ಬೆಂಗಳೂರು: ರಾಜ್ಯ ಪೊಲೀಸ್ ಮೀಸಲು ಪಡೆಯಲ್ಲಿ (ಕೆಎಸ್‌ಆರ್‌ಪಿ) ಸೇವೆ ಸಲ್ಲಿಸುತ್ತಿರುವ ಪೊಲೀಸ್ ಸಿಬ್ಬಂದಿಗೆ ಕಡ್ಡಾಯವಾಗಿ ಹೊಟ್ಟೆ ಕರಗಿಸಿಕೊಳ್ಳಬೇಕೆಂದು ಎಡಿಜಿಪಿ ಅಲೋಕ್ ಕುಮಾರ್ ಸುತ್ತೋಲೆ ಹೊರಡಿಸಿದ್ದಾರೆ.
ಗಲಭೆ, ಪ್ರತಿಭಟನೆ ಸೇರಿದಂತೆ ವಿವಿಧ ಬೆಳವಣಿಗೆ ಅನೇಕ ತುರ್ತು ಸನ್ನಿವೇಶದಲ್ಲಿ ಕೆಎಸ್‌ಆರ್‌ಪಿ ಸಿಬ್ಬಂದಿ ಸೇವೆ ಅಗತ್ಯವಾಗಿದೆ. ಬಹುತೇಕ ಸಮಯದಲ್ಲಿ ದೈಹಿಕ ಕಸರತ್ತು ಇಲ್ಲದೇ ಕೆಎಸ್‌ಆರ್‌ಪಿ ವ್ಯಾನಿನಲ್ಲೇ ಪೊಲೀಸರು ಕುಳಿತುಕೊಂಡು ಇರುವುದರಿಂದ ಪೊಲೀಸರ ತೂಕ ಹೆಚ್ಚಾಗಿದೆ. ಇದರಿಂದ ತುರ್ತು ಸನ್ನಿವೇಶದಲ್ಲಿ ಕೆಎಸ್‌ಆರ್‌ಪಿ ಪೊಲೀಸರು ಸರಿಯಾಗಿ ಕೆಲಸ ಮಾಡದೇ ಟೀಕೆಗೆ ಒಳಗಾಗಿದ್ದಾರೆ. ಸಾಮಾನ್ಯ ತೂಕಕ್ಕಿಂತ 10 ಕೆಜಿ ತೂಕ ಕಡಿಮೆ ಮಾಡುವಂತೆ ಅಲೋಕ್ ಕುಮಾರ್ ಸುತ್ತೋಲೆ ಹೊರಡಿಸಿದ್ದಾರೆ.
ಓದಿ: ಪೊಲೀಸ್ ಠಾಣೆಯ ಮುಂಭಾಗವೇ ಶವ ಪತ್ತೆ.. 'ದೃಶ್ಯ' ಸಿನೆಮಾ ನೆನಪಿಸುವಂತಿದೆ ಕೃತ್ಯ!
ಏಪ್ರಿಲ್ 30ರೊಳಗೆ ಕೆಎಸ್‌ಆರ್‌ಪಿ ಪೊಲೀಸರು ತೂಕ ಕಡಿಮೆ ಮಾಡಿಕೊಳ್ಳಬೇಕು. ಕೆಎಸ್‌ಆರ್‌ಪಿ ಕಮಾಂಡೊಗಳು ತೂಕ ಇಳಿಸಿಕೊಂಡವರ ಪಟ್ಟಿಯನ್ನ ಏಪ್ರಿಲ್ 30 ಒಳಗೆ ಸಿದ್ದಪಡಿಸಬೇಕು. ತೂಕ ಇಳಿಸಲು ಪ್ರತಿ ದಿನ 5 ಕಿಲೋ ಮೀಟರ್ ವಾಕಿಂಗ್, ದೈಹಿಕ ಚಟುವಟಿಕೆ ಮಾಡಬೇಕೆಂದು ಆದೇಶಿಸಿದ್ದಾರೆ.