ನೆಲಮಂಗಲ: ಸೋದರ ಮಾವನ ಮಗಳನ್ನ ಪ್ರೀತಿಸಿ ಮದುವೆಯಾಗಿದ್ದ. ಆದರೆ, ಈ ಮದುವೆ ವಧುವಿನ ಹೆತ್ತವರಿಗೆ ಇಷ್ಟವಿರಲಿಲ್ಲ, ಪೊಲೀಸರು ಎಂದು ಮನೆಗೆ ನುಗ್ಗಿದ 20 ಜನರ ಗ್ಯಾಂಗ್ ವಧುವನ್ನ ಅಪರಿಸಿಕೊಂಡು ಹೋಗಿದ್ದಾರೆ ಎನ್ನಲಾಗಿದೆ. ಇನ್ನು ಯುವತಿಯನ್ನು ಆಕೆಯ ಹೆತ್ತವರು ಅಪಹರಣ ಮಾಡಿದ್ದರೆಂದು ಪ್ರಕರಣ ದಾಖಲು ಮಾಡಲಾಗಿದೆ.
ಜಲಜಾ ಮತ್ತು ಗಂಗಾಧರ್ ನೆಲಮಂಗಲ ತಾಲೂಕಿನ ವೀರಸಾಗರ ನಿವಾಸಿಗಳು, ಸಂಬಂಧಿಗಳಾಗಿದ್ದ ಇಬ್ಬರು ಪರಸ್ಪರ ಪ್ರೀತಿ ಮಾಡುತ್ತಿದ್ದರು. ಆದರೆ, ಇವರಿಬ್ಬರ ಮದುವೆಗೆ ಜಲಜಾ ಹೆತ್ತವರ ವಿರೋಧ ಇತ್ತು. ಬೇರೆ ಹುಡುಗನನ್ನ ಹುಡುಕುತ್ತಿದ್ದರು.
ಗಂಗಾಧರ್ ಸಹ ಸುಮ್ಮನಾಗಿದ್ದ. ಆದರೆ, ಮದುವೆಯಾದರೆ ನಿನ್ನನ್ನು ಮಾತ್ರ ಇಲ್ಲವಾದರೆ ವಿಷ ಕುಡಿಯುವುದಾಗಿ ಜಲಜಾ ಹೇಳಿದ್ದಾಳೆ. ಪ್ರೀತಿಸಿದವಳ ಪ್ರೀತಿಗೆ ಕರಗಿದ ಗಂಗಾಧರ ಜುಲೈ 25 ರಂದು ದೇವಸ್ಥಾನದಲ್ಲಿ ಜಲಜಾರನ್ನ ಮದುವೆಯಾಗಿದ್ದಾರೆ. ಮೇ 30ರಂದು ನೆಲಮಂಗಲ ಉಪನೊಂದಣಿ ಕಚೇರಿಯಲ್ಲಿ ತಮ್ಮ ವಿವಾಹವನ್ನು ನೋಂದಣಿ ಸಹ ಮಾಡಿಕೊಂಡಿದ್ದಾರೆ.
ಮದುವೆ ನಂತರ ನವ ದಂಪತಿ ಗಂಗಾಧರ್ ಅಕ್ಕನ ಮನೆಯಲ್ಲಿ ಇದ್ದರು. ಬ್ಯಾಡರಹಳ್ಳಿ ಪೊಲೀಸರೆಂದು ಹೇಳಿಕೊಂಡು 20 ಜನರ ಗ್ಯಾಂಗ್ ಮನೆಗೆ ನುಗ್ಗಿ ಬಲವಂತವಾಗಿ ವಧುವನ್ನ ಅಪಹರಿಸಿಕೊಂಡು ಹೋಗಿದ್ದಾರೆ. ಅಪಹರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಗಂಗಾಧರ್ ಕುಟುಂಬ ಬ್ಯಾಡರಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿದೆ.
ಇದನ್ನೂ ಓದಿ: ಯುಪಿಎಸ್ಸಿಯ 31 ನೇ ರ‍್ಯಾಂಕ್ ಹೋಲ್ಡರ್ ಅವಿನಾಶ್ಗೆ ಐಎಫ್ಎಸ್ ಆಗುವಾಸೆ!