ದೊಡ್ಡಬಳ್ಳಾಪುರ : ನಗರದಲ್ಲಿ ಸುರಿದ ಭಾರಿ ಮಳೆಗೆ ವೃದ್ಧೆಯೊಬ್ಬರು ವಾಸವಾಗಿದ್ದ ಮನೆ ಗೋಡೆ ಕುಸಿದಿದೆ. ಇದರಿಂದ ಜರ್ಜರಿತವಾದ ಅಜ್ಜಿ ಆಶ್ರಯಕ್ಕಾಗಿ ಪರದಾಡುತ್ತಿದ್ದಾರೆ.
ನಗರದ ವೀರಭದ್ರನಪಾಳ್ಯದಲ್ಲಿ ಈ ಘಟನೆ ನಡೆದಿದೆ. ಅಕ್ಕಯಮ್ಮ ಎಂಬ ವೃದ್ಧೆ ಆಶ್ರಯ ಕಳೆದುಕೊಂಡಿದ್ದಾರೆ. ಸುಮಾರು 35 ವರ್ಷಗಳ ಹಿಂದೆ ವೃದ್ಧೆ ಹಾಗೂ ಅವರ ಗಂಡ ಗಾರೆ ಕೆಲಸ ಮಾಡಿ ಹಣ ಕೂಡಿಟ್ಟು ಮನೆ ಕಟ್ಟಿದ್ದರು. ಆದರೆ, ಇಂದು ಸುರಿದ ಮಳೆಗೆ ಮನೆಯ ಎಡ ಭಾಗದ ಗೋಡೆ ಕುಸಿದಿದೆ.
ಇಳಿವಯಸ್ಸಿನಲ್ಲಿ ಆಸರೆಯಾಗಬೇಕಿದ್ದ ಇದ್ದೊಬ್ಬ ಮಗ ಹೆಂಡತಿಯ ಮನೆ ಸೇರಿದ್ದಾನೆ. ಗಂಡ ಆರು ತಿಂಗಳ ಹಿಂದೆಯಷ್ಟೇ ಅನಾರೋಗ್ಯದಿಂದ ಮೃತರಾಗಿದ್ದಾರೆ. ಇದೀಗ ಈ ರೀತಿಯ ಅನಾಹುತ ಸಂಭವಿಸಿದ್ದರಿಂದ ಕಂಗಾಲಾದ ವೃದ್ಧೆ ದಿಕ್ಕು ತೋಚದೆ ಆಸರೆಗಾಗಿ ಕಣ್ಣೀರಿಡುತ್ತ ಕುಳಿತ್ತಿದ್ದಾರೆ.
ಓದಿ: ಬೆಳಗಾವಿಯಲ್ಲಿ ಯುವಕನ ಕೊಲೆ ಪ್ರಕರಣ: ಐವರು ಹಂತಕರಿಗೆ ಪೊಲೀಸ್ ಕಸ್ಟಡಿ, ಇನ್ನೈವರಿಗೆ ನ್ಯಾಯಾಂಗ ಬಂಧನ