ETV Bharat / state

ಭಾವೈಕ್ಯತೆಗೆ ಸಾಕ್ಷಿಯಾದ ಮಕ್ಕಳ ಸಾಮೂಹಿಕ ಅಕ್ಷರಾಭ್ಯಾಸ...! - ಹಿಂದು ಮುಸ್ಲಿಂ ಮತ್ತು ಕ್ರಿಶ್ಚಿಯನ್ ಸಮುದಾಯದ ಮಕ್ಕಳು

ದೊಡ್ಡಬಳ್ಳಾಪುರ ನಗರದ ಖಾಸಗಿ ಶಾಲೆಯಲ್ಲಿ ನಡೆದ ಸಾಮೂಹಿಕ ಅಕ್ಷರಾಭ್ಯಾಸದಲ್ಲಿ ಹಿಂದೂ - ಮುಸ್ಲಿಂ ಮತ್ತು ಕ್ರಿಶ್ಚಿಯನ್ ಸಮುದಾಯದ ಮಕ್ಕಳು ಭಾಗವಹಿಸುವ ಮೂಲಕ ಭಾವ್ಯಕ್ಯತೆ ಮರೆದರು.

mass literacy exercise was held for children
ದೊಡ್ಡಬಳ್ಳಾಪುರ ನಗರದ ಖಾಸಗಿ ಶಾಲೆಯಲ್ಲಿ ಮಕ್ಕಳಿಗೆ ಸಾಮೂಹಿಕ ಅಕ್ಷರಾಭ್ಯಾಸ ನಡೆಯಿತು.
author img

By

Published : May 18, 2023, 8:13 PM IST

ದೊಡ್ಡಬಳ್ಳಾಪುರ: ವಿದ್ಯಾರ್ಜನೆಗಾಗಿ ಕಾದಿರುವ ಮಕ್ಕಳಿಗೆ ಶಾಲೆಯ ಬಾಗಿಲು ತೆರೆದಿದೆ. ತೊದಲು ನುಡಿಯುತ್ತಿದ್ದ ಮಕ್ಕಳು ಅಕ್ಷರಗಳ ಉಚ್ಛಾರಣೆ ಮಾಡುವುದನ್ನು ಪ್ರಾರಂಭಿಸಿದ್ದಾರೆ. ಶಾಲೆಯ ಮೊದಲ ದಿನ ಇಂದು ಶಾಸ್ತ್ರಬದ್ದವಾಗಿ ಆರಂಭಿಸಲಾಗಿದೆ. ಶಾಸ್ತ್ರಿಗಳ ಸಮ್ಮುಖದಲ್ಲಿ ಮಕ್ಕಳಿಗೆ ಅಕ್ಷರಾಭ್ಯಾಸ ಮಾಡಿಸಲಾಯಿತು. ಹಿಂದೂ, ಮುಸ್ಲಿಂ ಮತ್ತು ಕ್ರಿಶ್ಚಿಯನ್ ಸಮುದಾಯದ ಮಕ್ಕಳು ಸಹ ಸಾಮೂಹಿಕವಾಗಿ ಅಕ್ಷರಾಭ್ಯಾಸದಲ್ಲಿ ಭಾಗವಹಿಸುವ ಮೂಲಕ ಭಾವ್ಯಕ್ಯತೆ ಮರೆದರು.

ಜ್ಞಾನದ ದೇವತೆ ಸರಸ್ವತಿಯ ಅಶೀರ್ವಾದದೊಂದಿಗೆ ವಿದ್ಯೆ ಕಲಿಕೆ ಆರಂಭಿಸುವ ಧಾರ್ಮಿಕ ಆಚರಣೆಯನ್ನು ಅಕ್ಷರಾಭ್ಯಾಸ ಇಂದು ಎಲ್ಲರ ಪೋಷಕರ ಮನಸೆಳೆಯಿತು. ಸಾಮಾನ್ಯವಾಗಿ ಜನರು ಶೃಂಗೇರಿಯ ಶಾರದಾಂಬೆಯ ಸನ್ನಿಧಿಯಲ್ಲಿ ತಮ್ಮ ಮಕ್ಕಳ ಅಕ್ಷರಾಭ್ಯಾಸ ಮಾಡುವರು. ಆದರೆ ಈ ಶಾಲೆಯಲ್ಲಿ ಪ್ರತಿಯೊಂದು ಮಗುವಿನ ಅಕ್ಷರಾಭ್ಯಾಸವನ್ನು ಸಾಮೂಹಿಕವಾಗಿ ನೆರವೇರಿಸಲಾಯಿತು.

ಮಕ್ಕಳಿಗೆ ಅಕ್ಷರ ಬರವಣಿಗೆ ಶುರು: ದೊಡ್ಡಬಳ್ಳಾಪುರ ನಗರದ ಖಾಸಗಿ ಶಾಲೆಯಲ್ಲಿ ಗುರುವಾರ ಬೆಳಗ್ಗೆ ಏರ್ಪಡಿಸಿದ್ದ ಸಾಮೂಹಿಕ ಅಕ್ಷರಾಭ್ಯಾಸದಲ್ಲಿ ಮಕ್ಕಳು ತಮ್ಮ ಪೋಷಕರೊಂದಿಗೆ ಸೇರಿಕೊಂಡು ಅಕ್ಷರ ಬರವಣಿಗೆ ಶುರು ಮಾಡಿದರು. ಪೋಷಕರು ಸ್ಲೇಟ್ ನಲ್ಲಿ ತಮ್ಮ ಮಕ್ಕಳಿಗೆ ಅಕ್ಷರಾಭ್ಯಾಸ ಮಾಡಿಸಿದರು. ಮೊದಲ ಅಕ್ಷರವಾಗಿ ಮಕ್ಕಳು ಕನ್ನಡ ವರ್ಣಮಾಲೆಯ ಅ ಆ ಇ ಈ ಸ್ಲೇಟ್ ನಲ್ಲಿ ಬರೆದು ಶಾಸ್ತ್ರೋಬದ್ಧ ವಾಗಿ ಶಾಲೆಯ ಮೊದಲ ದಿನ ಆರಂಭಿಸಿದರು.

ಮುಸ್ಲಿಂ ಮಕ್ಕಳು ಶ್ಲೋಕ ಹಿಂದೂ ಮಕ್ಕಳು ದುವಾ ಕಲಿಕೆ: ದೊಡ್ಡಬಳ್ಳಾಪುರ ನಗರದಲ್ಲಿ ಇದೇ ಮೊದಲ ಬಾರಿಗೆ ಅಕ್ಷರಾಭ್ಯಾಸ ಆಚರಣೆ ಮಾಡಲಾಗುತ್ತಿದೆ. ಈ ಕುರಿತು ಮಾತನಾಡಿದ ಖಾಸಗಿ ಶಾಲೆಯ ಕಾರ್ಯದರ್ಶಿ ಸತೀಶ್, ನಮ್ಮದು ಸರ್ವ ಧರ್ಮ ಸಮನ್ವಯ ಶಾಲೆಯಾಗಿದೆ. ಇಲ್ಲಿ ಮುಸ್ಲಿಂ ಮಕ್ಕಳು ಶ್ಲೋಕವನ್ನು ಕಲಿಯುತ್ತಾರೆ. ಹಿಂದೂ ಮಕ್ಕಳು ದುವಾ ಕಲಿಯುತ್ತಾರೆ. ಹಾಗೇಯೇ ಕ್ರಿಶ್ಚಿಯನ್ ಧರ್ಮದ ಬೈಬಲ್ ನಲ್ಲಿರುವ ಪ್ರಾರ್ಥನೆಯನ್ನು ಮಕ್ಕಳಿಗೆ ಹೇಳಿ ಕೊಡಲಾಗುತ್ತಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಶಾಲೆಗೆ ಬಂದ ಮಕ್ಕಳು ಮೊದಲ ಬಾರಿಗೆ ತರಗತಿಯೊಳಗೆ ಹೆಜ್ಜೆ ಇಡುತ್ತಿದ್ದಾರೆ. ಈ ದಿನವನ್ನ ಪೋಷಕರಿಗೆ ಸದಾ ನೆನೆಪಿನ ದಿನವನ್ನಾಗಿ ಮಾಡಲು ಶಾಲೆ ಮುಂದಾಗಿದೆ. ಮಕ್ಕಳು ತರಗತಿಯೊಳಗೆ ಇಡುತ್ತಿರುವ ಮೊದಲ ಹೆಜ್ಜೆಯ ಫುಟ್​​​ ಪ್ರಿಂಟ್ ತೆಗದುಕೊಂಡು ತರತಿಯಲ್ಲಿ ದಾಖಲು ಮಾಡಲಾಗುತ್ತಿದೆ. ಶಾಲೆಯ ಮೊದಲ ದಿನವಾದ ಇಂದು ಮಕ್ಕಳ ಜೊತೆಯಲ್ಲಿ ಬಂದ ಪೋಷಕರು ಅಕ್ಷರಭ್ಯಾಸದಲ್ಲಿ ಭಾಗಿಯಾಗಿ ಬಗ್ಗೆ ತಮ್ಮ ಸಂತಸವನ್ನು ವ್ಯಕ್ತಪಡಿಸಿದರು.

ನಮ್ಮ ಮಕ್ಕಳು ಅಕ್ಷರಾಭ್ಯಾಸದಲ್ಲಿ ಭಾಗವಹಿಸಿದ್ದರು. ಅಕ್ಷರಾಭ್ಯಾಸದಲ್ಲಿ ಕಡ್ಡಾಯವಾಗಿ ಭಾಗವಹಿಸಬೇಕೆಂದೇನೂ ಒತ್ತಾಯ ಮಾಡಿರಲಿಲ್ಲ. ಆದರೂ ನಮ್ಮ ಮಕ್ಕಳು ಭಾಗವಹಿಸಿ ಖುಷಿ ಪಟ್ಟರು ಎಂದು ಮುಸ್ಲಿಂ ಸಮಾಜದ ಅಯಿಷಾ ಅವರು ತಮ್ಮ ಅನಿಸಿಕೆ ವ್ಯಕ್ತಪಡಿಸಿದರು.

ಮಕ್ಕಳು ಆಟ ಆಡಿ ಖುಷ್​: ಅಕ್ಷರಾಭ್ಯಾಸ ಮುಗಿದ ಬಳಿಕ ಮಕ್ಕಳಿಗೆ ವಿವಿಧ ಆಟ ಆಡಲು ಪ್ಲೇ ರೂಮ್ ತೆರೆಯಲಾಗಿತ್ತು. ಪುಟ್ಟ ಮಕ್ಕಳು ವಿವಿಧ ಆಟಗಳನ್ನು ಆಡುವುದರೊಂದಿಗೆ ಅಕ್ಷರಾಭ್ಯಾಸದ ದಿನವನ್ನು ಆನಂದವಾಗಿ ಕಳೆದರು.

ಇದನ್ನೂಓದಿ:ಅಂದು ಕುರಿ ಲೆಕ್ಕ ಹಾಕಲು ಬಾರದವ ಅನ್ನಿಸಿಕೊಂಡಿದ್ದ ಸಿದ್ದರಾಮಯ್ಯ.. ಈಗ 14ನೇ ಬಜೆಟ್​ ಮಂಡನೆಗೆ ಸನ್ನದ್ಧ!

ETV Bharat Logo

Copyright © 2025 Ushodaya Enterprises Pvt. Ltd., All Rights Reserved.