ETV Bharat / state

ಅತ್ಯಾಚಾರ ಯತ್ನ: ದೊಡ್ಡಬಳ್ಳಾಪುರದಲ್ಲಿ ವಿರೋಧ ವ್ಯಕ್ತಪಡಿಸಿದ ಮಹಿಳೆ ಮೇಲೆ ಪೈಶಾಚಿಕ ಕೃತ್ಯ - ದೊಡ್ಡಬಳ್ಳಾಪುರ ತಾಲೂಕಿನ ದಡಘಟ್ಟುಮಡಗು ಗ್ರಾಮ

ಅತ್ಯಾಚಾರ ಯತ್ನ ಆರೋಪ. ವಿರೋಧ ವ್ಯಕ್ತಪಡಿಸಿದ ಮಹಿಳೆ ಮೇಲೆ ಪೈಶಾಚಿಕ ಕೃತ್ಯ. ಕೈ, ಕಾಲು, ಮುಖ ಹಾಗೂ ಖಾಸಗಿ ಅಂಗಗಳಿಗೆ ಕಾಮುಕನಿಂದ ಹಲ್ಲೆ. ದೊಡ್ಡಬಳ್ಳಾಪುರ ತಾಲೂಕಿನ ದಡಿಘಟ್ಟಮಡಗು ಗ್ರಾಮದಲ್ಲಿ ಘಟನೆ.

Representative image
ಸಾಂದರ್ಭಿಕ ಚಿತ್ರ
author img

By

Published : Nov 26, 2022, 10:50 AM IST

Updated : Nov 26, 2022, 10:55 AM IST

ದೊಡ್ಡಬಳ್ಳಾಪುರ(ಬೆಂಗಳೂರು ಗ್ರಾಮಾಂತರ): ಹೊಲದಲ್ಲಿ ಹುಲ್ಲು ಕೊಯ್ಯುತ್ತಿದ್ದ ಮಹಿಳೆಯ ಮೇಲೆ ಕಾಮುಕನೋರ್ವ ಅತ್ಯಾಚಾರಕ್ಕೆ ಯತ್ನಿಸಿದ್ದಾನೆ ಎಂಬ ಆರೋಪ ಕೇಳಿಬಂದಿದೆ. ಮಹಿಳೆ ನಿರಾಕರಿಸಿದಾಗ ಕಲ್ಲಿನಿಂದ ಹಲ್ಲೆ ನಡೆಸಿದ್ದಾನೆ. ದೊಡ್ಡಬಳ್ಳಾಪುರ ತಾಲೂಕಿನ ದಡಿಘಟ್ಟಮಡಗು ಗ್ರಾಮದಲ್ಲಿ ನ. 20 ರಂದು ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.

ಪ್ರಕರಣದ ವಿವರ: ನ. 20 ರಂದು ಮಧ್ಯಾಹ್ನದ ವೇಳೆ ಮಹಿಳೆ ಹೊಲದಲ್ಲಿ ಹುಲ್ಲು ಕೊಯ್ಯುತ್ತಿದ್ದರು. ಇದೇ ಗ್ರಾಮದ ನರಸೇಗೌಡ ಎಂಬಾತ ಮಹಿಳೆಯ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ್ದಾನೆ ಎಂದು ತಿಳಿದುಬಂದಿದೆ. ಆದರೆ ಸಂತ್ರಸ್ತೆ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಇದರಿಂದ ಕ್ರೋಧಗೊಂಡ ಕಾಮುಕ ಮಹಿಳೆಯನ್ನು ನೆಲಕ್ಕೆ ಬೀಳಿಸಿ ಕಲ್ಲು, ದೊಣ್ಣೆಗಳಿಂದ ಆಕೆಯ ಕೈ-ಕಾಲು, ತೋಡೆ, ಮುಖ ಹಾಗೂ ಖಾಸಗಿ ಅಂಗಗಳ ಮೇಲೆ ಹಿಗ್ಗಾಮುಗ್ಗಾವಾಗಿ ಹಲ್ಲೆ ಮಾಡಿದ್ದಾನೆ. ಅಲ್ಲದೇ ಸ್ಥಳಕ್ಕೆ ಬಂದ ನರಸೇಗೌಡನ ಪತ್ನಿ ಸಹ ಮಹಿಳೆ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ. ಬಳಿಕ ಇಬ್ಬರು ಸ್ಥಳದಿಂದ ಪರಾರಿಯಾಗಿದ್ದಾರೆ ಎಂದು ತಿಳಿದು ಬಂದಿದೆ.

ಕಾಮುಕನ ಹಲ್ಲೆಯಿಂದ ನಿತ್ರಾಣಗೊಂಡಿದ್ದ ಸಂತ್ರಸ್ತೆ ಅಪರಿಚಿತ ಬೈಕ್ ಸವಾರರ ಸಹಾಯದೊಂದಿಗೆ ಸಾಸಲು ಗ್ರಾಮಕ್ಕೆ ಆಗಮಿಸಿದ್ದಾರೆ. ಬಳಿಕ ಆಟೋದಲ್ಲಿ ನಗರದ ಸಾರ್ವಜನಿಕ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದ್ದಾರೆ. ಈ ಬಗ್ಗೆ ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಘಟನೆಯಿಂದ ಜರ್ಜರಿತಗೊಂಡಿರುವ ಮಹಿಳೆ ಜೀವ ಭಯದಲ್ಲಿ ನರಳುತ್ತಿದ್ದಾರೆ. ಇರುವ ಒಬ್ಬನೇ ಮಗನನ್ನು ಕೊಂದು ಬಿಡುತ್ತಾರೆಂಬ ಭಯವಿದೆ. ಘಟನೆ ಬಗ್ಗೆ ಮಾಹಿತಿ ತಿಳಿದು ಆಸ್ಪತ್ರೆಗೆ ಬಂದ ತಹಶೀಲ್ದಾರ್ ಮೋಹನ ಕುಮಾರಿ ಸಂತ್ರಸ್ತ ಮಹಿಳೆಗೆ ಧೈರ್ಯ ತುಂಬಿ ಪೊಲೀಸ್ ರಕ್ಷಣೆ ನೀಡುವುದಾಗಿ ಭರವಸೆ ನೀಡಿದ್ದಾರೆ. ಸದ್ಯ ಮಹಿಳಾ ಸಾಂತ್ವನ ಕೇಂದ್ರದಲ್ಲಿ ಇರಲು ವ್ಯವಸ್ಥೆ ಮಾಡಿ ಮಹಿಳೆಗೆ ಆತ್ಮಸ್ಥೈರ್ಯ ತುಂಬಿದ್ದಾರೆ.

ಇದನ್ನೂ ಓದಿ: ರಾಯಚೂರು: ಒಂದೇ ವಾರದಲ್ಲಿ ಎರಡು ಪೋಕ್ಸೊ ಪ್ರಕರಣ ದಾಖಲು

Last Updated : Nov 26, 2022, 10:55 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.