ETV Bharat / state

ಸಿದ್ದರಾಮಯ್ಯ-ಪಟ್ಟಣ್ ನಡುವಿನ ಪಿಸು ಮಾತಿನಿಂದ ಕಾಂಗ್ರೆಸ್ ಒಳ ಜಗಳ ಬೀದಿಗೆ : ಸಚಿವ ಆರ್.ಅಶೋಕ್

author img

By

Published : Jan 30, 2022, 12:44 PM IST

ಡಿಕೆಶಿ ರಾಜ್ಯದ ಎಲ್ಲಾ ಕ್ಷೇತ್ರಗಳನ್ನು ಹಾಳು ಮಾಡ್ತಿದ್ದಾರೆಂಬ ಮಾತು ಸಿದ್ದರಾಮಯ್ಯರಿಂದಲೇ ಗೊತ್ತಾಗಿದೆ. ಇವರ ಈ ಒಳ ಜಗಳ ಬೇಗುದಿಯಿಂದ ಕಾಂಗ್ರೆಸ್ ನಲುಗಿ ಹೋಗಿದೆ. ತಿರುಕನ ಕನಸು ಕಾಣುವ ಅವರು ಈ ಒಳ ಜಗಳದಿಂದ ಆಚೆ ಬಂದ್ರೆ ಸಾಕು‌..

ವಿಧಾನಸೌಧದಲ್ಲಿ ಮಾತನಾಡಿದ  ಸಚಿವ ಆರ್.ಅಶೋಕ್
ವಿಧಾನಸೌಧದಲ್ಲಿ ಮಾತನಾಡಿದ ಸಚಿವ ಆರ್.ಅಶೋಕ್

ಬೆಂಗಳೂರು : ಸಿದ್ದರಾಮಯ್ಯ ಹಾಗೂ ಅಶೋಕ್ ಪಟ್ಟಣ್ ನಡುವಿನ ಪಿಸು ಮಾತಿನಿಂದ ಕಾಂಗ್ರೆಸ್​ನ‌ ಒಳ ಜಗಳ ಬೀದಿಗೆ ಬಂದಿದೆ ಎಂದು ಸಚಿವ ಆರ್.ಅಶೋಕ್ ಟಾಂಗ್ ನೀಡಿದರು.

ವಿಧಾನಸೌಧದಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯ, ಅಶೋಕ್ ಪಟ್ಟಣ್ ನಡುವಿನ‌ ಪಿಸು ಮಾತುಗಳು ಮಾಧ್ಯಮಗಳಿಂದ ಗೊತ್ತಾಗಿದೆ. ಪಾದಯಾತ್ರೆಯನ್ನು ಡಿಕೆಶಿ ವೈಯಕ್ತಿಕ ವರ್ಚಸ್ಸಿಗಾಗಿ ಮಾಡಿದ್ದಾರೆ. ಇದರ‌ ಬಗ್ಗೆ ನಾವು ಕೇಳಿದಾಗ ನಾವೆಲ್ಲರೂ ಒಗ್ಗಟ್ಟಾಗಿದ್ದೇವೆ ಅಂದ್ರು. ಆದರೆ, ಈಗ ಇವರ ಮಾತಿಂದಲೇ ಅವರ ಜಗಳ ಬೀದಿಗೆ ಬಂದಿದೆ‌ ಎಂದು ಟೀಕಿಸಿದರು.

ಕಾಂಗ್ರೆಸ್‌ ನಾಯಕರ ಆಂತರಿಕ ಸಂಘರ್ಷ ಕುರಿತಂತೆ ವಿಧಾನಸೌಧದಲ್ಲಿ ಮಾತನಾಡಿರುವ ಸಚಿವ ಆರ್.ಅಶೋಕ್

ಡಿಕೆಶಿ ರಾಜ್ಯದ ಎಲ್ಲಾ ಕ್ಷೇತ್ರಗಳನ್ನು ಹಾಳು ಮಾಡ್ತಿದ್ದಾರೆಂಬ ಮಾತು ಸಿದ್ದರಾಮಯ್ಯರಿಂದಲೇ ಗೊತ್ತಾಗಿದೆ. ಇವರ ಈ ಒಳ ಜಗಳ ಬೇಗುದಿಯಿಂದ ಕಾಂಗ್ರೆಸ್ ನಲುಗಿ ಹೋಗಿದೆ. ತಿರುಕನ ಕನಸು ಕಾಣುವ ಅವರು ಈ ಒಳ ಜಗಳದಿಂದ ಆಚೆ ಬಂದ್ರೆ ಸಾಕು‌ ಎಂದು ಕುಟುಕಿದರು.

ರಾಮದಾಸ್ ಹಾಗೂ ಪ್ರತಾಪ್ ಸಿಂಹ ನಡುವಿನ ವಾರ್ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಅದು ಅಭಿವೃದ್ಧಿಯ ಜಗಳವೇ ಹೊರತು ಪಕ್ಷದ ಜಗಳವಲ್ಲ ಎಂದು ಸಮಜಾಯಿಷಿ ನೀಡಿದರು. ನಿಮ್ಮ ಪಕ್ಷದಲ್ಲಿ ಒಳ‌ ಜಗಳವಿಲ್ಲವೇ?, ಸಚಿವರ ಮೇಲೆ ನಿಮ್ಮ ಶಾಸಕರು ದೂರು ಕೊಟ್ಟಿದ್ದಾರೆಂಬ ಪ್ರಶ್ನೆಗೆ ಪ್ರತಿಕ್ರಿಯಿಸಲು ನಿರಾಕರಿಸಿದರು.

ವಾಹನ ಟೋಯಿಂಗ್ ವಿಚಾರದಲ್ಲಿ ಪೊಲೀಸರು ಹಾಗೂ ಜನಸಾಮಾನ್ಯರ ನಡುವೆ ನಡೆಯುತ್ತಿರುವ ಘರ್ಷಣೆ ವಿಚಾರವಾಗಿ ಮಾತನಾಡಿದ ಅವರು, ಮಾಧ್ಯಮಗಳಲ್ಲಿ ಹಲವು ಪ್ರಕರಣಗಳನ್ನು ನೋಡಿದ್ದೇವೆ. ಕೆಲವೆಡೆ ಟೋಯಿಂಗ್ ಮಾಡುವ ವಿಚಾರದಲ್ಲಿ ಬೇಕಾಬಿಟ್ಟಿ ಮಾಡ್ತಿದ್ದಾರೆ.

ಈಗಾಗಲೇ ರವಿಕಾಂತೇಗೌಡ ಅವರ ಜೊತೆ ಮಾತುಕತೆ ನಡೆಸಿದ್ದೇವೆ. ಸೋಮವಾರ ಟ್ರಾಫಿಕ್ ಪೊಲೀಸ್ ಅಧಿಕಾರಿಗಳ ಜೊತೆ ಸಭೆ ನಡೆಸುತ್ತೇವೆ. ಬೆಂಗಳೂರಲ್ಲಿ ಆಗುತ್ತಿರುವ ಘಟನೆಗಳ ಬಗ್ಗೆ ಸೂಕ್ತ ನಿರ್ದೇಶನ ಕೊಡುತ್ತೇವೆ. ಪೊಲೀಸರು, ಜನಸಾಮಾನ್ಯರ ನಡುವೆ ಜನಸ್ನೇಹಿ ವ್ಯವಸ್ಥೆ ಕಲ್ಪಿಸಬೇಕು ಎಂದರು.

ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.