ETV Bharat / state

ಸರ್ಕಾರಿ ಬಸ್​ ಅಪಘಾತದಲ್ಲಿ ಮೃತಪಟ್ಟವರಿಗೆ ₹10 ಲಕ್ಷ: ಪರಿಹಾರ ಮೊತ್ತ ಹೆಚ್ಚಿಸಿದ ಕೆಎಸ್​ಆರ್​ಟಿಸಿ - ksrtc compensation

ಸರ್ಕಾರಿ ಬಸ್​ಗಳಲ್ಲಿ ಪ್ರಯಾಣಿಸುತ್ತಿದ್ದಾಗ ಅಪಘಾತವಾಗಿ ಮೃತಪಟ್ಟ ಕುಟುಂಬಸ್ಥರಿಗೆ ನೀಡುವ ಪರಿಹಾರದ ಮೊತ್ತವನ್ನು ಕೆಎಸ್​ಆರ್​ಟಿಸಿ ಹೆಚ್ಚಿಸಿದೆ.

ಪರಿಹಾರ ಮೊತ್ತ ಹೆಚ್ಚಿಸಿದ ಕೆಎಸ್​ಆರ್​ಟಿಸಿ
ಪರಿಹಾರ ಮೊತ್ತ ಹೆಚ್ಚಿಸಿದ ಕೆಎಸ್​ಆರ್​ಟಿಸಿ
author img

By ETV Bharat Karnataka Team

Published : Dec 28, 2023, 6:51 AM IST

ಬೆಂಗಳೂರು: ಸರ್ಕಾರಿ ಬಸ್​ನಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಅಪಘಾತವಾಗಿ ಮೃತಪಟ್ಟ ಪ್ರಯಾಣಿಕರ ಕುಟುಂಬಕ್ಕೆ ನೀಡಲಾಗುವ ಆರ್ಥಿಕ ಪರಿಹಾರದ ಮೊತ್ತವನ್ನು 10 ಲಕ್ಷ ರೂಪಾಯಿಗೆ ಹೆಚ್ಚಿಸಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ (ಕೆಎಸ್​ಆರ್​ಟಿಸಿ) ನಿಗಮ ಆದೇಶ ಹೊರಡಿಸಿದೆ.

ಈ ಸಂಬಂಧ ಸುತ್ತೋಲೆ ಹೊರಡಿಸಿರುವ ಕೆಎಸ್​ಆರ್​ಟಿಸಿ, 2024 ರ ಜನವರಿ 1ರಿಂದ ಅನ್ವಯವಾಗುವಂತೆ ಈ ಹೊಸ ನಿಯಮ ಜಾರಿಗೆ ಬರಲಿದೆ. ಈ ಮೊದಲು ಸರ್ಕಾರಿ ಬಸ್​ನಲ್ಲಿ ಪ್ರಯಾಣಿಸುತ್ತಿದ್ದ ಅಪಘಾತವಾಗಿ ಮೃತಪಟ್ಟ ಪ್ರಯಾಣಿಕರು ಕುಟುಂಬಸ್ಥರಿಗೆ 3 ಲಕ್ಷ ರೂಪಾಯಿ ಪರಿಹಾರ ಮೊತ್ತ ನೀಡಲಾಗುತ್ತಿತ್ತು. ಇದೀಗ ಅದನ್ನು 10 ಲಕ್ಷ ರೂಪಾಯಿಗೆ ಹೆಚ್ಚಿಸಲಾಗಿದೆ.

2017ರಿಂದ ಮೃತ ಪ್ರಯಾಣಿಕರ ಕುಟುಂಬಕ್ಕೆ ಅಪಘಾತ ಪರಿಹಾರ ಮೊತ್ತವಾಗಿ 3 ಲಕ್ಷ ರೂಪಾಯಿ ನೀಡಲಾಗುತ್ತಿದೆ. ಅಕ್ಟೋಬರ್ 31ರಂದು ನಡೆದ ಅಪಘಾತ ಪರಿಹಾರ ನಿಧಿ ಸಭೆಯಲ್ಲಿ ಈ ಬಗ್ಗೆ ಚರ್ಚಿಸಿ ಪರಿಹಾರದ ಮೊತ್ತವನ್ನು 3 ಲಕ್ಷದಿಂದ 10 ಲಕ್ಷ ರೂ.ಗೆ ಹೆಚ್ಚಿಸಲು ಅನುಮೋದನೆ ನೀಡಲಾಗಿತ್ತು. ಅದರಂತೆ ಇದೀಗ ಪರಿಹಾರ ಮೊತ್ತವನ್ನು ಹೆಚ್ಚಿಸಿ ಸುತ್ತೋಲೆ ಹೊರಡಿಸಲಾಗಿದೆ.

ಪ್ರಯಾಣಿಕರಿಂದ ಪರಿಹಾರ ವಂತಿಗೆ ಸಂಗ್ರಹ: ಅಪಘಾತ ಪರಿಹಾರ ಮೊತ್ತ ಹೆಚ್ಚಿಸಿದ ಹಿನ್ನೆಲೆ ಪ್ರಯಾಣಿಕರಿಂದ ವಂತಿಕೆ ಸಂಗ್ರಹಣೆಯನ್ನೂ ಹೆಚ್ಚಿಸಲು ಸಭೆಯಲ್ಲಿ ತೀರ್ಮಾನಿಸಲಾಗಿದೆ. ಅದರಂತೆ ಕೆಎಸ್​ಆರ್​ಟಿಸಿ ಬಸ್​ಗಳಲ್ಲಿ ಪ್ರಯಾಣಿಸುವ ಪ್ರಯಾಣಿಕರು ಪಡೆದುಕೊಳ್ಳುವ 50 ರೂ. ರಿಂದ 99 ರೂ. ವರೆಗಿನ ಟಿಕೆಟ್ ದರದಲ್ಲಿ ಪ್ರತಿ ಪ್ರಯಾಣಿಕರಿಂದ 1 ರೂಪಾಯಿ ವಂತಿಗೆ ಪಡೆಯಲಾಗುತ್ತದೆ. 100 ರೂಪಾಯಿ ಮತ್ತು ಅದಕ್ಕಿಂತ ಹೆಚ್ಚಿನ ಟಿಕೆಟ್ ದರಕ್ಕೆ 2 ರೂ. ವಂತಿಕೆ ಮೊತ್ತ ಪಡೆಯಲು ತೀರ್ಮಾನಿಸಲಾಗಿದೆ. 1 ರಿಂದ 50 ರೂಪಾಯಿವರೆಗಿನ ಟಿಕೆಟ್​ ದರದಲ್ಲಿ ಯಾವುದೇ ವಂತಿಗೆ ಹಣವನ್ನು ಪ್ರಯಾಣಿಕರಿಂದ ಪಡೆಯಲಾಗುವುದಿಲ್ಲ ಎಂದು ಕೆಎಸ್​ಆರ್​ಟಿಸಿ ಪ್ರಕಟಣೆಯಲ್ಲಿ ತಿಳಿಸಿದೆ.

ಸರಕು ಸಾಗಣೆ ಸೇವೆ: ಪ್ರಯಾಣಿಕರ ಸೇವೆಯಲ್ಲಿ ಇತಿಹಾಸ ನಿರ್ಮಿಸಿರುವ ಕೆಎಸ್​ಆರ್​ಟಿಸಿ ಕಾರ್ಗೋ ಸೇವಾ ಕ್ಷೇತ್ರಕ್ಕೆ ಅಧಿಕೃತವಾಗಿ ಕಾಲಿಟ್ಟಿದ್ದು, ಡಿಸೆಂಬರ್​ 15 ರಿಂದ ಕಾರ್ಯಾರಂಭ ಮಾಡಿದೆ. ಜನರು ಪಾರ್ಸಲ್​ಗಳನ್ನು ಆನ್​ಲೈನ್​ನಲ್ಲಿ ಬುಕ್ ಮಾಡಿದರೆ ಬುಕಿಂಗ್ ಮಾಡಿದ ಸ್ಥಳದಿಂದ ಕೆಎಸ್ಆರ್​ಟಿಸಿ ಕಾರ್ಗೋ ಸೇವೆ ಒದಗಿಸುವ ಟ್ರಕ್​ಗಳು ಬಂದು ಸಂಗ್ರಹ ಮಾಡುತ್ತವೆ. ತಲುಪಿಸಬೇಕಾದ ಸ್ಥಳಕ್ಕೆ ಸಾಗಣೆ ಮಾಡಲಿವೆ. ಇದಕ್ಕಾಗಿ 20 ಕಾರ್ಗೋ ಟ್ರಕ್​​ಗಳಿಗೆ ಸರ್ಕಾರ ಈಚೆಗೆ ಚಾಲನೆ ನೀಡಿತ್ತು.

ಇದನ್ನೂ ಓದಿ: ಸಿಬ್ಬಂದಿ ಆರ್ಥಿಕ ಭದ್ರತೆಗೆ ಕೆಎಸ್ಆರ್​ಟಿಸಿ ಆದ್ಯತೆ: ನೌಕರರ ನಿಧನದ ವೇಳೆ ನೀಡುವ ಪರಿಹಾರ ಮೊತ್ತ 3 ಲಕ್ಷದಿಂದ 10 ಲಕ್ಷ ರೂಪಾಯಿಗೆ ಹೆಚ್ಚಳ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.