿ,ಇಬ್ಬರು ಸಾವು (ಪ್ರತ್ಯೇಕ ಘಟನೆ): ಎರಡು ಬಸ್‌ಗಳ ಮಧ್ಯೆ ಮುಖಾಮುಖಿ ಡಿಕ್ಕಿಯಾದ ಘಟನೆ ವಿಜಯಪುರ ತಾಲೂಕಿನ ಕವಲಗಿ ಗ್ರಾಮದ ಬಳಿ (6-1-24) ನಡೆದಿತ್ತು. ಭೀಕರ ರಸ್ತೆ ಅಪಘಾತದಲ್ಲಿ ಇಬ್ಬರು ಮಹಿಳೆಯರು ಮೃತಪಟ್ಟಿದ್ದು, ಹಲವು ಪ್ರಯಾಣಿಕರು ಗಂಭೀರವಾಗಿ ಗಾಯಗೊಂಡಿದ್ದರು. ಸಾಜೀದಾ ಬೇಗಂ ಮಕಾನದಾರ್ (36) ಮತ್ತು ರೋಹಿಣಿ ಪಂಚಾಳ (31) ಮೃತರು. ಸಾಜೀದಾ ಮೂಲತಃ ಬಸನವಬಾಗೇಬಾಡಿ ತಾಲೂಕಿನ ಡೋಣೂರ ಗ್ರಾಮದವರಾದರೆ, ಮೃತ ರೋಹಿಣಿ ಕಲಬುರಗಿ ಪಟ್ಟಣದ ನಿವಾಸಿ ಎಂದು ತಿಳಿದುಬಂದಿತ್ತು.

ಸಿಂದಗಿ ಮಾರ್ಗವಾಗಿ ವಿಜಯಪುರಕ್ಕೆ ಬರುತ್ತಿದ್ದ ಬಸ್‌ ಹಾಗೂ ವಿಜಯಪುರದಿಂದ ಸಿಂದಗಿಗೆ ಹೋಗುತ್ತಿದ್ದ ಬಸ್ ನಡುವೆ ಈ ಡಿಕ್ಕಿ ಸಂಭವಿಸಿತ್ತು. ಅಪಘಾತದಿಂದ ಸ್ಥಳದಲ್ಲಿ ಸಂಪೂರ್ಣ ಸಂಚಾರ ಅಸ್ತವ್ಯಸ್ತವಾಗಿತ್ತು. ಸುದ್ದಿ ತಿಳಿದು ಘಟನಾ ಸ್ಥಳಕ್ಕೆ ಬಂದ ಎಎಸ್ಪಿ ಶಂಕರ ಮಾರಿಹಾಳ, ಸಿಪಿಐ ರಾಯಗೊಂಡ ಜನಾರ ಹಾಗೂ ಸಿಬ್ಬಂದಿ ಸ್ಥಳೀಯರ ಸಹಾಯದ ಮೂಲಕ ಗಾಯಾಳುಗಳನ್ನು ಜಿಲ್ಲಾಸ್ಪತ್ರೆಗೆ ರವಾನೆ ಮಾಡಿದ್ದರು.

ಅಪಘಾತದ ಕಾರಣ ರಾಷ್ಟ್ರೀಯ ಹೆದ್ದಾರಿ 52ರಲ್ಲಿ ಸಂಪೂರ್ಣ ಸಂಚಾರ ಬಂದ್ ಆಗಿತ್ತು. ಇದರಿಂದಾಗಿ ಎರಡು ಬದಿಗೆ ಎರಡು ಮೂರು ಕಿಲೋಮೀಟರ್ ವರೆಗೂ ವಾಹನಗಳು ಸಾಲಗಟ್ಟಿ ನಿಂತಿದ್ದವು. ಸುಗಮ ಸಂಚಾರಕ್ಕೆ ಪೊಲೀಸರು ಹರಸಾಹಸಪಟ್ಟಿದ್ದರು. ಸ್ಥಳಕ್ಕೆ ಕ್ರೇನ್ ಹಾಗೂ ಜೆಸಿಬಿ ಆಗಮಿಸಿ ಅಪಘಾತಕ್ಕೊಳಗಾದ ಬಸ್​ಗಳನ್ನು ತೆರವು ಮಾಡಿತ್ತು. ವಿಜಯಪುರ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿತ್ತು.

ಇದನ್ನೂ ಓದಿ: ವಿಜಯಪುರ; ಎರಡು ಬಸ್‌ಗಳ ಮಧ್ಯೆ ಮುಖಾಮುಖಿ ಡಿಕ್ಕಿ, ಇಬ್ಬರು ಸಾವು

Last Updated : Jan 8, 2024, 8:44 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.