ETV Bharat / state

ವೈಟ್‌ಫೀಲ್ಡ್ ಮಾರ್ಗದ ನಮ್ಮ ಮೆಟ್ರೋ ರೈಲು ಮಾರ್ಚ್​ನಲ್ಲಿ ಕಾರ್ಯಾರಂಭ - ನಮ್ಮ ಮೆಟ್ರೋ

ವೈಟ್‌ಫೀಲ್ಡ್ ಮಾರ್ಗದ ನಮ್ಮ ಮೆಟ್ರೋ ರೈಲು ಮಾರ್ಚ್ ನಲ್ಲಿ ಕಾರ್ಯಾರಂಭ - ಆಪ್ಶನಲ್‌ ವೆಂಡರ್‌ ಬಿಲ್‌ ಡಿಸ್ಕೌಂಟಿಂಗ್‌ ವ್ಯವಸ್ಥೆಗೆ ಮುಂದಾದ ಪಾಲಿಕೆ

Namma metro
ನಮ್ಮ ಮೆಟ್ರೋ
author img

By

Published : Feb 9, 2023, 10:51 AM IST

ಬೆಂಗಳೂರು : ಕೆ.ಆರ್.ಪುರಂ ನಿಂದ ಹೊರಡುವ ರೈಲುಗಳನ್ನು ಎರಡು ಹಂತಗಳಲ್ಲಿ ಪ್ರಾರಂಭಿಸಲು ಯೋಜಿಸಲಾಗಿದೆ. ವೈಟ್ ಫೀಲ್ಡ್ ವರೆಗಿನ 13 ಕಿ.ಮೀ. ಮರಗವನ್ನು ಮಾರ್ಚ್ ವೇಳೆಗೆ ವಾಣಿಜ್ಯ ಕಾರ್ಯಾಚರಣೆಗೆ ತರಲು ಯೋಜಿಸಿದ್ದು, ಉಳಿದಂತೆ ಕೆ.ಆರ್. ಪುರಂ ನಿಂದ ಬೈಯಪ್ಪನಹಳ್ಳಿ ವರೆಗಿನ ಮೆಟ್ರೋ ಮಾರ್ಗವನ್ನು ವರ್ಷದ ಮಧ್ಯದಲ್ಲಿ ತೆರೆಯಲಾಗುವುದು ಎಂದು ಬಿಎಂಆರ್‌ಸಿಎಲ್ ವ್ಯವಸ್ಥಾಪಕ, ನಿರ್ದೇಶಕ ಅಂಜುಮ್ ಪರ್ವೇಜ್ ಹೇಳಿದ್ದಾರೆ.

ಮುಂದಿನ ತಿಂಗಳಲ್ಲಿ ಆರಂಭವಾಗಲಿರುವ ಕೆ.ಆರ್. ಪುರಂ ಮತ್ತು ವೈಟ್‌ಫೀಲ್ಡ್ ಮಾರ್ಗದಲ್ಲಿ ನಮ್ಮ ಮೆಟ್ರೋ ರೈಲುಗಳು 10 ನಿಮಿಷಗಳ ಅಂತರದಲ್ಲಿ ಓಡಾಡಲಿವೆ. ಎರಡು ನಿಲ್ದಾಣಗಳ ನಡುವೆ ಸೇವೆ ನೀಡಲು ತಲಾ 6 ಕೋಚ್‌ಗಳಿರುವ 5 ಸೆಟ್ ರೈಲುಗಳನ್ನು ನಿಯೋಜಿಸಲು ಮುಂದಾಗಿದ್ದೇವೆ ಎಂದು ತಿಳಿಸಿದ್ದಾರೆ.

ಈಗಾಗಲೇ 4 ಮೆಟ್ರೋ ರೈಲುಗಳನ್ನು ವೈಟ್‌ಫೀಲ್ಡ್ ಡಿಪೋಗೆ ಸ್ಥಳಾಂತರಿಸಿದ್ದೇವೆ. ಮೆಟ್ರೋ ಸೇವೆ ಪ್ರಾರಂಭಿಸಲು 5 ಸೆಟ್ ರೈಲುಗಳು ಸಾಕು. ಅಗತ್ಯವಿದ್ದರೆ, ಹೆಚ್ಚುವರಿ ರೈಲುಗಳನ್ನು ನಿಯೋಜಿಸಲಾಗುವುದು. ತಡರಾತ್ರಿ ರೈಲುಗಳನ್ನು ಓಡಿಸುವ ಯಾವುದೇ ಪ್ರಸ್ತಾಪವಿಲ್ಲ. ಅಸ್ತಿತ್ವದಲ್ಲಿರುವ ವೇಳಾಪಟ್ಟಿಯಂತೆ ಕಾರ್ಯ ನಿರ್ವಹಿಸುತ್ತೇವೆ. ಸಂಪೂರ್ಣ ಮಾರ್ಗವು ಕಾರ್ಯಾರಂಭಿಸಿದ ನಂತರ, ಪ್ರಯಾಣಿಕರ ಸಂಖ್ಯೆ ದಿನಕ್ಕೆ 2.5 ಲಕ್ಷದಷ್ಟು ಏರಿಕೆಯಾಗುವ ನಿರೀಕ್ಷೆಯಿದೆ ಎಂದು ಹೇಳಿದ್ದಾರೆ.

400 ಕೋಟಿ ಸಾಲ ಪಡೆಯಲು ಸಿಕ್ಕ ಗ್ರೀನ್ ಸಿಗ್ನಲ್ : ಬೆಂಗಳೂರು ನಗರ ವ್ಯಾಪ್ತಿಯ ಕಾಮಗಾರಿಗಳ ಬಾಕಿ ಬಿಲ್ ಪಾವತಿಗೆ 400 ಕೋಟಿ ರೂಪಾಯಿಗಳ ಬ್ಯಾಂಕ್ ಸಾಲ ಪಡೆಯಲು ಬಿಬಿಎಂಪಿಗೆ ರಾಜ್ಯ ಸರ್ಕಾರ ಸಮ್ಮತಿ ಸೂಚಿಸಿದ್ದು, ಇದರೊಂದಿಗೆ ಆನ್ಲೈನ್ ಮೂಲಕ ಆಪ್ಶನಲ್‌ ವೆಂಡರ್‌ ಬಿಲ್‌ ಡಿಸ್ಕೌಂಟಿಂಗ್‌ ತರಲು ಪಾಲಿಕೆ ಮುಂದಾಗಿದೆ.

ಗುತ್ತಿಗೆದಾರರಿಗೆ 2020-2021, 2021-2022 ಹಾಗೂ 2022-2023 ವರ್ಷಗಳಲ್ಲಿನ ಕಾಮಗಾರಿ ಹಣ 2,782 ಕೋಟಿ ರೂ. ಬರಬೇಕಿದೆ. ಹೀಗಾಗಿ, ಗುತ್ತಿಗೆದಾರರು ಬ್ಯಾಂಕ್ ಬಡ್ಡಿದರ ಪಾವತಿಸಲು ಈ ಹೊಸ ವ್ಯವಸ್ಥೆ ಸಹಕಾರಿಯಗಲಿದೆ. ಗುತ್ತಿಗೆದಾರರ ಬಾಕಿ ಬಿಲ್‌ಗಳ ತೆರವು ಮಾಡಲು ಹೊಸ ಯೋಜನೆಯಲ್ಲಿ ನಗದು ಕೊರತೆ ಇತ್ತು. ಹೀಗಾಗಿಯೇ ರಾಜ್ಯ ಸರ್ಕಾರ ಹಣ ಪಡೆಯಲು ಬಿಬಿಎಂಪಿ ಸಮ್ಮತಿಸಿದೆ. ಅದಕ್ಕಾಗಿ ವಿನೂತನ ಯೋಜನೆ ಹೊರತರಲು ಬ್ಯಾಂಕ್ ಅನ್ನು ಆಯ್ಕೆ ಮಾಡುವ ಪ್ರಕ್ರಿಯೆಯನ್ನು ತ್ವರಿತಗೊಳಿಸಲು ಬಿಬಿಎಂಪಿಗೆ ಸೂಚಿಸಿದೆ.

ಆಪ್ಶನಲ್‌ ವೆಂಡರ್‌ ಬಿಲ್‌ ಡಿಸ್ಕೌಂಟಿಂಗ್‌ ವ್ಯವ‌ಸ್ಥೆ : ಬ್ಯಾಂಕ್ ಸಾಲ ಪಡೆದು ಗುತ್ತಿಗೆದಾರರಿಗೆ ಅನುಕೂಲ ಮಾಡಿಕೊಡಲು 'ಆಪ್ಶನಲ್‌ ವೆಂಡರ್‌ ಬಿಲ್‌ ಡಿಸ್ಕೌಂಟಿಂಗ್‌ ವ್ಯವ‌ಸ್ಥೆ' (ಒವಿಡಿಎಸ್‌) ತರಲಾಗುತ್ತಿದೆ. ಇದರಿಂದಲೇ ಕಾಮಗಾರಿಗಳ ಬಾಕಿ ಇರುವ ಬಿಲ್‌ ಗುತ್ತಿಗೆದಾರರಿಗೆ ಪಾವತಿ ಆಗಲಿದೆ. ಈ ವ್ಯವಸ್ಥೆಯಲ್ಲೂ ಬಿಲ್‌ಗಳ ಜೇಷ್ಠತೆಯಡಿ ಬಿಬಿಎಂಪಿ ಹಣ ನೀಡಲಿದೆ. ಈ ವ್ಯವಸ್ಥೆಯಲ್ಲಿ ನಕಲಿ ಬಿಲ್‌ ಸಲ್ಲಿಸಿ ಹಣ ಪಡೆಯಲು ಅವಕಾಶ ಇಲ್ಲ ಎಂದು ಬಿಬಿಎಂಪಿ ಅಧಿಕಾರಿಗಳು ತಿಳಿಸಿದ್ದಾರೆ.

ಇದನ್ನೂ ಓದಿ :ಬ್ರಾಹ್ಮಣರು ಯಾಕೆ ಸಿಎಂ ಆಗಬಾರದು?: ಹೆಚ್​ಡಿಕೆ ಹೇಳಿಕೆಗೆ ಪೇಜಾವರ ಶ್ರೀ ಬೇಸರ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.