ಹೊಸಕೋಟೆ: ಇತ್ತೀಚೆಗೆ ಸಿದ್ದರಾಮಯ್ಯ ಏನು ಮಾತನಾಡುತ್ತಿದ್ದಾರೆ ಎಂದು ಅವರಿಗೇ ಅರ್ಥವಾಗಬೇಕು. ಒಂದೊಂದು ಬಾರಿ ಒಂದೊಂದು ರೀತಿ ಮಾತನಾಡುತ್ತಿದ್ದಾರೆ ಎಂದು ಶಾಸಕ ಎಸ್.ಆರ್.ವಿಶ್ವನಾಥ್ ಹೇಳಿದ್ದಾರೆ.
ಹೊಸಕೋಟೆಯಲ್ಲಿ ವಿರಶೈವ ಸಮುದಾಯದ ಸಭೆ ಮುಗಿಸಿ ಮಾತನಾಡಿದ ಅವರು, ಆಪರೇಷನ್ ಕಮಲ ಮಾಡಿಕೊಳ್ಳೋಕ್ಕೆ ಎಂಟಿಬಿ, ಯಡಿಯೂರಪ್ಪ ಅವರಿಗೆ ಏಕೆ ದುಡ್ಡು ಕೊಡುತ್ತಾರೆ. ಸಿದ್ದರಾಮಯ್ಯ ಅವರ ಮಾತನ್ನ ಜನರು ಯಾರು ಸೀರಿಯಸ್ ಆಗಿ ತೆಗೆದುಕೊಳ್ಳುತ್ತಿಲ್ಲ ಎಂದಿದ್ದಾರೆ.
ಕಾಂಗ್ರೆಸ್ನಲ್ಲಿ ಸಿದ್ದರಾಮಯ್ಯ ನಾಯಕತ್ವ ವಿರೋಧಿಸುವ ಅನೇಕ ಮುಖಂಡರಿದ್ದಾರೆ. ಅವರೆಲ್ಲ ಸಿದ್ದರಾಮಯ್ಯ ಅವರ ಅಭ್ಯರ್ಥಿಗಳನ್ನ ಸೋಲಿಸೋದಕ್ಕೆ ಏನು ಮಸಲತ್ತು ಮಾಡಬೇಕೋ ಅದನ್ನೆಲ್ಲ ಮಾಡುತ್ತಿದ್ದಾರೆ. ಇನ್ನು 15 ಕ್ಷೇತ್ರಗಳಲ್ಲಿ ಎಲ್ಲೂ ಅನರ್ಹ ಶಾಸಕರು ಗೆಲ್ಲಲ್ಲ. ಗೆದ್ದರೆ ನಾನು ರಾಜಕೀಯ ನಿವೃತ್ತಿ ಹೊಂದುತ್ತೇನೆ ಅಂತ ಸಿದ್ದರಾಮಯ್ಯ ಹೇಳಲಿ ನೋಡೋಣ. ಅದನ್ನೆಲ್ಲ ಅವರು ಹೇಳಲ್ಲ. ಸುಮ್ಮನೆ ಏನೋ ಹೇಳಬೇಕು ಅಂತ ಹೇಳ್ತಾರೆ ಅಷ್ಟೆ ಎಂದರು.