ETV Bharat / state

ಮರಾಠ ಅಭಿವೃದ್ಧಿ ನಿಗಮವು ಮರಾಠಿ ಭಾಷೆ ಅಭಿವೃದ್ಧಿಗೆ ಮಾಡಿದ್ದಲ್ಲ : ಆರ್​.ಅಶೋಕ್​

ನೂರಾರು ವರ್ಷಗಳಿಂದ ಕರ್ನಾಟಕದಲ್ಲಿ ವಾಸ ಮಾಡುತ್ತಿರುವ ಹಿಂದುಳಿದ ಮರಾಠ ಸಮುದಾಯ ಮತ್ತು ಜಾತಿಯ ಅಭಿವೃದ್ಧಿಗೆ ಮಾಡಿದ ನಿಗಮ ಇದು. ಮರಾಠಿ ಭಾಷೆಗೂ, ಮರಾಠ ಅಭಿವೃದ್ಧಿ ನಿಗಮಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಸಚಿವ ಆರ್​.ಅಶೋಕ್​ ಹೇಳಿದ್ದಾರೆ.

maratha-development-corporation
ಆರ್​.ಅಶೋಕ್​
author img

By

Published : Nov 19, 2020, 4:03 AM IST

Updated : Nov 19, 2020, 6:11 AM IST

ದೇವನಹಳ್ಳಿ: ಮರಾಠ ಅಭಿವೃದ್ಧಿ ನಿಗಮ ಮರಾಠಿ ಭಾಷೆ ಅಭಿವೃದ್ಧಿಗೆ ಮಾಡಿದ್ದಲ್ಲ, ನೂರಾರು ವರ್ಷಗಳಿಂದ ಕರ್ನಾಟಕದಲ್ಲಿ ವಾಸಿಸುತ್ತಿರುವ ಹಿಂದುಳಿದ ಮರಾಠ ಸಮುದಾಯ ಮತ್ತು ಜಾತಿಯ ಅಭಿವೃದ್ಧಿಗೆ ಮಾಡಲಾಗಿದೆ ಎಂದು ನಿಗಮ ಕಂದಾಯ ಸಚಿವ ಆರ್. ಅಶೋಕ್ ಹೇಳಿದ್ದಾರೆ.

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯಲ್ಲಿ ಭಾಗವಹಿಸಿದ್ದ ಜಿಲ್ಲಾ ಉಸ್ತುವಾರಿ ಸಚಿವ ಮತ್ತು ಕಂದಾಯ ಸಚಿವ ಆರ್. ಅಶೋಕ್ ಮರಾಠ ಅಭಿವೃದ್ಧಿ ನಿಗಮದ ಬಗ್ಗೆ ಪ್ರತಿಕ್ರಿಯೆ ನೀಡಿದರು. ಮರಾಠ ಅಭಿವೃದ್ಧಿ ನಿಗಮದ ಬಗ್ಗೆ ರಾಜ್ಯದಲ್ಲಿ ಗೊಂದಲದ ವಾತಾವರಣ ಉಂಟಾಗಿದೆ. ಆದರೆ ನೂರಾರು ವರ್ಷಗಳಿಂದ ಕರ್ನಾಟಕದಲ್ಲಿ ವಾಸ ಮಾಡುತ್ತಿರುವ ಹಿಂದುಳಿದ ಮರಾಠ ಸಮುದಾಯ ಮತ್ತು ಜಾತಿಯ ಅಭಿವೃದ್ಧಿಗೆ ಮಾಡಿದ ನಿಗಮ ಇದು. ಮರಾಠಿ ಭಾಷೆಗೂ, ಮರಾಠ ಅಭಿವೃದ್ಧಿ ನಿಗಮಕ್ಕೂ ಯಾವುದೇ ಸಂಬಂಧವಿಲ್ಲ. ಹಾಗೆಯೇ ಇದು ಬೆಳಗಾವಿಗೆ ಸಂಬಂಧಿಸಿದ ವಿಷಯವಲ್ಲ, ಇಡೀ ರಾಜ್ಯಕ್ಕೆ ಸಂಬಂಧಿಸಿದೆ. ಬೆಂಗಳೂರಿನಲ್ಲೂ ಮರಾಠ ಸಂಘವಿದೆ, ವಸತಿ ನಿಲಯವೂ ಇದೆ ಎಂದು ಹೇಳಿದರು.

ಮರಾಠ ಅಭಿವೃದ್ಧಿ ನಿಗಮದ ಬಗ್ಗೆ ಸಚಿವ ಆರ್​.ಅಶೋಕ್​ ಪ್ರತಿಕ್ರಿಯೆ

ಇದೇ ವೇಳೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಎಸ್​​ಪಿ ಕಚೇರಿ ತೆರೆಯವ ಬಗ್ಗೆ ಪ್ರತಿಕ್ರಿಯಿಸಿದ ಅವರು, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಜಿಲ್ಲಾ ಕೇಂದ್ರವನ್ನ ದೊಡ್ಡಬಳ್ಳಾಪುರ ಅಥವಾ ದೇವನಹಳ್ಳಿಯಲ್ಲಿ ಮಾಡಬೇಕೆನ್ನುವ ಗೊಂದಲ ಇದೆ. ಇಲ್ಲಿನ ಶಾಸಕರು ಸಹ ತಮ್ಮ ಕ್ಷೇತ್ರದಲ್ಲಿ ಜಿಲ್ಲಾ ಕೇಂದ್ರ ಮಾಡುವ ಬಗ್ಗೆ ಪಟ್ಟು ಹಿಡಿದಿದ್ದಾರೆ. ವೈಜ್ಞಾನಿಕವಾಗಿ ಚರ್ಚೆ ನಡೆಸಿದ ನಂತರ ಸರ್ಕಾರದ ಮಟ್ಟದಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಎಸ್​​ಪಿ ಕಚೇರಿ ತೆರೆಯಲಾಗುವುದೆಂದು ಹೇಳಿದರು.

Last Updated : Nov 19, 2020, 6:11 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.