ETV Bharat / state

ಲಿವಿಂಗ್‌ ಟುಗೆದರ್‌‌ನಲ್ಲಿದ್ದ ಮಗಳ ಮದ್ವೆಯಾಗು ಎಂದಿದ್ದಕ್ಕೆ ತಾಯಿ-ಮಗಳ ಕೊಲೆಗೈದ ದುಷ್ಕರ್ಮಿ - double murder in bangalore

ತನ್ನ ಜೊತೆ ಲಿವಿಂಗ್‌ ಇನ್‌ ರಿಲೇಶನ್‌ಶಿಪ್‌ನಲ್ಲಿದ್ದ ಮಗಳನ್ನು ಮದುವೆ ಆಗುವಂತೆ ವ್ಯಕ್ತಿಗೆ ತಾಯಿ ಒತ್ತಾಯಿಸಿದ್ದಕ್ಕೆ ಕುಪಿತಗೊಂಡ ಆರೋಪಿ ಮಧ್ಯರಾತ್ರಿ ಇಬ್ಬರ ಕೊಲೆಗೈದಿದ್ದಾನೆ.

ಅತ್ತೆ-ಹೆಂಡತಿ ಕೊಲೆಗೈದ ಅಳಿಯ
ಅತ್ತೆ-ಹೆಂಡತಿ ಕೊಲೆಗೈದ ಅಳಿಯ
author img

By

Published : Jan 10, 2021, 4:14 PM IST

Updated : Jan 10, 2021, 4:35 PM IST

ದೇವನಹಳ್ಳಿ: ವ್ಯಕ್ತಿಯೊಬ್ಬ ತಾಯಿ, ಮಗಳ ಕತ್ತು ಕೊಯ್ದು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲೂಕಿನ ಬೈಚಾಪುರದಲ್ಲಿ ಇಂದು ನಡೆದಿದೆ.

ದೇವನಹಳ್ಳಿಯಲ್ಲಿ ಜೋಡಿ ಕೊಲೆ

ಲಕ್ಷ್ಮೀ ದೇವಿ (50) , ರಮಾದೇವಿ (30) ಕೊಲೆಯಾದ ಅಮ್ಮ, ಮಗಳು. ಕೊಲೆಗೈದ ಆರೋಪಿ ಮಲಯ ಫರಿದ ಪೊಲೀಸರಿಗೆ ಶರಣಾಗಿದ್ದಾನೆ.

ಓದಿ:ಹಾಡ ಹಗಲೇ ಕಾರಿನ ಗಾಜು ಒಡೆದು ಕಳ್ಳತನಕ್ಕೆ ಯತ್ನ: ಸಿಸಿಟಿವಿಯಲ್ಲಿ ಕೃತ್ಯ ಸೆರೆ

ಘಟನೆಯ ಹಿನ್ನಲೆ:

ಒಡಿಶಾ ಮೂಲದ ಫರಿದ, ರಮಾದೇವಿ ಜೊತೆ ಲಿವಿಂಗ್ ಟುಗೆದರ್ ಜೀವನ ನಡೆಸುತ್ತಿದ್ದ. ದೇವನಹಳ್ಳಿ ತಾಲೂಕಿನ ಬೈಚಾಪುರ ಗ್ರಾಮದ ಬಾಡಿಗೆ ಮನೆಯಲ್ಲಿ ಇಬ್ಬರೂ ವಾಸವಾಗಿದ್ದರು. ಇವರಿಗೆ 5 ತಿಂಗಳ ಮಗು ಸಹ ಇತ್ತು. ಇವರ ಜೊತೆ ರಮಾದೇವಿಯ ತಾಯಿ ಲಕ್ಷ್ಮೀ ದೇವಿ ಸಹ ವಾಸವಾಗಿದ್ದರು. ಹೀಗಾಗಿ ತನ್ನ ಮಗಳನ್ನು ಮದುವೆ ಆಗುವಂತೆ ಲಕ್ಷ್ಮೀ ದೇವಿ ಒತ್ತಾಯ ಮಾಡಿದ್ದಾರೆ. ಇದರಿಂದ ರೋಸಿ ಹೋಗಿದ್ದ ಫರಿದ ಮಧ್ಯರಾತ್ರಿ ಚಾಕುವಿನಿಂದ ತಾಯಿಯ ಕತ್ತು ಕೊಯ್ದು ಕೊಲೆ ಮಾಡಿದ್ದಾನೆ. ಬಳಿಕ ಮಲಗಿದ್ದ ಯುವತಿಯನ್ನು ಎಬ್ಬಿಸಿ ನಿನ್ನ ತಾಯಿಯನ್ನು ಕೊಂದಿರುವುದಾಗಿ ಹೇಳಿದ್ದಾನೆ. ಈ ವಿಷಯ ಕೇಳಿ ಕಿರುಚಿಕೊಂಡ ಆಕೆಯನ್ನೂ ಕತ್ತು ಕೊಯ್ದು ಕೊಲೆಗೈದಿದ್ದಾನೆ. ನಂತರ ಆರೋಪಿ ಪೊಲೀಸರಿಗೆ ಶರಣಾಗಿದ್ದಾನೆ. ದೇವನಹಳ್ಳಿ ಪೊಲೀಸ್​​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Last Updated : Jan 10, 2021, 4:35 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.