ETV Bharat / state

ಆನೇಕಲ್‌ನ ವೆಂಟಿಲೇಶನ್ ಬೆಡ್​ ಉದ್ಘಾಟಿಸಿದ ಸಂಸದ ಡಿ ಕೆ ಸುರೇಶ್

ಈಗಾಗಲೇ 43 ಹಾಸಿಗೆಗಳು ಕೋವಿಡ್​ಗಾಗಿ ಮೀಸಲಿಡಲಾಗಿದೆ. ಇದೀಗ ಎಂಟು ವೆಂಟಿಲೇಟರ್ ಹಾಸಿಗೆಗಳು ಅವುಗಳೊಂದಿಗೆ ಸೇರ್ಪಡೆಗೊಂಡಿವೆ. ಆನೇಕಲ್ ಭಾಗದಲ್ಲಿ ಸೋಂಕಿತರಿಗೆ ಆಮ್ಲಜನಕ‌ ಹಾಸಿಗೆಗಳ ಕೊರತೆ ಹೆಚ್ಚಾಗಿರುವ ಕಾರಣ ಒತ್ತಡದ ಮೇರೆಗೆ ಸರ್ಕಾರ ಇದೀಗ ಕಣ್ಣು ತೆರೆದಿದೆ ಎಂಬ ಮಾತು ಕೇಳಿ ಬಂದಿವೆ..

mp-d-k-suresh-inaugurating-ventilation-bed-at-government-hospital
ಸಂಸದ ಡಿ ಕೆ ಸುರೇಶ್
author img

By

Published : May 12, 2021, 7:55 PM IST

ಆನೇಕಲ್ : ಕೋವಿಡ್-19 ಎರಡನೇ ಅಲೆಯ ರೂಪಾಂತರಕ್ಕೆ ಸೋಂಕಿತರಿಗೆ ಆಮ್ಲಜನಕಯುಕ್ತ ಹಾಸಿಗೆ ಸಿಗದ ಕಾರಣ ಇಂದು ಆನೇಕಲ್ ಸಾರ್ವಜನಿಕ ಆಸ್ಪತ್ರೆಯಲ್ಲಿ ಎಂಟು ವೆಂಟಿಲೇಟರ್ ಹಾಸಿಗೆಗಳನ್ನು ಲೋಕಾರ್ಪಣೆಗೊಳಿಸಲಾಯಿತು.

ಸಂಸದ ಡಿ ಕೆ ಸುರೇಶ್ ಹಾಗೂ ಜಿಲ್ಲಾಧಿಕಾರಿ ಜೆ. ಮಂಜುನಾಥ್‌ರಿಂದ ವೆಂಟಿಲೇಟರ್​ ಬೆಡ್​ಗಳ ಉದ್ಘಾಟನೆ ಮಾಡಲಾಗಿದ್ದು, ಬಿಐಎ ಸಹಯೋಗದಲ್ಲಿ 13 ಪಿಹೆಚ್‌ಸಿಗಳಿಗೆ 2000 ಮೆಡಿಕಲ್ ಕಿಟ್​ಗಳ ಹಂಚಿಕೆ ಜೊತೆಗೆ ಆನೇಕಲ್‌ನಲ್ಲಿ ನೂತನ ಕೋವಿಡ್ ಕೇರ್ ಸೆಂಟರ್​ಗೂ ಚಾಲನೆ ಸಿಕ್ಕಿತು.

ಆನೇಕಲ್​ನ ಸರ್ಕಾರಿ ವಸತಿ ಗೃಹ ಕೋವಿಡ್ ಕೇರ್ ಸೆಂಟರ್ ಆಗಿ ಮಾರ್ಪಾಡು ಮಾಡಲಾಗಿದೆ. ಸುಮಾರು 50 ಬೆಡ್​ಗಳ ವ್ಯವಸ್ಥೆ ಮಾಡಿ ಕೊರೊನಾ ಪಾಸಿಟಿವ್ ರೋಗಿಗಳಿಗೆ ಐಸೋಲೆಷನ್ ವ್ಯವಸ್ಥೆಗೆ ಅನುವು ಮಾಡಿಕೊಡಲಾಯಿತು. ತುರ್ತು ಅಧಿಕಾರಿಗಳ ಸಭೆ ಕರೆದು ಅಧಿಕಾರಿಗಳ ಜೊತೆಗೆ ಚರ್ಚೆ ನಡೆಸಿದ ಸಂಸದರು ಮುಂದಿನ ನಡೆಗಳ ಬಗ್ಗೆ ಚರ್ಚಿಸಿದರು.

ಈಗಾಗಲೇ 43 ಹಾಸಿಗೆಗಳು ಕೋವಿಡ್​ಗಾಗಿ ಮೀಸಲಿಡಲಾಗಿದೆ. ಇದೀಗ ಎಂಟು ವೆಂಟಿಲೇಟರ್ ಹಾಸಿಗೆಗಳು ಅವುಗಳೊಂದಿಗೆ ಸೇರ್ಪಡೆಗೊಂಡಿವೆ. ಆನೇಕಲ್ ಭಾಗದಲ್ಲಿ ಸೋಂಕಿತರಿಗೆ ಆಮ್ಲಜನಕ‌ ಹಾಸಿಗೆಗಳ ಕೊರತೆ ಹೆಚ್ಚಾಗಿರುವ ಕಾರಣ ಒತ್ತಡದ ಮೇರೆಗೆ ಸರ್ಕಾರ ಇದೀಗ ಕಣ್ಣು ತೆರೆದಿದೆ ಎಂಬ ಮಾತು ಕೇಳಿ ಬಂದಿವೆ.

ಓದಿ: ನಿಯಮಾವಳಿ ಪಾಲಿಸದ ಸೋಂಕಿತರು ಕೋವಿಡ್​ ಕೇರ್​ ಸೆಂಟರ್​ಗೆ ಶಿಫ್ಟ್​ : ಸಚಿವ ಆನಂದಸಿಂಗ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.