ETV Bharat / state

ಕಾಂಗ್ರೆಸ್ ಇತಿಹಾಸದಲ್ಲೇ ದೇಶದ ಪರವಾಗಿ ಮಾತನಾಡಿಲ್ಲ: ಎಸ್.ಆರ್.ವಿಶ್ವನಾಥ್

author img

By

Published : Oct 31, 2019, 10:39 PM IST

ಟಿಪ್ಪು ಜಯಂತಿ ಆಚರಣೆ ಮಾಡುವುದಿಲ್ಲ.‌ ಪಠ್ಯ ಪುಸ್ತಕದಲ್ಲಿ ಟಿಪ್ಪು ಕುರಿತು ಯಾವುದನ್ನು‌ ತೆಗೆಯಬೇಕು ಅನ್ನೋದರ ಬಗ್ಗೆ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರು ರಚನೆ ಮಾಡಿರುವ ಕಮಿಟಿ ತಿಳಿಸುತ್ತೆ ಎಂದು ಶಾಸಕ ಎಸ್.ಆರ್. ವಿಶ್ವನಾಥ್ ಹೇಳಿದ್ದಾರೆ. ಇನ್ನು, ಕಾಂಗ್ರೆಸ್​ ಪಕ್ಷ ಇತಿಹಾಸದಲ್ಲೇ ದೇಶದ ಪರವಾಗಿ ಮಾತನಾಡಿಲ್ಲ ಎಂದು ವಾಗ್ದಾಳಿ ನಡೆಸಿದರು.

ಎಸ್.ಆರ್.ವಿಶ್ವನಾಥ್

ಬೆಂಗಳೂರು: ಕಾಂಗ್ರೆಸ್​ನವರು ದಾವೂದ್ ಇಬ್ರಾಹಿಂ ಪರ, ಪಾಕಿಸ್ತಾನ ಪರವಾಗಿ ಹೇಳಿಕೆ ಕೊಡುತ್ತಾರೆ. ಅಲ್ಲದೆ ನಮ್ಮ ಸೈನಿಕರ ವಿರುದ್ಧ ಹೇಳಿಕೆ ನೀಡಿರುವುದನ್ನು ನಾವು ಅನೇಕ ಬಾರಿ ನೋಡಿದ್ದೇವೆ. ಅವರು ದೇಶದ ಪರವಾಗಿ ಮಾತನಾಡಿರುವುದು ಬಹಳ ಕಡಿಮೆ ಎಂದು ಮುಖ್ಯಮಂತ್ರಿ ಅವರ ರಾಜಕೀಯ ಕಾರ್ಯದರ್ಶಿ, ಶಾಸಕ ಎಸ್. ಆರ್. ವಿಶ್ವನಾಥ್ ವಾಗ್ದಾಳಿ ನಡೆಸಿದ್ದಾರೆ.

ಎಸ್.ಆರ್. ವಿಶ್ವನಾಥ್, ಶಾಸಕ

ಯಲಹಂಕ ತಾಲೂಕು ಕಚೇರಿಯಲ್ಲಿ ಮಾತನಾಡಿದ ಅವರು, ಟಿಪ್ಪು ಜಯಂತಿಯನ್ನು ಯಾವುದೇ ಕಾರಣಕ್ಕೂ ಆಚರಣೆ ಮಾಡುವುದಿಲ್ಲ.‌ ಪಠ್ಯ ಪುಸ್ತಕದಲ್ಲಿ ಟಿಪ್ಪು ಕುರಿತು ಯಾವುದನ್ನು‌ ತೆಗೆಯಬೇಕು ಅನ್ನೋದರ ಕುರಿತು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರು ರಚನೆ ಮಾಡಿರುವ ಸಮಿತಿ ತಿಳಿಸುತ್ತೆ. ಅದರ ಆಧಾರದ ಮೇಲೆ ತೀರ್ಮಾನ ತೆಗೆದುಕೊಳ್ಳುತ್ತಾರೆ ಎಂದರು.

ಇನ್ನು ಸಂಸದ ಬಚ್ಚೇಗೌಡರ ಪುತ್ರ ಶರತ್ ಬಚ್ಚೇಗೌಡ ಟಿಪ್ಪು ಜಯಂತಿ ಆಚರಣೆ ಮಾಡುತ್ತೇನೆ ಎಂಬ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಅವರು, ಅದು ಅವರ ವೈಯಕ್ತಿಕ ಅಭಿಪ್ರಾಯ ಇರಬಹುದು. ನಮ್ಮ ಪಕ್ಷವೇ ಟಿಪ್ಪು ಜಯಂತಿ ಆಚರಿಸದಿರಲು ತೀರ್ಮಾನ ತೆಗೆದುಕೊಂಡಿದೆ. ಶರತ್ ಬಚ್ಚೇಗೌಡ ತಮ್ಮ ನಿಲುವನ್ನು ಬದಲಿಸಿಕೊಳ್ಳದಿದ್ದರೆ​ ಅವರ ವಿರುದ್ಧ ಪಕ್ಷದಿಂದ ಶಿಸ್ತಿನ ಕ್ರಮ ಕೈಗೊಳ್ಳುತ್ತೇವೆ ಎಂದರು. ಬಚ್ಚೇಗೌಡರ ಪುತ್ರ ಹೊಸಕೋಟೆ ಕ್ಷೇತ್ರದಲ್ಲಿ ಸ್ವತಂತ್ರವಾಗಿ ಸ್ಪರ್ಧಿಸುತ್ತೇನೆ ಅಂತಿದ್ದಾರೆ. ಹೊಸಕೋಟೆ ರಾಜಕೀಯನೇ ಜಿದ್ದಾಜಿದ್ದಿನ ರಾಜಕಾರಣ. ಸಹಜವಾಗಿ ವಿರೋಧಿಸಿಕೊಂಡು ಬಂದವರ ಜೊತೆ ಕೈಜೋಡಿಸಬೇಕು ಎಂಬುದು ಇರುತ್ತೆ. ಬಹುಶಃ ಅದು ಸರಿ ಹೋಗಬಹುದು ಎಂದು ಅಭಿಪ್ರಾಯಪಟ್ಟರು.

ಟಿಪ್ಪು ಜಯಂತಿ ಆಚರಣೆಯನ್ನ ಜಾರಿಗೆ ತಂದಿದ್ದು ನಮ್ಮ ಸರ್ಕಾರ ಅಲ್ಲ. ಕಳೆದ ಸರ್ಕಾರ ಮಾಡಿರೋದು.. ಟಿಪ್ಪುವಿನ ಇತಿಹಾಸ ಒಂದು ಮುಖವನ್ನು ನೋಡಿದ್ದೇವೆ.. ಇನ್ನೊಂದು ಚರಿತ್ರೆಯನ್ನು ಬಹಳಷ್ಟು ಜನ ಅನುಭವಿಸಿರೋರು. ವಿಶೇಷವಾಗಿ ಕೊಡಗು, ಕೇರಳ ಬಾಗದ ಜನರು, ಮೈಸೂರು ಸಂಸ್ಥಾನದ ಜನರಿಗೆ ಕಿರುಕುಳವನ್ನು ಅನುಭವಿಸಿದ್ದರು. ಬ್ರಿಟಿಷರ ವಿರುದ್ಧ ಹೋರಾಟ ಮಾಡಿದ್ದರಿಂದ, ಸ್ವಾತಂತ್ರ್ಯ ಹೋರಾಟಗಾರ ಎಂದು ಹೇಳ್ತಾರೆ. ಟಿಪ್ಪು ತನ್ನ ರಾಜ್ಯವನ್ನು ಉಳಿಸಿಕೊಳ್ಳಲು ಹೋರಾಟ ಮಾಡಬೇಕಿತ್ತು. ಮೈಸೂರು ರಾಜರನ್ನು ಸಂಹರಿಸಿ ಅಧಿಕಾರವನ್ನು ಯಾವ ರೀತಿ ಪಡೆದುಕೊಂಡರು ಅನ್ನೋದನ್ನು ಇತಿಹಾಸದಲ್ಲಿ ಹೇಳುವುದಕ್ಕೆ ಹೋಗಿಲ್ಲ.‌ ಅವನೊಬ್ಬ ಮತಾಂಧ, ಬಹಳ ಕ್ರೂರಿ ಅನ್ನೋದು ಇತಿಹಾಸ ಪುಟದಲ್ಲಿದೆ ಎಂದು ಶಾಸಕ ವಿಶ್ವನಾಥ್​ ಕಿಡಿಕಾರಿದರು.

ಇನ್ನು ನಾಡಪ್ರಭು ಕೆಂಪೇಗೌಡ ಅವರ ಹಳೆ ಬೆಂಗಳೂರಿಗೆ ರಾಜಧಾನಿಯಾಗಿದ್ದ ಯಲಹಂಕ, ತಾಲೂಕು ಕೇಂದ್ರವಾದ ಬಳಿಕ ಮೊದಲ ಬಾರಿಗೆ ಕನ್ನಡಪರ ಸಂಘಟನೆಗಳು, ತಾಲೂಕು ಆಡಳಿತ, ಬಿಬಿಎಂಪಿ ವತಿಯಿಂದ ಅದ್ಧೂರಿಯಾಗಿ ಕನ್ನಡ ರಾಜ್ಯೋತ್ಸವ ಆಚರಿಸಲು ತೀರ್ಮಾನಿಸಲಾಗಿದೆ. ತಾಲೂಕಿನಲ್ಲಿ ಸುದೀರ್ಘವಾಗಿ ಸಮಾಜ ಸೇವೆಯನ್ನು ಮಾಡುತ್ತಾ ಬಂದಿರುವ ಗಣ್ಯರಿಗೆ ಯಲಹಂಕ ರತ್ನ ಪ್ರಶಸ್ತಿ ನೀಡಿ, ಸನ್ಮಾನಿಸಲಾಗುವುದು ಎಂದು ಶಾಸಕ ಎಸ್. ಆರ್. ವಿಶ್ವನಾಥ್ ಇದೇ ಸಂದರ್ಭದಲ್ಲಿ ತಿಳಿಸಿದ್ದಾರೆ.

Intro:KN_BNG_02_31_SR_Viswanath_Ambarish_7203301
Slug: ಕಾಂಗ್ರೆಸ್ ಇತಿಹಾಸದಲ್ಲಿ ದೇಶದ ಪರವಾಗಿ ಮಾತನಾಡಿಲ್ಲ: ಎಸ್. ಆರ್ ವಿಶ್ವನಾಥ್

ವಿರೋಧಿಸುವವರ ಜೊತೆ ಕೈ ಜೋಡಿಸುವುದು ಶರತ್ ಬಚ್ಚೇಗೌಡರಿಗೆ ಇಷ್ಟವಿಲ್ಲ ಅನ್ನಿಸುತ್ತದೆ: ಪರೋಕ್ಷವಾಗಿ ಹೊಸಕೋಟೆ ರಾಜಕೀಯ ಬಿಕ್ಕಟ್ಟನ್ನು ಬಿಚ್ಚಿಟ್ಟ ಎಸ್. ಆರ್ ವಿಶ್ವನಾಥ್

ಬೆಂಗಳೂರು: ಕಾಂಗ್ರೆಸ್ ಇತಿಹಾಸದಲ್ಲಿ ಅವರು ದಾವೂದ್ ಇಬ್ರಾಹಿಂ ಪರ ಮಾತನಾಡುತ್ತಾರೆ.. ಪಾಕಿಸ್ತಾನ ಪರವಾಗಿ ಹೇಳಿಕೆ ಕೊಡುವವರು..ನಮ್ಮ ಸೈನಿಕರ ವಿರುದ್ದ ಹೇಳಿಕೆ ನೀಡಿರುವುದನ್ನು ನಾವು ಅನೇಕ ಬಾರಿ ನೋಡಿದ್ದೇವೆ.. ಯಾವತ್ತು ಅವರು ದೇಶದ ಪರವಾಗಿ ಮಾತನಾಡಿರುವುದು ಬಹಳ ಕಡಿಮೆ.. ಅವರು ಹೋರಾಟ ಮಾಡ್ತಾರೆ ಅಂದರೆ ಮಾಡ್ಲಿ.. ನಾವು ರಾಜ್ಯದಲ್ಲಿ ಸರ್ಕಾರದ ವತಿಯಿಂದ ಟಿಪ್ಪು ಜಯಂತಿಯನ್ನು ಆಚರಣೆ ಮಾಡುವುದಿಲ್ಲ ಎಂದು ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿ ಎಸ್ ಆರ್ ವಿಶ್ವನಾಥ್ ಹೇಳಿದ್ರು..

ಇಂದು ಯಲಹಂಕ ತಾಲ್ಲೂಕು ಕಚೇರಿಯಲ್ಲಿ ಮಾತನಾಡಿದ ಅವರು, ಟಿಪ್ಪು ಜಯಂತಿಯನ್ನು ಯಾವುದೇ ಕಾರಣಕ್ಕು ಆಚರಣೆ ಮಾಡುವುದಿಲ್ಲ..‌ಪಠ್ಯ ಪುಸ್ತಕದಲ್ಲಿ ಟಿಪ್ಪು ಕುರಿತು ಯಾವುದನ್ನು‌ತೆಗೆಯಬೇಕು ಅನ್ನೋದನ್ನು ಸುರೇಶ್ ಕುಮಾರ್ ಅವರು ರಚನೆ ಮಾಡಿರುವ ಕಮಿಟಿ ಇದೆ.. ಅದರಲ್ಲಿ ತೀರ್ಮಾನ ತೆಗೆದುಕೊಳ್ಳುತ್ತಾರೆ ಎಂದರು..

ಸಂಸದ ಬಚ್ಚೇಗೌಡ ಪುತ್ರ ಶರತ್ ಬಚ್ಚೇಗೌಡ ಟಿಪ್ಪು ಜಯಂತಿ ಆಚರಣೆ ಮಾಡುತ್ತೇನೆ ಎಂಬ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, ಅದು ಅವರ ವೈಯಕ್ತಿಕ ಇರಬಹುದು. ನಮ್ಮ ಪಕ್ಷ ತೀರ್ಮಾನ ತೆಗೆದುಕೊಂಡಿದೆ. ಯಾವುದೇ ಕಾರಣಕ್ಕೂ ಟಿಪ್ಪು ಜಯಂತಿ ಆಚರಣೆ ಮಾಡುವುದಿಲ್ಲ. ಒಂದು ವೇಳೆ ಅವರು ಜಯಂತಿ ಮಾಡ್ತೀವಿ ಅಂದ್ರೆ, ಪಕ್ಷದಲ್ಲಿ ಮುಖಂಡರು ಏನ್ ಶಿಸ್ತಿನ ಕ್ರಮ ಕೈಗೊಳ್ಳಬೇಕೊ ತೆಗೆದುಕೊಳ್ಳುತ್ತೇವೆ ಎಂದ ಅವರು, ಹೊಸಕೋಟೆ ಕ್ಷೇತ್ರದಲ್ಲಿ ಸ್ವತಂತ್ರವಾಗಿ ನಿಲ್ಲುತ್ತೇವೆ ಅಂತಾ ಇದ್ದಾರೆ.. ಅವರು ಅನೇಕ ರಾಜಕೀಯ ಹೋರಾಟ ಮಾಡ್ಕೊಂಡು ಬಂದಿರೋರು. ಹೊಸಕೋಟೆ ರಾಜಕೀಯನೇ ಜಿದ್ದಾಜಿದ್ದಿನ ರಾಜಕಾರಣ. ಸಹಜವಾಗಿ ವಿರೋಧಿಸಿಕೊಂಡು ಬಂದವರ ಜೊತೆ ಕೈಜೋಡಿಸಬೇಕು ಎಂಬುದು ಇರುತ್ತೇ. ಬಹುಶಃ ಅದು ಸರಿ ಹೋಗಬಹುದು ಪಕ್ಷದ ಮುಖಂಡರು ಮಾತನಾಡುತ್ತಿದ್ದಾರೆ ಎಂದರು..

ಟಿಪ್ಪು ಜಯಂತಿ ನಮ್ಮ ಸರ್ಕಾರ ಮಾಡಿಲ್ಲ.. ಕಳೆದ ಸರ್ಕಾರ ಮಾಡಿರೋದು.. ಟಿಪ್ಪುವಿನ ಇತಿಹಾಸ ಒಂದು ಮುಖವನ್ನು ನೋಡಿದ್ದೇವೆ.. ಇನ್ನೊಂದು ಚರಿತ್ರೆಯನ್ನು ಬಹಳಷ್ಟು ಜನ ಅನುಭವಿಸಿರೋರು.. ವಿಶೇಷವಾಗಿ ಕೊಡಗು ನಮ್ಮ ಕೇರಳ ಬಾಗದ ಜನರು, ಮೈಸೂರು ಸಂಸ್ಥಾನದ ಜನರಿಗೆ ಕಿರುಕುಳ ಮಾಡಿರೋದನ್ನೆಲ್ಲಾ ನೋಡಿದ್ದೇವೆ.. ಬ್ರಿಟೀಷರ ವಿರುದ್ಧ ಹೋರಾಟ ಮಾಡಿದ್ರಿಂದ ದೊಡ್ಡ ಪ್ರಾಚಾರ, ಸ್ವಾತಂತ್ರ್ಯ ಹೋರಾಟಗಾರ ಅಂತ ಹೇಳ್ತಾರೆ. ಟಿಪ್ಪು ತನ್ನ ರಾಜ್ಯವನ್ನು ಉಳಿಸಿಕೊಳ್ಳಲು ಹೋರಾಟ ಮಾಡಬೇಕಿತ್ತು.. ಮೈಸೂರು ರಾಜರನ್ನು ಸಂಹರಿಸಿ ಅಧಿಕಾರವನ್ನು ಯಾವ ರೀತಿ ಪಡೆದುಕೊಂಡರು ಅನ್ನೋದನ್ನು ಇತಿಹಾಸದಲ್ಲಿ ಹೇಳಕ್ಕೆ ಹೋಗಿಲ್ಲ..‌ ಅವನೊಬ್ಬ ಮತಂದ, ಬಹಳ ಕ್ರೂರಿ ಅನ್ನೋದು ಇತಿಹಾಸ ಪುಟದಲ್ಲಿ ಇದೆ.. ಟಿಪ್ಪುವಿಗಿಂತ ಬಹಳ ಹೋರಾಟಗಾರರು ನಮ್ಮಲ್ಲಿದ್ದಾರೆ.. ಟಿಪ್ಪು ಜಯಂತಿಯನ್ನು ನಾವು ವಿರೋಧಿಸುತ್ತಲೇ ಬಂದಿದ್ವು.. ನಾವು ಪ್ರಣಾಳಿಕೆ ಯಲ್ಲಿ ಹೇಳಿದ ಹಾಗೇ ನಮ್ಮ ಸರ್ಕಾರ ಬಂದ ಬಳಿಕ ಟಿಪ್ಪು ಜಯಂತಿಯನ್ನು ರದ್ದು ಮಾಡಿದ್ದಿರಿ.. ರದ್ದು ಮಾಡಿದ ಬಳಿಕ ಒಂದೆರೆಡು ತಕರಾರು ಬಂದಿವೆ. ಅದನ್ನು ಬಿಟ್ಟರೆ ಯಾರೂ ವಿರೋಧ ಮಾಡಿಲ್ಲ ಎಂದು ಟಿಪ್ಪು ಜಯಂತಿ ರದ್ದು ಕುರಿತು ಸಮರ್ಥಿಸಿಕೊಂಡರು..

ಇವತ್ತು ಪಠ್ಯ ಪುಸ್ತಕದಲ್ಲಿ ಶಿವಾಜಿ ಯನ್ನು ಬೆಟ್ಟದ ಇಲಿ ಹಾಗೂ ಟಿಪ್ಪು ವನ್ನು‌ ಮೈಸೂರು ಹುಲಿ ಎಂದು ಇತಿಹಾಸಕಾರರು ಕೆಲವೊಂದು ಇತಿಹಾಸವನ್ನು ತಿರುಚಿ ಬರೆದಿರುವುದನ್ನು ನಾವು ನೋಡ್ತಾ ಇದ್ದಿವಿ..ಲಾರ್ಡ್ ಮೆಕ್ಕಾಲೆ ಅಂದು ಹೇಳಿದ್ದ ನಾವು ದೇಶ ಬಿಟ್ಟು ಹೋದ ಮೇಲೆ ಇಡೀ ಭಾರತವನ್ನು ಬ್ರಿಟಿಷರನ್ನಾಗಿ ಬದಲಾವಣೆ ಮಾಡ್ತಿನಿ ಅಂದಿದ್ದ.. ಆ ರೀತಿಯ ಚರಿತ್ರೆ ನಮಗೆ ಬೇಕಾಗಿಲ್ಲ.. ನಿಜವಾದ ಚರಿತ್ರೆ ನಮ್ಮ ಮಕ್ಕಳು ಓದಬೇಕು.. ಕೃಷ್ಣದೇವರಾಯನ ಚರಿತ್ರೆ ಇದೆ.. ನಮ್ಮ ದೇಶದಲ್ಲಿ ಹೋರಾಟಗಾರರು ಸಾಕಷ್ಟು ಜನರಿದ್ದಾರೆ.. ಅವರಿಗೆ ಇಲ್ಲದ ವೈಭವ ಟಿಪ್ಪುಗೆ ಏಕೆ ಬೇಕು..‌ ಹಲವಾರು ಪ್ರಾಣ ಹಿಂಸೆ ಮಾಡಿರುವಂತ ಕ್ರೂರಿ ಟಿಪ್ಪು.. ಟಿಪ್ಪು ಅವನ ರಾಜ್ಯಕ್ಕಾಗಿ ಎಲ್ಲಾ ಮಾಡಿದ್ದಾನೆ ವಿನಃ ದೇಶದ ನಿಷ್ಠಾವಂತನಾಗಿರಲಿಲ್ಲ ಎಂದು ಟಿಪ್ಪುವಿನ ಇತಿಹಾಸವನ್ನು ನೆನಪಿಸಿದ್ರು..Body:NoConclusion:No
ETV Bharat Logo

Copyright © 2024 Ushodaya Enterprises Pvt. Ltd., All Rights Reserved.