ನೆಲಮಂಗಲ: ತಾಲೂಕಿನ ಕನ್ನೋಹಳ್ಳಿಯ ಬಸವೇಶ್ವರ ದೇವಸ್ಥಾನದ ಹುಂಡಿ ಒಡೆದಿರುವ ಖದೀಮರು ಅದರಲ್ಲಿನ ಹಣ ಕದ್ದ ಬಳಿಕ ಹುಂಡಿಯನ್ನು ಹೊಲದಲ್ಲಿ ಎಸೆದು ಪರಾರಿಯಾಗಿದ್ದಾರೆ.
![money Theft](https://etvbharatimages.akamaized.net/etvbharat/prod-images/8375169_164_8375169_1597129321543.png)
ನಿನ್ನೆ ರಾತ್ರಿ ದೇವಸ್ಥಾನಕ್ಕೆ ನುಗ್ಗಿದ್ದ ಕಳ್ಳರು ಹುಂಡಿ ಹಣದ ಜೊತೆಗೆ ದೇವಸ್ಥಾನದ ಕೆಲವು ವಸ್ತುಗಳನ್ನು ಕದ್ದೊಯ್ದಿದ್ದಾರೆ. ಹುಂಡಿಯಲ್ಲಿ ₹ 4-5ಸಾವಿರ ಹಣ ಇತ್ತು ಎನ್ನಲಾಗ್ತಿದೆ. ತ್ಯಾಮಗೊಂಡ್ಲು ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.