ಹೊಸಪೇಟೆ: ಬಿಜೆಪಿ ನಾಯಕರು ವಿಜಯ ನಗರ ಉಪ ಚುನಾವಣೆಯಲ್ಲಿ ಶಾಸಕ ಆನಂದ ಸಿಂಗ್ ಗೆದ್ದ 24 ಗಂಟೆಗಳಲ್ಲಿ ಅವರನ್ನು ಸಚಿವರನ್ನಾಗಿ ಮಾಡುವ ಭರವಸೆ ನೀಡಿದ್ದರು. ಆದರೆ, ಈರೆಗೂ ಸಚಿವರಾಗಿಲ್ಲ ಏಕೆ ಎಂದು ಮಾಧ್ಯಮದವರು ಪ್ರಶ್ನಿಸಿದ್ದಕ್ಕೆ ಶಾಸಕ ಆನಂದ್ ಸಿಂಗ್ ಮಾರ್ಮಿಕವಾಗಿ ಪ್ರತಿಕ್ರಿಯೆ ನೀಡಿದ್ದಾರೆ.
ನಗರದಲ್ಲಿ ಮಾತನಾಡಿದ ಅವರು, ಮದುವೆ ಮಾಡಿಕೊಂಡಾಗಿದೆ. ಗಂಡೋ, ಹೆಣ್ಣೋ ಒಟ್ಟಿನಲ್ಲಿ ಮಗುವಾದ್ರೆ ಸಾಕು ಎನ್ನುತ್ತ ಸಚಿವ ಸ್ಥಾನ ಕೊಡಿ ಎಂಬುದನ್ನು ಪರೋಕ್ಷವಾಗಿ ಹೇಳಿದ್ರು.
ಇನ್ನು, ಕೇಂದ್ರ ಸರ್ಕಾರ ಪೌರತ್ವ ತಿದ್ದುಪಡಿ ಕಾಯ್ದೆ ತಂದಿರುವುದು ದೇಶದ ಒಳಿತಿಗಾಗಿ. ಇದರ ಬಗ್ಗೆ ನಾನು ಹೆಚ್ಚೇನು ತಿಳಿದುಕೊಂಡಿಲ್ಲ. ಆದರೆ, ದೇಶದಲ್ಲಿರುವ ಪ್ರಜೆಗಳಿಗೆ ಇದರಿಂದ ಯಾವುದೇ ರೀತಿಯ ತೊಂದರೆಯಾಗುವುದಿಲ್ಲ. ಈ ಕಾಯ್ದೆಯನ್ನು ಏಕೆ ವಿರೋಧಿಸಲಾಗ್ತಿದೆ ಅನ್ನೋದು ಸಹ ತಿಳಿಯುತ್ತಿಲ್ಲ ಎಂದರು.
ಬಳಿಕ ನಗರದ ತಾಲೂಕು ಕ್ರೀಡಾಂಗಣದಲ್ಲಿ ನಡೆದ ಶ್ರೀ ಮಹಾಸತ್ ಚಂಡಿಕಾ ಯಜ್ಞ ಕಾರ್ಯಕ್ರಮದಲ್ಲಿ ಅವರು ಭಾಗವಹಿಸಿದ್ದರು.