ETV Bharat / state

ವಕೀಲರಿಗೆ 50 ಕೋಟಿ ಪ್ಯಾಕೇಜ್ ನೀಡದಿದ್ದರೆ ಪ್ರತಿಭಟನೆ: ಎಎಬಿ ನಿರ್ಣಯ

ಏಷ್ಯಾದಲ್ಲಿಯೇ ಅತಿ ದೊಡ್ಡ ವಕೀಲರ ಸಂಘವಾಗಿರುವ ಬೆಂಗಳೂರು ವಕೀಲರ ಸಂಘ ಗುರುವಾರ ನಗರದ ವಕೀಲರ ಭವನದಲ್ಲಿ ಕಾರ್ಯಕಾರಿ ಸಮಿತಿ ಸಭೆ ನಡೆಸಿದೆ.

Lawyers demand
ವಕೀಲರಿಗೆ 50 ಕೋಟಿ ಪ್ಯಾಕೇಜ್ ನೀಡದಿದ್ದರೆ ಪ್ರತಿಭಟನೆ : ಎಎಬಿ ನಿರ್ಣಯ
author img

By

Published : Jun 11, 2020, 8:56 PM IST

ಬೆಂಗಳೂರು: ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ವಕೀಲರಿಗೆ ಸರ್ಕಾರ ತುರ್ತಾಗಿ 50 ಕೋಟಿ ರೂಪಾಯಿ ಪರಿಹಾರ ನೀಡದಿದ್ದರೆ ರಾಜ್ಯಾದ್ಯಂತ ಪ್ರತಿಭಟನೆ ನಡೆಸಲು ತೀರ್ಮಾನಿಸಿ ಬೆಂಗಳೂರು ವಕೀಲರ ಸಂಘ(ಎಎಬಿ) ಇಂದು ನಡೆಸಿದ ಕಾರ್ಯಕಾರಿ ಸಮಿತಿ ಸಭೆಯಲ್ಲಿ ನಿರ್ಣಯ ಕೈಗೊಂಡಿದೆ.

ಏಷ್ಯಾದಲ್ಲಿಯೇ ಅತಿ ದೊಡ್ಡ ವಕೀಲರ ಸಂಘವಾಗಿರುವ ಬೆಂಗಳೂರು ವಕೀಲರ ಸಂಘ ಗುರುವಾರ ನಗರದ ವಕೀಲರ ಭವನದಲ್ಲಿ ಕಾರ್ಯಕಾರಿ ಸಮಿತಿ ಸಭೆ ನಡೆಸಿದೆ. ಸಂಘದ ಅಧ್ಯಕ್ಷ ಎ.ಪಿ.ರಂಗನಾಥ್ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಲಾಕ್​ಡೌನ್ ಬಳಿಕ ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ವಕೀಲರ ಸ್ಥಿತಿಗತಿಗಳ ಕುರಿತು ಚರ್ಚಿಸಿ ಕೆಲ ನಿರ್ಣಯಗಳನ್ನು ಕೈಗೊಂಡಿದೆ.

ಸಭೆಯಲ್ಲಿ ಕೈಗೊಂಡ ನಿರ್ಣಯಗಳು :

- ವಕೀಲರಿಗೆ ನೆರವು ಕೋರಿ ಮುಖ್ಯಮಂತ್ರಿಗಳಿಗೆ ಎರಡು ಬಾರಿ ಮನವಿ ಸಲ್ಲಿಸಿದ್ದರೂ ನೆರವು ನೀಡದ ಸರ್ಕಾರದ ಧೋರಣೆ ಖಂಡಿಸುವುದು ಮತ್ತು 50 ಕೋಟಿ ರೂಪಾಯಿ ನೆರವನ್ನು ತುರ್ತಾಗಿ ನೀಡುವಂತೆ ಒತ್ತಾಯಿಸುವುದು.

- ರಾಜ್ಯ ಸರ್ಕಾರ ಇತರೆ ಸಮುದಾಯಗಳಿಗೆ ನೀಡಿದಂತೆ ಮುಂದಿನ 7 ದಿನಗಳ ಒಳಗೆ ವಕೀಲರಿಗೆ ಆರ್ಥಿಕ ನೆರವು ನೀಡದಿದ್ದರೆ ರಾಜ್ಯಾದ್ಯಂತ ಪ್ರತಿಭಟನೆ ನಡೆಸುವುದು.

- ವಕೀಲರ ಕಲ್ಯಾಣ ನಿಧಿಯ ಕಲಂ 16ಕ್ಕೆ ಸೂಕ್ತ ತಿದ್ದುಪಡಿ ತಂದು ಆರ್ಥಿಕ ಸಂಕಷ್ಟದಲ್ಲಿರುವ ವಕೀಲರಿಗೆ 10 ಕೋಟಿ ರೂಪಾಯಿ ನೆರವು ನೀಡುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ವಕೀಲರ ಪರಿಷತ್ತಿಗೆ ಪತ್ರ ಬರೆಯುವುದು.

- ರಾಜ್ಯ ನ್ಯಾಯಾಂಗದ ಮುಖ್ಯಸ್ಥರಾಗಿರುವ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳು ವಕೀಲ ಸಮುದಾಯಕ್ಕೆ 50 ಕೋಟಿ ನೆರವು ನೀಡಲು ಸರ್ಕಾರಕ್ಕೆ ಸಲಹೆ ನೀಡಬೇಕೆಂದು ಒತ್ತಾಯಿಸುವುದು.

- ವಕೀಲರ ಸಂಘದ ಸದಸ್ಯರು ಸಂಘವು ಕೈಗೊಳ್ಳುವ ನಿರ್ಣಯಗಳಿಗೆ ಬದ್ಧರಾಗಿರಬೇಕು. ಸಂಘದ ಗೌರವಕ್ಕೆ ಧಕ್ಕೆ ತರುವಂತಹ ಚಟುವಟಿಕೆ ಹಮ್ಮಿಕೊಂಡಲ್ಲಿ ಅಂತವರ ವಿರುದ್ಧ ಸಂಘದ ಬೈಲಾ ಕಲಂ 60 ಮತ್ತು 61ರ ಪ್ರಕಾರ ಶಿಸ್ತು ಕ್ರಮ ಜರುಗಿಸುವುದು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.