ETV Bharat / state

ದೊಡ್ಡಬಳ್ಳಾಪುರ: ವಿಶೇಷ ಚೇತನ ವ್ಯಕ್ತಿ ಮೇಲೆ ಮಾರಣಾಂತಿಕ ಹಲ್ಲೆ - ದೊಡ್ಡಬಳ್ಳಾಪುರ

ಜಮೀನು ವಿಚಾರಕ್ಕೆ ಸಂಬಂಧಿಸಿದಂತೆ ವಿಶೇಷ ಚೇತನ ವ್ಯಕ್ತಿಯ ಮೇಲೆ ಮಾರಾಣಾಂತಿಕ ಹಲ್ಲೆ ಮಾಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.

doddaballapura
ವಿಶೇಷ ಚೇತನ ವ್ಯಕ್ತಿ ಮೇಲೆ ಮಾರಾಣಾಂತಿಕ ಹಲ್ಲೆ
author img

By

Published : Jun 25, 2021, 8:29 AM IST

ದೊಡ್ಡಬಳ್ಳಾಪುರ: ಜಮೀನು ವಿಚಾರಕ್ಕೆ ಸಂಬಂಧಿಸಿದಂತೆ ದಾಯಾದಿಗಳ ನಡುವೆ ಮನಸ್ತಾಪವಿದ್ದು, ನೀಲಗಿರಿ ತೋಪಿನಲ್ಲಿ ಮರಗಳನ್ನು ಕತ್ತರಿಸುತ್ತಿದ್ದ ವಿಶೇಷ ಚೇತನ ವ್ಯಕ್ತಿಯ ಮೇಲೆ ಮಾರಾಣಾಂತಿಕ ಹಲ್ಲೆ ಮಾಡಿ ಅವಾಚ್ಯ ಶಬ್ದಗಳಿಂದ ನಿಂದಿಸಿ ಜೀವ ಬೆದರಿಕೆ ಹಾಕಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.

ದೊಡ್ಡಬಳ್ಳಾಪುರ ತಾಲೂಕಿನ ರಾಮೇಶ್ವರ ಗ್ರಾಮದ ಶ್ರೀನಿವಾಸ್ ಹಲ್ಲೆಗೊಳಗಾದ ವಿಶೇಷ ಚೇತನ ವ್ಯಕ್ತಿ. ಜೂನ್ 21ರ ಮಧ್ಯಾಹ್ನದ ವೇಳೆಗೆ ಈ ಘಟನೆ ನಡೆದಿದೆ. ಹಲ್ಲೆಗೊಳಗಾದ ಶ್ರೀನಿವಾಸ್​​ ತಮ್ಮ ತಂದೆ ಮತ್ತು ತಂದೆಯ ತಂಗಿಯಿಂದ ಪಿತ್ರಾರ್ಜಿತವಾಗಿ ರಾಮೇಶ್ವರ ಗ್ರಾಮ ಸರ್ವೆ ನಂಬರ್ 160/1, 160/2, 160/ 3 ರಲ್ಲಿ ಒಟ್ಟು 22 ಎಕರೆ ಜಮೀನು ಹೊಂದಿದ್ದಾರೆ.

ವಿಶೇಷ ಚೇತನ ವ್ಯಕ್ತಿ ಮೇಲೆ ಮಾರಾಣಾಂತಿಕ ಹಲ್ಲೆ ಆರೋಪ

ಇದೇ ಜಮೀನಿಗೆ ಅತಿಕ್ರಮ ಪ್ರವೇಶ ಮಾಡಿದ ಕೃಷ್ಣಮೂರ್ತಿ, ಗೋವಿಂದರಾಜು, ವೆಂಕಟೇಶ, ನರಸಿಂಹಮೂರ್ತಿ, ನಾರಣಪ್ಪ, ಅಪ್ಪಯ್ಯರಾಜು, ಗೀತಾ, ಅನಸೂಯ, ಹೇಮಂತ, ಸಂತೋಷ, ಹನುಮಂತೇಗೌಡ ಎಂಬುವರು ತನ್ನ ಮೇಲೆ ನೀಲಿಗಿರಿ ದೊಣ್ಣೆ ಹಾಗೂ ಮಚ್ಚಿನಿಂದ ಹಲ್ಲೆ ಮಾಡಿ ಬಲಗೈ ಬೆರಳುಗಳನ್ನು ಮುರಿದಿದ್ದಾರೆ. ಅವಾಚ್ಯ ಶಬ್ದಗಳಿಂದ ನಿಂದಿಸಿ ಪ್ರಾಣ ಬೆದರಿಕೆ ಹಾಕಿದ್ದಾರೆ ಎಂದು ಶ್ರೀನಿವಾಸ್ ದೂರಿದ್ದಾರೆ.

ಈ ಘಟನೆಗೆ ಸಂಬಂಧಿಸಿದಂತೆ ಶ್ರೀನಿವಾಸ್ ದೊಡ್ಡಬೆಳವಂಗಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಆದರೆ ಪೊಲೀಸರು ಹಲ್ಲೆ ನಡೆಸಿದವರ ಮೇಲೆ ಜಾಮೀನು ಸಿಗುವ ರೀತಿಯಲ್ಲಿ ಸೆಕ್ಷನ್ ಹಾಕಿ ಆರೋಪಿಗಳಿಗೆ ನೆರವಿಗಾಗಿದ್ದಾರೆ ಎಂದು ಶ್ರೀನಿವಾಸ್ ಆರೋಪಿಸಿದ್ದಾರೆ.

ಘಟನೆಯ ಹಿನ್ನೆಲೆ:

ಶ್ರೀನಿವಾಸ್ ಅವರ ತಾತನಿಗೆ ಇಬ್ಬರು ಹೆಂಡತಿಯರು. ಮೊದಲ ಹೆಂಡತಿಯ ಕಡೆ ಶ್ರೀನಿವಾಸ್ ಇದ್ಧು, ಎರಡನೇ ಹೆಂಡತಿಯ ಕಡೆಯವರು ಹಲ್ಲೆ ನಡೆಸಿದವರು. ಎರಡು ಕಡೆಯವರಿಗೂ ತಾತನ ಆಸ್ತಿ ಹಂಚಿಕೆಯಲ್ಲಿ ಮನಸ್ತಾಪವಿದೆ. ಇದೇ ವಿಚಾರಕ್ಕೆ ಎರಡು ಕಡೆಯವರು 20 ವರ್ಷಗಳಿಂದ ಜಗಳವಾಡುತ್ತಿದ್ದಾರೆ. ಈ ಬಗ್ಗೆ ಕೋರ್ಟ್​ನಲ್ಲಿ ವಿಚಾರಣೆ ಸಹ ನಡೆಯುತ್ತಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.