ETV Bharat / state

ರಾಜ್ಯದಲ್ಲಿ ಹೊಸ ಮರಳು ನೀತಿ ಜಾರಿ: ಏನೆಲ್ಲಾ ಷರತ್ತುಗಳಿವೆ? - bamgalore latest news

ತೆಲಂಗಾಣ ಮಾದರಿಯ ಮರಳು ನೀತಿಗೆ ರಾಜ್ಯ ಸರ್ಕಾರ ಕೆಲ ಸಣ್ಣಪುಟ್ಟ ಬದಲಾವಣೆ ಮಾಡಿ ಹೊಸ ಮರಳು ನೀತಿ ಜಾರಿಗೆ ತಂದಿದೆ. ಈ ಹೊಸ ಮರಳು ನೀತಿ ಪ್ರಕಾರ 1, 2, 3ನೇ ಶ್ರೇಣಿಯ ಹಳ್ಳ, ತೊರೆ ಮತ್ತು ಕೆರೆಗಳಲ್ಲಿ ಲಭ್ಯವಿರುವ ಮರಳನ್ನು ತೆಗೆಯುವ ಮತ್ತು ವಿಲೇವಾರಿ ಮಾಡುವ ಸಂಪೂರ್ಣ ಜವಾಬ್ದಾರಿಯನ್ನು ಸಂಬಂಧಿತ ಗ್ರಾಮ ಪಂಚಾಯತಿಗಳಿಗೆ ನೀಡಲಾಗಿದೆ.

New sand policy in the state of karataka
ರಾಜ್ಯದಲ್ಲಿ ಹೊಸ ಮರಳು ನೀತಿ ಜಾರಿ:
author img

By

Published : May 24, 2020, 3:28 PM IST

ಬೆಂಗಳೂರು: ರಾಜ್ಯ ಸರ್ಕಾರ ಇದೀಗ ರಾಜ್ಯದಲ್ಲಿ ಹೊಸ ಮರಳು ನೀತಿಯನ್ನು ಜಾರಿಗೆ ತಂದಿದೆ.

ಸರ್ಕಾರಿ ಮತ್ತು ಸಾರ್ವಜನಿಕ ನಿರ್ಮಾಣ ಕಾಮಗಾರಿಗಳಿಗೆ ನಿಯಮಿತವಾಗಿ ಮತ್ತು ಸುಲಭವಾಗಿ ಕೈಗೆಟಕುವ ದರದಲ್ಲಿ ಮರಳು ದೊರೆಯುವಂತೆ ಮತ್ತು ಪರಿಸರಕ್ಕೆ ಧಕ್ಕೆಯಾಗದಂತೆ ವೈಜ್ಞಾನಿಕವಾಗಿ ಮರಳು ಗಣಿಗಾರಿಕೆಗೆ ಅವಕಾಶ ಕಲ್ಪಿಸಲು ಹೊಸ ಮರಳು ನೀತಿ-2020 ನ್ನು ಜಾರಿಗೆ ತರಲಾಗಿದೆ.

ತೆಲಂಗಾಣ ಮಾದರಿಯ ಮರಳು ನೀತಿಗೆ ರಾಜ್ಯ ಸರ್ಕಾರ ಕೆಲ ಸಣ್ಣಪುಟ್ಟ ಬದಲಾವಣೆ ಮಾಡಿ ಹೊಸ ಮರಳು ನೀತಿ ಜಾರಿಗೆ ತಂದಿದೆ. ಈ ಹೊಸ ಮರಳು ನೀತಿ ಪ್ರಕಾರ 1, 2, 3ನೇ ಶ್ರೇಣಿಯ ಹಳ್ಳ, ತೊರೆ ಮತ್ತು ಕೆರೆಗಳಲ್ಲಿ ಲಭ್ಯವಿರುವ ಮರಳನ್ನು ತೆಗೆಯುವ ಮತ್ತು ವಿಲೇವಾರಿ ಮಾಡುವ ಸಂಪೂರ್ಣ ಜವಾಬ್ದಾರಿಯನ್ನು ಸಂಬಂಧಿತ ಗ್ರಾಮ ಪಂಚಾಯತಿಗಳಿಗೆ ನೀಡಲಾಗಿದೆ.

4, 5, 6 ನೇ ಶ್ರೇಣಿಯ ಹೊಳೆ‌ ನದಿಗಳಲ್ಲಿ ಹಾಗೂ ಬ್ಯಾರೇಜ್, ಅಣೆಕಟ್ಟು, ಜಲಾಶಯ ಮತ್ತು ಹಿನ್ನೀರಿನ ಪ್ರದೇಶದಲ್ಲಿ ಹೂಳು ತೆಗೆಯುವ ಮೂಲಕ ಸಿಗುವ ಮರಳನ್ನು ತೆಗೆದು, ದಾಸ್ತಾನು ಮಾಡಿ, ಗ್ರಾಹಕರಿಗೆ ಮಾರಾಟ ಮಾಡುವ ಸಂಪೂರ್ಣ ಹೊಣೆಗಾರಿಕೆಯನ್ನು ಸರ್ಕಾರಿ ಇಲಾಖೆ, ನಿಗಮ ಮತ್ತು ಮಂಡಳಿಗಳಿಗೆ ನೀಡಲಾಗಿದೆ.

ಅಕ್ರಮ ಮರಳುಗಾರಿಕೆಗೆ ಹೇಗೆ ಅಂಕುಶ: ಹೊಸ ಮರಳು ನೀತಿಯಲ್ಲಿ ಅಕ್ರಮ‌ ಮರಳುಗಾರಿಕೆಯನ್ನು ನಿಯಂತ್ರಿಸಲು ಹಲವು ಅಂಶಗಳನ್ನು ಸೇರಿಸಲಾಗಿದೆ.

ಆದೇಶ ಪತ್ರ
ಆದೇಶ ಪತ್ರ

ಅಕ್ರಮ ದಾಸ್ತಾನು, ಸಾಗಣೆ, ಮರಳು ಗಣಿಗಾರಿಕೆ ಮೇಲೆ ನಿಗಾವಹಿಸಲು ಮಿನರಲ್‌ ಪ್ರೊಟೆಕ್ಷನ್ ಫೋರ್ಸ್ ನ್ನು ರಚಿಸಲಾಗುವುದು. ಹೊಸ ಮರಳು ನೀತಿಯಲ್ಲಿ ಮರಳನ್ನು ಬಳಕೆದಾರರಿಗೆ ಆನ್​ಲೈನ್ ಬುಕ್ಕಿಂಗ್ ಮೂಲಕ ತಲುಪಿಸುವ ವ್ಯವಸ್ಥೆ ಕಲ್ಪಿಸಲಾಗಿದೆ. ಮರಳು ಸಾಗಣಿಕೆ ವಾಹನಗಳ ಚಲನವಲನಗಳ ಮೇಲೆ Sand Vehicle Tracking System ಮೂಲಕ ನಿಗಾ ವಹಿಸಲಾಗುತ್ತದೆ.

ಹೊರರಾಜ್ಯಗಳಿಂದ ಸಾಗಣೆಯಾಗುವ ಮರಳನ್ನು ರಾಜ್ಯದಲ್ಲಿ ಮಾರಾಟ ಮಾಡಬೇಕಿದ್ದಲ್ಲಿ ಸರ್ಕಾರ ನಿಗದಿಪಡಿಸಿರುವ ನಿಯಂತ್ರಣ ಶುಲ್ಕವನ್ನು ಪಾವತಿಸಬೇಕು. 1, 2, 3ನೇ ಶ್ರೇಣಿಯ ಹಳ್ಳ, ತೊರೆ ಮತ್ತು ಕೆರೆಗಳಿಂದ ತೆಗೆದ ಮರಳನ್ನು ಮನೆ, ಶೌಚಾಲಯ, ಹಾಗೂ ಸ್ಥಳೀಯ ನಿರ್ಮಾಣಗಳಿಗೆ ಮಾತ್ರ ಗ್ರಾಮ ಪಂಚಾಯತಿ ಪರವಾನಗಿ ಪಡೆದು ಲಘು ವಾಹನಗಳಾದ ಟ್ಯ್ರಾಕ್ಟರ್, ಎತ್ತಿನ ಗಾಡಿ ಮೂಲಕ ತಾಲೂಕು ವ್ಯಾಪ್ತಿಯ ಎಲ್ಲಾ ಗ್ರಾಮಗಳಿಗೆ ಮಾತ್ರ ಮರಳು ಸಾಗಿಸಬೇಕು.

4, 5, 6 ನೇ ಶ್ರೇಣಿಯ ಹೊಳೆ‌ ನದಿಗಳಲ್ಲಿ ಹಾಗೂ ಬ್ಯಾರೇಜ್, ಅಣೆಕಟ್ಟು, ಜಲಾಶಯ ಮತ್ತು ಹಿನ್ನೀರಿನ ಪ್ರದೇಶದಲ್ಲಿ ಸಿಗುವ ಮರಳನ್ನು ಸ್ಟಾಕ್ ಯಾರ್ಡ್ ಗೆ ಸಾಗಣಿಕೆ ಮಾಡಿ, ಅಲ್ಲಿಂದ ಜಿಪಿಎಸ್ ಅಳವಡಿಸಿರುವ ವಾಹನಗಳ ಮೂಲಕವೇ ಪರವಾನಿಗೆಯೊಂದಿಗೆ ಗ್ರಾಹಕರಿಗೆ ನೀಡಬೇಕು. ಮರಳು ಸಾಗಣಿಕೆ ವಾಹನಗಳ ಮಾಲೀಕರು ವಾಹನಗಳ ನೋಂದಣಿಯನ್ನು ಮರಳು ಮಿತ್ರ ಆ್ಯಪ್ ನಲ್ಲಿ ಮಾಡಬೇಕು. ಜೊತೆಗೆ ಜಿಪಿಎಸ್ ಹೊಂದಿರುವ ಪ್ರಮಾಣಪತ್ರ, ಇತರೆ ಪೂರಕ ದಾಖಲೆಗಳನ್ನು ಅಪ್​ಲೋಡ್ ಮಾಡಬೇಕು.

ಮರಳು ಸಾಗಣಿಕೆ ವಾಹನಗಳು ಜಿಪಿಎಸ್ ಅಳವಡಿಸಿಕೊಂಡು ಖನಿಜ‌ ರವಾನೆ ಪರವಾನಿಗೆಯಲ್ಲಿ ನಿಗದಿಪಡಿಸಿದ ಮಾರ್ಗದಲ್ಲೇ ಸಂಚರಿಸಬೇಕು. ಪರವಾನಿಗೆಗಿಂತ ಹೆಚ್ಚುವರಿ ಮರಳು ಸಾಗಿಸಿದರೆ ಪ್ರತಿ ಮೆಟ್ರಿಕ್ ಟನ್ ಹೆಚ್ಚುವರಿ ಮರಳಿಗೆ 3000 ರೂ. ದಂಡ ವಿಧಿಸಲಾಗುತ್ತದೆ. ಇನ್ನು ಜಿಪಿಎಸ್ ಇಲ್ಲದ ವಾಹನದಲ್ಲಿ ಸಾಗಣೆ ಮಾಡಿದರೆ ಪ್ರತಿ ವಾಹನಕ್ಕೆ 10,000 ರೂ. ದಂಡ ವಿಧಿಸಲಾಗುತ್ತದೆ.

ತೆಲಂಗಾಣ ಮಾದರಿ ಅವೈಜ್ಞಾನಿಕ:

ರಾಜ್ಯದಲ್ಲಿ ತೆಲಂಗಾಣ ಮಾದರಿಯ ಮರಳು ನೀತಿ ಜಾರಿಗೆ ತರಲಾಗಿದೆ. ಆದರೆ, ಕೇಂದ್ರ ಹಾಗೂ ತೆಲಂಗಾಣ ಮಾಲಿನ್ಯ ನಿಯಂತ್ರಣ ಮಂಡಳಿ ತೆಲಂಗಾಣ ಮಾದರಿ ಮರಳುಗಾರಿಕೆ ಅವೈಜ್ಞಾನಿಕ ಎಂದು ವರದಿ ನೀಡಿದೆ. ನದಿ ಪಾತ್ರಗಳಲ್ಲಿ ಮಿತಿಗಿಂತ ಹೆಚ್ಚಿನ ಪ್ರಮಾಣದಲ್ಲಿ ಮರಳನ್ನು ತೆಗೆಯಲಾಗಿದ್ದು, ಇದು ಪರಿಸರದ ಮೇಲೆ ಪ್ರತಿಕೂಲ ಪರಿಣಾಮ ಬೀರಲಿದೆ ಎಂದು ತಿಳಿಸಿದೆ. ಜೊತೆಗೆ ವಾಸ್ತವದಲ್ಲಿ ಮರಳನ್ನು ದುಪ್ಪಟ್ಟು ದರಕ್ಕೆ ಅವ್ಯಾಹತವಾಗಿ ಮಾರಲಾಗುತ್ತಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ. ಹೀಗಿದ್ದಾಗ ರಾಜ್ಯದಲ್ಲಿ ಹೊಸ ಮರಳು ನೀತಿ ತನ್ನ ಉದ್ದೇಶವನ್ನು ಈಡೇರಿಸಲಿದೆಯಾ ಎಂಬ ಬಗ್ಗೆ ಪರಿಸರ ತಜ್ಞರು ಅನುಮಾನ ವ್ಯಕ್ತಪಡಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.