ETV Bharat / state

ಕ್ರೆಡಿಟ್​ ಕಾರ್ಡ್​ ಮಿತಿ ಹೆಚ್ಚಿಸುವುದಾಗಿ ಕರೆ: ದೊಡ್ಡಬಳ್ಳಾಪುರದ ವ್ಯಕ್ತಿಗೆ 58 ಸಾವಿರ ರೂ ವಂಚನೆ - ಈಟಿವಿ ಭಾರತ ಕನ್ನಡ

ಎಸ್​ಬಿಐ ಬ್ಯಾಂಕ್ ಹೆಸರಿನಲ್ಲಿ ಕರೆ ಮಾಡಿ ಕ್ರೆಡಿಟ್​ ಕಾರ್ಡ್​ನ ಸಾಲದ ಮಿತಿ ಹೆಚ್ಚಿಸುವುದಾಗಿ ಹೇಳಿ ವ್ಯಕ್ತಿಯೊಬ್ಬರ ಎರಡು ಬ್ಯಾಂಕ್​ ಖಾತೆಗಳಿಂದ 58 ಸಾವಿರ ರೂ ಎಗರಿಸಿರುವ ಘಟನೆ ದೊಡ್ಡಬಳ್ಳಾಪುರದಲ್ಲಿ ನಡೆದಿದೆ.

online-fraud-chikkaballaur-man-lost-his-money
ಕ್ರೆಡಿಟ್​ ಕಾರ್ಡ್​ ಮಿತಿ ಹೆಚ್ಚಿಸುವುದಾಗಿ ಕರೆ : 58 ಸಾವಿರ ಕಳೆದುಕೊಂಡ ಚಿಕ್ಕಬಳ್ಳಾಪುರದ ವ್ಯಕ್ತಿ
author img

By

Published : Dec 7, 2022, 7:41 PM IST

ದೊಡ್ಡಬಳ್ಳಾಪುರ: ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾ (ಎಸ್​ಬಿಐ) ಹೆಸರಿನಲ್ಲಿ ಕರೆ ಮಾಡಿದ ವ್ಯಕ್ತಿಯೋರ್ವ ಕ್ರೆಡಿಟ್ ಕಾರ್ಡ್ ಸಾಲದ ಮಿತಿ ಹೆಚ್ಚಿಸುವುದಾಗಿ ಹೇಳಿ ವ್ಯಕ್ತಿಯೊಬ್ಬರ ಎರಡು ಬ್ಯಾಂಕ್​​ ಖಾತೆಗಳಿಂದ 58 ಸಾವಿರ ರೂ ಎಗರಿಸಿರುವ ಘಟನೆ ದೊಡ್ಡಬಳ್ಳಾಪುರದಲ್ಲಿ ನಡೆದಿದೆ.

ನಗರದ ಬಸವೇಶ್ವರನಗರದ ನಿವಾಸಿಯಾದ ರಾಕೇಶ್‌ಗೆ ಕಳೆದ ಸೋಮವಾರ ಫೋನ್​ ಕರೆ ಬಂದಿತ್ತು. ಎಸ್​ಬಿಐ ಹೆಸರಿನಲ್ಲಿ ಕರೆ ಮಾಡಿದ ವ್ಯಕ್ತಿ, ಕ್ರೆಡಿಟ್ ಕಾರ್ಡ್‌ನ ಸಾಲದ ಮೊತ್ತದ ಮಿತಿ ಹೆಚ್ಚು ಮಾಡುತ್ತೇವೆ ಎಂದು ಹೇಳಿದ್ದಾನೆ. ಎಸ್​ಬಿಐ ಬ್ಯಾಂಕ್‌ನವರೇ ಫೋನ್ ಮಾಡಿದ್ದಾರೆ ಎಂದು ನಂಬಿದ ರಾಕೇಶ್, ಕರೆ ಮಾಡಿದ ವ್ಯಕ್ತಿಗೆ ಆಧಾರ್ ಕಾರ್ಡ್, ಖಾತೆಯ ಮಾಹಿತಿಯೊಂದಿಗೆ ಒಟಿಪಿ ನಂಬರ್ ಕೂಡಾ ಕೊಟ್ಟಿದ್ದಾರೆ. ಇದಾದ ಬಳಿಕ ಇವರ ಎಸ್​ಬಿಐ ಖಾತೆಯಲ್ಲಿದ್ದ 32 ಸಾವಿರ ರೂಪಾಯಿ ಮಾಯವಾಗಿದೆ.

ಕ್ರೆಡಿಟ್​ ಕಾರ್ಡ್​ ಮಿತಿ ಹೆಚ್ಚಿಸುವುದಾಗಿ ಕರೆ : 58 ಸಾವಿರ ಕಳೆದುಕೊಂಡ ಚಿಕ್ಕಬಳ್ಳಾಪುರದ ವ್ಯಕ್ತಿ

ಖಾತೆಯಲ್ಲಿ ತಾಂತ್ರಿಕ ತೊಂದರೆ ಕಂಡುಬಂದಿದೆ ಎಂದು ಹೇಳಿ ರಾಕೇಶ್ ಪತ್ನಿಯ ಬ್ಯಾಂಕ್ ಆಫ್ ಬರೋಡಾ ಖಾತೆಯ ಮಾಹಿತಿಯನ್ನೂ ಪಡೆದ ವಂಚಕ, ಖಾತೆಯಲ್ಲಿದ್ದ 26 ಸಾವಿರ ರೂಪಾಯಿ ಎಗರಿಸಿದ್ದಾನೆ. ಹೀಗೆ ತಮ್ಮ ಎರಡೂ ಬ್ಯಾಂಕ್​ ಖಾತೆಯಲ್ಲಿ ಹಣ ಖಾಲಿಯಾದ ಕೂಡಲೇ ಬ್ಯಾಂಕ್‌ಗೆ ಹೋಗಿ ವಿಚಾರಿಸಿದ್ದಾರೆ. ಬ್ಯಾಂಕ್‌ನಲ್ಲಿ ಸ್ಪಂದನೆ ದೊರೆಯದ ಹಿನ್ನೆಲೆಯಲ್ಲಿ ರಾಕೇಶ್​​ ಬೆಂಗಳೂರಿನ ಸೈಬರ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಇದನ್ನೂ ಓದಿ: ಲಿಂಕ್ ಕಳಿಸಿ ಒಂದೇ ದಿನ ಹತ್ತಾರು ಖಾತೆಗಳಿಗೆ ಕನ್ನ ಹಾಕಿದ ಸೈಬರ್ ವಂಚಕರು

ETV Bharat Logo

Copyright © 2025 Ushodaya Enterprises Pvt. Ltd., All Rights Reserved.