ದೇವನಹಳ್ಳಿ: ಏರ್ಪೋಟ್ ರಸ್ತೆಯ ಬಳಿಯಿರುವ ಐಟಿಸಿ ಫ್ಯಾಕ್ಟರಿಯಲ್ಲಿ ಚಿರತೆ ಪ್ರತ್ಯಕ್ಷವಾಗಿ ಒಂದು ವಾರ ಕಳೆದ ಮೇಲೆ ಫ್ಯಾಕ್ಟರಿ ಪಕ್ಕದ ಗ್ರಾಮದಲ್ಲಿ ಮತ್ತೆ ಕಾಣಿಸಿಕೊಂಡಿದೆ. ಬೆಂಗಳೂರು ಉತ್ತರ ತಾಲೂಕಿನ ತರಬನಹಳ್ಳಿ ಸಮೀಪ ಇರುವ ಫ್ಯಾಕ್ಟರಿ ಸುತ್ತಮುತ್ತ ಚಿರತೆ ಪ್ರತ್ಯಕ್ಷವಾಗಿತ್ತು. ಇದೀಗ ಬೈನಹಳ್ಳಿ ಗ್ರಾಮದಲ್ಲಿಯೂ ಓಡಾಡಿದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಫ್ಯಾಕ್ಟರಿಯಿಂದ ಗ್ರಾಮಗಳತ್ತ ಚಿರತೆ ಹೊರಟಿದೆಯಾ? ಅಥವಾ ಇದೀಗ ಕಾಣಿಸಿಕೊಳ್ಳುತ್ತಿರುವ ಚಿರತೆ ಬೇರೆನಾ? ಎಂಬೆಲ್ಲ ಆತಂಕ ಗ್ರಾಮದ ಜನರಲ್ಲಿ ಮನೆ ಮಾಡಿದೆ. ಈ ಚಿರತೆ ತನ್ನ ಜಾಡು ಬದಲಿಸಿ ಫ್ಯಾಕ್ಟರಿಯಿಂದ ಬೇರೆ ಯಾವ ಕಡೆ ಹೋಗಿರಬಹುದು ಎಂಬ ಭಯವೂ ಇದೆ.
ತೋಟದ ಮನೆಗಳ ಬಳಿ ಚಿರತೆ ಒಡಾಡಿದ ದೃಶ್ಯ ಸಿಸಿಟಿವಿಯಲ್ಲಿ ದಾಖಲಾಗಿದ್ದು ಕತ್ತಲಾಗುತ್ತಿದ್ದಂತೆ ಗ್ರಾಮದಲ್ಲಿ ಮನೆಗಳಿಂದ ಹೊರಬರಲು ಜನರು ಹೆದರುತ್ತಿದ್ದಾರೆ. ಕೇವಲ ಐಟಿಸಿ ಫ್ಯಾಕ್ಟರಿ ಸುತ್ತಮುತ್ತ ಮಾತ್ರ ಬೋನಿಟ್ಟಿರುವ ಅರಣ್ಯಾಧಿಕಾರಿಗಳು ಪರಿಶೀಲನೆ ಮಾಡಿ ತೆರಳುತ್ತಿದ್ದಾರೆ. ಆದರೆ ಗ್ರಾಮಗಳ ಬಳಿ ಬೋನು ಇಡುವಂತೆ ಮನವಿ ಮಾಡಿದರೂ ಸಹ ಅಧಿಕಾರಿಗಳು ಆಲಿಸುತ್ತಿಲ್ಲ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ಹೆಣ್ಣು ಮಗು ಕದ್ದು ಪರಾರಿ ಆಗುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆ.. ನಮಗೆ ದೂರೇ ಬಂದಿಲ್ಲ ಎಂದ ಪೊಲೀಸರು!