ETV Bharat / state

ಪರಿಹಾರ ಹಣ ಸಿಗದೆ ಹೆದ್ದಾರಿಗೆ ಬ್ಯಾರಿಕೇಡ್ ಹಾಕಿದ ಜಮೀನು ಮಾಲೀಕ! - ಬಾಶೆಟ್ಟಿಹಳ್ಳಿ ಗ್ರಾಮದ ಹಲವು ರೈತರ ಜಮೀನು ಸ್ವಾಧೀನ

ಭೂ ಸ್ವಾಧೀನವಾಗಿ 5 ವರ್ಷವಾದರೂ ಪರಿಹಾರ ಹಣ ಕೈಗೆ ಸಿಕ್ಕಿಲ್ಲ. ಸಾಲದ ಕಂತು ಕಟ್ಟುವಂತೆ ಬ್ಯಾಂಕ್​​ನಿಂದ ನೋಟಿಸ್​​ಗಳು ಬರುತ್ತಿವೆ. ಇದರಿಂದ ನೊಂದ ಉಮಾಶಂಕರ್ ಹೆದ್ದಾರಿಗಾಗಿ ಭೂ ಸ್ವಾಧೀನವಾದ ತಮ್ಮ ಜಾಗದಲ್ಲಿ ಹೆದ್ದಾರಿಗೆ ಅಡ್ಡವಾಗಿ ಬ್ಯಾರಿಕೇಡ್ ಹಾಕಿದ್ದಾರೆ.

kr-dcl-is-no-compensation-money-barricaded-land-owner
ಹೆದ್ದಾರಿಗೆ ಬ್ಯಾರಿಕೇಡ್ ಹಾಕಿದ ಜಮೀನು ಮಾಲೀಕ
author img

By

Published : Jan 29, 2021, 9:38 PM IST

Updated : Jan 29, 2021, 10:09 PM IST

ದೊಡ್ಡಬಳ್ಳಾಪುರ: ರಾಜ್ಯ ಹೆದ್ದಾರಿ ಅಭಿವೃದ್ಧಿಗಾಗಿ ರೈತರಿಂದ ಜಮೀನು ಸ್ವಾಧೀನ ಮಾಡಿಕೊಂಡ ಕೆಆರ್​​ಡಿಸಿಎಲ್, ರಸ್ತೆ ಕಾಮಾಗಾರಿ ಪೂರ್ಣಗೊಂಡು ಸುಂಕ ವಸೂಲಿ ಮಾಡುತ್ತಿದೆ. ಆದರೆ ಜಮೀನು ಕಳೆದುಕೊಂಡವರಿಗೆ 5 ವರ್ಷವಾದರು ಪರಿಹಾರ ಸಿಕ್ಕಿಲ್ಲ. ಇದರಿಂದ ನೊಂದ ಜಮೀನು ಮಾಲೀಕ ಹೆದ್ದಾರಿಯಲ್ಲಿ ಬ್ಯಾರಿಕೇಡ್ ಹಾಕಿ ನನ್ನ ಸ್ವತ್ತಿನಲ್ಲಿ ಯಾರೂ ಓಡಾಡದಂತೆ ಬೋರ್ಡ್ ಹಾಕಿದ್ದಾರೆ.

ಹೆದ್ದಾರಿಗೆ ಬ್ಯಾರಿಕೇಡ್ ಹಾಕಿದ ಜಮೀನು ಮಾಲೀಕ

ಓದಿ: ದ್ವೇಷ ಭಾವನೆ ಮೂಡಿಸುವ ಟ್ವೀಟ್ ಆರೋಪ: ರಾಜ್‌ದೀಪ್ ಸರ್ದೇಸಾಯಿ, ಶಶಿ ತರೂರ್​​​ ವಿರುದ್ಧ ಎಫ್ಐಆರ್​​​!

ಯಲಹಂಕ-ಹಿಂದೂಪುರ ರಾಜ್ಯ ಹೆದ್ದಾರಿ-9ರ ರಸ್ತೆ ಅಭಿವೃದ್ಧಿಗಾಗಿ ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮ ನಿಯಮಿತ (ಕೆಆರ್​​ಡಿಸಿಎಲ್) 2015ರಲ್ಲಿ ಭೂ ಸಾಧ್ವೀನಕ್ಕಾಗಿ ನೋಟಿಫಿಕೇಷನ್ ಹೊರಡಿಸಿತ್ತು. ಈ ರಸ್ತೆ ದೊಡ್ಡಬಳ್ಳಾಪುರ ತಾಲೂಕಿನ ಬಾಶೆಟ್ಟಿಹಳ್ಳಿ ಪಟ್ಟಣದ ಮೂಲಕ ಹಾದು ಹೋಗಿದ್ದು, ರಸ್ತೆ ಅಗಲೀಕರಣಕ್ಕಾಗಿ ಬಾಶೆಟ್ಟಿಹಳ್ಳಿ ಗ್ರಾಮದ ಹಲವು ರೈತರ ಜಮೀನು ಸ್ವಾಧೀನಕ್ಕೆ ಒಳಪಟ್ಟಿತ್ತು.

ರಸ್ತೆ ಅಭಿವೃದ್ಧಿಗೆ ತಡೆ ಮಾಡುವುದಾಗಲಿ, ತೊಂದರೆ ನೀಡುವುದಾಗಲಿ ಮಾಡಲೇಬಾರದೆಂದು ನೋಟಿಫಿಕೇಷನ್​​ನಲ್ಲಿ ಹೇಳಲಾಗಿತ್ತು. ಇದರಿಂದ ಹೆದರಿದ ರೈತರು ರಸ್ತೆ ಅಭಿವೃದ್ಧಿಗೆ ಜಮೀನು ಕೊಡಲು ಒಪ್ಪಿಕೊಂಡರು. ಜೊತೆಗೆ ಮುಚ್ಚಳಿಕೆ ಸಹ ಬರೆದು ಕೊಟ್ಟಿದ್ದರು. ರಸ್ತೆ ಪೂರ್ಣಗೊಂಡು ಕಳೆದ ಎರಡು ವರ್ಷಗಳಿಂದ ಟೋಲ್ ಸುಂಕ ಸಹ ವಸೂಲಿ ಮಾಡಲಾಗುತ್ತಿದೆ. ಭೂ ಸ್ವಾಧೀನವಾಗಿ 5 ವರ್ಷಗಳಾದರೂ ಜಮೀನು ಕಳೆದುಕೊಂಡ ರೈತರಿಗೆ ಮಾತ್ರ ಪರಿಹಾರ ಸಿಕ್ಕಿಲ್ಲವಂತೆ.

ಯಲಹಂಕ-ಹಿಂದೂಪುರ ರಾಜ್ಯ ಹೆದ್ದಾರಿ ಅಭಿವೃದ್ಧಿಗಾಗಿ ಬಾಶೆಟ್ಟಿಹಳ್ಳಿ ಪಟ್ಟಣದ ಜೆ.ಎಸ್.ಉಮಾಶಂಕರ್ ಎಂಬುವರ 6 ಗುಂಟೆ ಜಾಗ ಸ್ವಾಧೀನವಾಗಿದೆ. ಭೂ ಸ್ವಾಧೀನದಿಂದ ಪರಿಹಾರದ ಹಣ ಬರುತ್ತೆ ಎಂಬ ಧೈರ್ಯದಲ್ಲಿ ಬ್ಯಾಂಕ್​​ನಿಂದ ಸಾಲ ತಂದು ಹೆದ್ದಾರಿ ಬದಿಯಲ್ಲಿ ಹೋಟೆಲ್ ಆರಂಭಿಸಿದ್ದಾರೆ. ಆದರೆ ಕೋವಿಡ್-19 ಹಿನ್ನೆಲೆ ಹೋಟೆಲ್ ಉದ್ಯಮ ನೆಲಕಚ್ಚಿತು. ಇದೀಗ ಭೂ ಸ್ವಾಧೀನವಾಗಿ 5 ವರ್ಷವಾದರೂ ಪರಿಹಾರ ಹಣ ಕೈಗೆ ಸಿಕ್ಕಿಲ್ಲ. ಸಾಲದ ಕಂತು ಕಟ್ಟುವಂತೆ ಬ್ಯಾಂಕ್​​ನಿಂದ ನೋಟಿಸ್​​ಗಳು ಬರುತ್ತಿವೆ. ಇದರಿಂದ ನೊಂದ ಉಮಾಶಂಕರ್ ಹೆದ್ದಾರಿಗಾಗಿ ಭೂ ಸ್ವಾಧೀನವಾದ ತಮ್ಮ ಜಾಗದಲ್ಲಿ ಹೆದ್ದಾರಿಗೆ ಅಡ್ಡವಾಗಿ ಬ್ಯಾರಿಕೇಡ್ ಹಾಕಿದ್ದಾರೆ. ಈ ಜಾಗವನ್ನು ಸ್ವಾಧೀನಗೊಳಿಸಿಕೊಳ್ಳಲು ಹಣ ನೀಡದೆ ತಮ್ಮ ಸ್ವಂತ ಜಾಗದಲ್ಲಿ ರಸ್ತೆ ನಿರ್ಮಾಣ ಮಾಡಿರುವುದರಿಂದ ನಮ್ಮ ಜಾಗದಲ್ಲಿ ಯಾರೂ ಓಡಾಡಬಾರದೆಂದು ಬೋರ್ಡ್ ಹಾಕಿದ್ದಾರೆ.

ಪರಿಹಾರದ ಹಣಕ್ಕಾಗಿ ಕೆಆರ್​​ಡಿಸಿಎಲ್ ಅಧಿಕಾರಿಗಳನ್ನು ಕೇಳಿದರೆ, ಸರ್ಕಾರ ನಮಗೆ ಸಂಬಳ ಕೊಟ್ಟಿಲ್ಲವೆಂದು ಹೇಳುತ್ತಾರಂತೆ. ಸದ್ಯ ಈ ಜಾಗದ ಮಾರುಕಟ್ಟೆ ದರ ಒಂದು ಗುಂಟೆಗೆ 25ರಿಂದ 35 ಲಕ್ಷ ಬೆಲೆ ಬಾಳುತ್ತೆ. ಆದರೆ ಕೆಆರ್​​ಡಿಸಿಎಲ್ ಪ್ರತಿ ಗುಂಟೆ ಜಾಗಕ್ಕೆ 6 ಲಕ್ಷ ಪರಿಹಾರ ನೀಡುವುದಾಗಿ ಹೇಳುತ್ತಿದೆ. ಸಮೀಪದಲ್ಲಿಯೇ ರಾಷ್ಟ್ರೀಯ ಹೆದ್ದಾರಿ 207ರ ರಸ್ತೆ ಅಭಿವೃದ್ಧಿಗಾಗಿ ರೈತರರಿಂದ ಭೂ ಸ್ವಾಧೀನ ಮಾಡಿಕೊಳ್ಳಲಾಗಿದೆ. ಇನ್ನೂ ರಸ್ತೆಯೇ ನಿರ್ಮಾಣವಾಗಿಲ್ಲ, ಆಗಲೇ ರೈತರಿಗೆ ಪರಿಹಾರದ ಹಣ ಸಿಕ್ಕಿದೆ. ನಾವೇನು ರೈತರಲ್ವಾ ಎಂದು ಕೆಆರ್​ಡಿಸಿಎಲ್ ವಿರುದ್ಧ ಅಕ್ರೋಶ ವ್ಯಕ್ತಪಡಿಸಿದ್ದಾರೆ.

Last Updated : Jan 29, 2021, 10:09 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.