ETV Bharat / state

ಎಂಟಿಬಿ, ಶರತ್ ಬೆಂಬಲಿಗರ ನಡುವೆ ಗಲಾಟೆ: ಪೊಲೀಸರಿಂದ ಲಾಠಿ ಚಾರ್ಜ್ - ಸಚಿವ ಎಂಟಿಬಿ ನಾಗರಾಜ್​​​

ಪರಿಸ್ಥಿತಿ ನಿಯಂತ್ರಿಸಲು ಪೊಲೀಸರು ಲಾಠಿ ಚಾರ್ಜ್ ಮಾಡಿದ್ದು ಹಲವರಿಗೆ ಗಂಭೀರ ಗಾಯಗಳಾಗಿವೆ. ಅಧಿಕಾರಿಗಳು ಹಾಗೂ ಶರತ್ ಬಚ್ಚೇಗೌಡ ಬೆಂಬಲಿಗರ ಮಧ್ಯೆ ಮಾತಿನ ಚಕಮಕಿ ನಡೆದಿದ್ದು, ಗಲಭೆ ನಿಯಂತ್ರಿಸಲು ಮತ್ತಷ್ಟು ಸಿಬ್ಬಂದಿಯನ್ನು ಪೊಲೀಸರು ಕರೆಸಿದ್ದಾರೆ.

workshop
ಎಂಟಿಬಿ, ಶರತ್ ಬೆಂಬಲಿಗರ ನಡುವೆ ಗಲಾಟೆ
author img

By

Published : Jan 30, 2021, 1:44 PM IST

ಹೊಸಕೋಟೆ (ಬೆಂಗಳೂರು ಗ್ರಾಮಾಂತರ): ಕಾಮಗಾರಿಗಳ ಉದ್ಘಾಟನೆ ವೇಳೆ ಸಚಿವ ಎಂಟಿಬಿ ನಾಗರಾಜು ಮತ್ತು ಶಾಸಕ ಶರತ್ ಬಚ್ಚೇಗೌಡ ಬೆಂಬಲಿಗರು ಗಲಾಟೆ ಮಾಡಿಕೊಂಡಿದ್ದಾರೆ. ಸಮಾರಂಭಕ್ಕೆ ಶರತ್ ಬಚ್ಚೇಗೌಡರನ್ನು ಆಹ್ವಾನಿಸಿಲ್ಲ ಎಂದು ಅವರ ಬೆಂಬಲಿಗರು ಆರೋಪಿಸಿದ್ದಾರೆ. ಈ ವೇಳೆ, ಎಂಬಿಟಿ ಹಾಗೂ ಶರತ್​​ ಬೆಂಬಲಿಗರು ಕೈ ಕೈ ಮಿಲಾಯಿಸಿಕೊಂಡಿದ್ದಾರೆ.

ಎಂಟಿಬಿ ಹಾಗೂ ಶರತ್ ಬೆಂಬಲಿಗರ ನಡುವೆ ಗಲಾಟೆ

ಪರಿಸ್ಥಿತಿ ನಿಯಂತ್ರಿಸಲು ಪೊಲೀಸರು ಲಾಠಿ ಚಾರ್ಜ್ ಮಾಡಿದ್ದು ಹಲವರಿಗೆ ಗಂಭೀರ ಗಾಯಗಳಾಗಿವೆ. ಅಧಿಕಾರಿಗಳು ಹಾಗೂ ಶರತ್ ಬಚ್ಚೇಗೌಡ ಬೆಂಬಲಿಗರ ಮಧ್ಯೆ ಮಾತಿನ ಚಕಮಕಿ ನಡೆದಿದ್ದು, ಗಲಭೆ ನಿಯಂತ್ರಿಸಲು ಮತ್ತಷ್ಟು ಸಿಬ್ಬಂದಿಯನ್ನು ಪೊಲೀಸರು ಕರೆಸಿದ್ದಾರೆ.

ಹೊಸಕೋಟೆ ನಗರದ 7ನೇ ವಾರ್ಡ್​​ನ ಗೌತಮ್​ ಕಾಲೋನಿಯಲ್ಲಿ ಸಚಿವ ಎಂಟಿಬಿ ನಾಗರಾಜ್​​​ ಅಭಿವೃದ್ಧಿ ಕಾರ್ಯಗಳಿಗೆ ಗುದ್ದಲಿ ಪೂಜೆ ನಡೆಸುತ್ತಿದ್ದರು. ಈ ವೇಳೆ ಶರತ್​ ಬೆಂಬಲಿಗರು ಪ್ರತಿಭಟನೆ ನಡೆಸಿದ್ದು, ಸಚಿವರ ವಿರುದ್ಧ ಘೋಷಣೆ ಕೂಗಿದ್ದಾರೆ. ಬಳಿಕ ಎಂಟಿಬಿ ನಾಗರಾಜು ಮತ್ತು ಶರತ್ ಬಚ್ಚೇಗೌಡ ಬೆಂಬಲಿಗರ ನಡುವೆ ವಾಗ್ವಾದ ಉಂಟಾಗಿ ಗಲಭೆಯಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.